ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Nandi Hills : ನಂದಿ ಬೆಟ್ಟ ಪ್ರವೇಶದ ಸಮಯ ಬದಲಾವಣೆ: ಬೇಗ ಹೋಗಿ ಸನ್‌ರೈಸ್ ನೋಡಿ

|
Google Oneindia Kannada News

ನವದೆಹಲಿ, ನ.18: ನಂದಿ ಬೆಟ್ಟಕ್ಕೆ ಹೋಗೋದು ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಆ ಚುಮುಚುಮು ಚಳಿ, ಬೆಟ್ಟಗಳ ಸಾಲು, ಕಣ್ಣಿಗೆ ಹಬ್ಬವುಂಟುಮಾಡುವ ಸೂರ್ಯೋದಯ...ಅಬ್ಬಬ್ಬಾ...ಕೇಳಲು ಇಚ್ಟು ಚೆಂದ ಅಂದರೆ ನೋಡಲು ಇನ್ನೆಷ್ಟು ಚಂದ ಅಲ್ಲವೇ.

ಇಂತಹ ಸೋಬಗನ್ನು ಸವಿಯಲು ಬರುವ ಪ್ರವಾಸಿಗರು ಕಳೆದ ಕೆಲವು ವರ್ಷಗಳಿಂದ ಬೆಸರಕ್ಕೆ ಒಳಗಾಗಿದ್ದು ಸನ್‌ರೈಸ್ ನೋಡಲು ಆಗುವುದಿಲ್ಲ ಎಂದು. ಈಗ ಆ ಬೇಸರವೂ ಇರುವುದಿಲ್ಲ ಬಿಡಿ. ಕಾರಣವೆನೆಂದರೇ ನಂದಿ ಬೆಟ್ಟಕ್ಕೆ ಪ್ರವಾಸಿಗರ ಭೇಟಿಯ ಸಮಯ ಬದಲಾಗಿದೆ.

ನವೆಂಬರ್-ಡಿಸೆಂಬರ್‌ನಲ್ಲಿ ಭೇಟಿ ನೀಡಬೇಕಿರುವ ಕರ್ನಾಟಕದ ಪ್ರವಾಸಿ ಸ್ಥಳಗಳು ನವೆಂಬರ್-ಡಿಸೆಂಬರ್‌ನಲ್ಲಿ ಭೇಟಿ ನೀಡಬೇಕಿರುವ ಕರ್ನಾಟಕದ ಪ್ರವಾಸಿ ಸ್ಥಳಗಳು

ಇನ್ನು ಮುಂದೆ ಪ್ರವಾಸಿಗರು 5.30ಕ್ಕೆ ನಂದಿಬೆಟ್ಟಕ್ಕೆ ಪ್ರವೇಶ ಪಡೆಯಬಹುದು. ಈ ಮೂಲಕ ತಮ್ಮ ಕಣ್ಣುಗಳಿಗೆ ಹಬ್ಬದೂಟ ಮಾಡಿಸಬಹುದು. ಹೌದು, ನಂದಿ ಬೆಟ್ಟಕ್ಕೆ ಬರುವ ಪ್ರವಾಸಿಗರಿಗೆ 5.30ಕ್ಕೆ ಪ್ರವೇಶ ‌ನೀಡಲು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

Good News For Tourist, New Timings To Enter Nandi Hills

ಐತಿಹಾಸಿಕ ನಂದಿ ಬೆಟ್ಟದ ಪ್ರವಾಸಿಗರೊಂದಿಗೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಈ ಖುಷಿ ಸುದ್ದಿ ನೀಡಿದೆ. ಈ ಮೊದಲು ನಂದಿ ಬೆಟ್ಟಕ್ಕೆ ಬೆಳಗ್ಗೆ 6 ಗಂಟೆಗೆ ಪ್ರವೇಶವಿತ್ತು. ಆದರೆ ಜಿಲ್ಲಾಡಳಿತ ಹೊಸ ಆದೇಶ ಮಾಡಿದ್ದು, ಪ್ರವಾಸಿಗರು ಸನ್‌ರೈಸ್ ನೋಡಬಹುದು.

ಇತ್ತೀಚಿಗೆ ಸರ್ಕಾರದ ಅಪರ ಮುಖ್ಯ ‌ಕಾರ್ಯದರ್ಶಿ‌ ನೇತೃತ್ವದಲ್ಲಿ ‌ನಡೆದ ಸಭೆಯಲ್ಲಿ ‌ಪ್ರವಾಸಿಗರಿಗೆ ಬೆಳಗ್ಗೆ 5.30ಕ್ಕೆ ಪ್ರವೇಶ ನೀಡಲು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ‌ಹೇಳಿದ್ದಾರೆ. ಹೀಗಾಗಿ ಜಿಲ್ಲಾಧಿಕಾರಿ ಎನ್ ನಾಗರಾಜ್ ಬೆಳಗ್ಗೆ 5.30ಕ್ಕೆ ನಂದಿ ಬೆಟ್ಟಕ್ಕೆ ಪ್ರವೇಶ ‌ನೀಡಲು ಪೊಲೀಸರಿಗೆ ಸೂಚಿಸಿದ್ದಾರೆ.

Good News For Tourist, New Timings To Enter Nandi Hills

ಕೊರೊನಾ ಸಾಂಕ್ರಾಮಿಕದಿಂದ ಸಮಯವನ್ನು ಬದಲಿಸಲಾಗಿತ್ತು. ಈಗ ಕೊರೊನಾ ಪ್ರಕರಣಗಳು ಇಲ್ಲವಾಗಿ ಪರಿಸ್ಥಿತಿ ಸಹಜ ಸ್ಥಿತಿಗೆ ಬಂದಿರುವ ಕಾರಣ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇನ್ನು, ಬೆಳಗ್ಗೆ ಬೇಗನೆ ಪ್ರವೇಶ ನೀಡುವ ಕಾರಣ ಪ್ರವಾಸಿಗರು ಮುಂಜಾನೆಯೆ ನಂದಿ ಬೆಟ್ಟಕ್ಕೆ ತೆರಳಲಿದ್ದು, ಟ್ರಾಫಿಕ್ ಸಮಸ್ಯೆಯೂ ಕಡಿಮೆಯಾಗಲಿದೆ.

English summary
Nandi Hills: Good news for tourists , timings chaenged in Nandi hills entry, now they can enjoy the sunrise. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X