ಪಿಂಚಣಿದಾರರಿಗೂ ಗುಡ್ ನ್ಯೂಸ್: ರಾಜ್ಯ ಸರ್ಕಾರದಿಂದ ನಿವೃತ್ತಿ ವೇತನ ಹೆಚ್ಚಳ: ಆದೇಶದಲ್ಲಿ ಏನಿದೆ?

ಬೆಂಗಳೂರು: 7ನೇ ವೇತನ ಆಯೋಗದ ವರದಿ ಜಾರಿಗೊಳಿಸಿ ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ನೀಡಿದ್ದ ರಾಜ್ಯ ಸರ್ಕಾರ, ಈಗ ನಿವೃತ್ತಿ ವೇತನ ಹೆಚ್ಚಳ ಮಾಡಿ ಪಿಂಚಣಿದಾರರಿಗೂ ಗುಡ್ ನ್ಯೂಸ್ ಕೊಟ್ಟಿದೆ. ರಾಜ್ಯ ಸರ್ಕಾರದ ನಿವೃತ್ತ ನೌಕರರ ಪಿಂಚಣಿಯನ್ನು ಪರಿಷ್ಕರಣೆ ಮಾಡಿ ಬುಧವಾರ ಆರ್ಥಿಕ ಇಲಾಖೆ ಆದೇಶ ಹೊರಡಿಸಿದೆ.

ರಾಜ್ಯ ಸರ್ಕಾರದ ನಿವೃತ್ತ ನೌಕರರ ಪಿಂಚಣಿಯನ್ನು ಪರಿಷ್ಕರಣೆ ಮಾಡಲಾಗಿದೆ. ನಿವೃತ್ತಿ ವೇತನದ ಗರಿಷ್ಠ ಮಿತಿಯಲ್ಲಿ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.ಹೊಸ ಆದೇಶದ ಪ್ರಕಾರ ನಿವೃತ್ತ ಸರ್ಕಾರಿ ನೌಕರರ ಕನಿಷ್ಠ ಪಿಂಚಣಿಯನ್ನು 8,500 ರೂಪಾಯಿಗಳಿಂದ 13,500 ರೂಪಾಯಿಗಳಿಗೆ ಹೆಚ್ಚಳ ಮಾಡಲಾಗಿದೆ. ಇನ್ನು ಮುಂದೆ ಪಿಂಚಣಿಗೆ ಅರ್ಹರಾದ ನಿವೃತ್ತ ರಾಜ್ಯ ಸರ್ಕಾರಿ ನೌಕರರ ಕನಿಷ್ಠ ಪೆನ್ಶನ್​​ನಲ್ಲಿ 5 ಸಾವಿರ ರೂಪಾಯಿ ಏರಿಕೆಯಾಗಲಿದೆ.

Good News For Pensioners Pension Revision By Karnataka Government

ಹೊಸ ಆದೇಶದ ಪ್ರಕಾರ ನಿವೃತ್ತ ಸರ್ಕಾರಿ ನೌಕರರ ಕನಿಷ್ಠ ಪಿಂಚಣಿಯನ್ನು 8,500 ರೂಪಾಯಿಗಳಿಂದ 13,500 ರೂಪಾಯಿಗಳಿಗೆ ಹೆಚ್ಚಳ ಮಾಡಲಾಗಿದೆ. ಇನ್ನು ಮುಂದೆ ಪಿಂಚಣಿಗೆ ಅರ್ಹರಾದ ನಿವೃತ್ತ ರಾಜ್ಯ ಸರ್ಕಾರಿ ನೌಕರರ ಕನಿಷ್ಠ ಪೆನ್ಶನ್​​ನಲ್ಲಿ 5 ಸಾವಿರ ರೂಪಾಯಿ ಏರಿಕೆಯಾಗಲಿದೆ. ಕನಿಷ್ಠ ಪಿಂಚಣಿ ಜೊತೆಗೆ ರಾಜ್ಯ ಸರ್ಕಾರವು ಗರಿಷ್ಠ ಪಿಂಚಣಿಗೂ ಮಿತಿಯನ್ನ ನಿಗದಿಪಡಿಸಿದೆ. ಯಾವುದೇ ನಿವೃತ್ತ ರಾಜ್ಯ ಸರ್ಕಾರಿ ನೌಕರರ ಪಿಂಚಣಿಯು 1 ಲಕ್ಷದ 20 ಸಾವಿರದ 600 ರೂ.ಗಳಿಗೆ ಮೀರುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಇಲ್ಲಿಯ ತನಕ ಗರಿಷ್ಠ ನಿವೃತ್ತಿ ವೇತನ 75,300 ರೂ.ಗಳಾಗಿತ್ತು. ಗರಿಷ್ಠ ಮಿತಿಯಲ್ಲಿ 45,300 ರೂ.ಗಳಷ್ಟು ಹೆಚ್ಚಳ ಮಾಡಲಾಗಿದೆ.

ರಾಜ್ಯ ಸರ್ಕಾರಕ್ಕೆ ಏಳನೇ ವೇತನ ಆಯೋಗವು ಶಿಫಾರಸು ಮಾಡಿದಂತೆ ನಿವೃತ್ತ ಸರ್ಕಾರಿ ನೌಕರರ ಪಿಂಚಣಿಯನ್ನು ಆರ್ಥಿಕ ಇಲಾಖೆ ಪರಿಷ್ಕರಣೆ ಮಾಡಿದೆ. ನಿವೃತ್ತಿ ವೇತನ ಮತ್ತು ಕುಟುಂಬ ನಿವೃತ್ತಿ ವೇತನ ಹೆಚ್ಚಳವು 2022ರ ಜುಲೈ 1ರಿಂದ ಜಾರಿಗೆ ಬರುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಪಿಂಚಣಿ ಪರಿಷ್ಕರಣೆಯ ಆರ್ಥಿಕ ಲಾಭವು ಈ ವರ್ಷದ ಆಗಸ್ಟ್ 1ರಿಂದ ಅನ್ವಯವಾಗುತ್ತದೆ ಎಂದು ಹಣಕಾಸು ಇಲಾಖೆಯ ಆದೇಶದಲ್ಲಿ ಪ್ರಸ್ತಾಪಿಸಲಾಗಿದೆ.

ಒಂದು ಕುಟುಂಬದ ಇಬ್ಬರು ಅಥವಾ ಹೆಚ್ಚಿನ ಸದಸ್ಯರಿಗೆ ಕುಟುಂಬ ನಿವೃತ್ತಿ ವೇತನವನ್ನು ಮಂಜೂರು ಮಾಡುವ ಪ್ರಕರಣಗಳಲ್ಲಿ, ಈ ಆದೇಶದನ್ವಯ ಹೆಚ್ಚಳವಾಗುವ ಪಿಂಚಣಿ ಮೊತ್ತವನ್ನು ಪ್ರತಿ ಸದಸ್ಯನ ಪಾಲಿಗೆ ಅನ್ವಯಿಸಿ ನಿರ್ಧರಿಸತಕದ್ದು ಮತ್ತು ಅದು ಅನ್ವಯಿಸುವ ನಿಯಮಗಳು ಅಥವಾ ಆದೇಶಗಳಲ್ಲಿ ನಿರ್ಧಿಷ್ಟಪಡಿಸಿದ ಮಿತಿಗೊಳಪಟ್ಟಿರುತ್ತದೆ.

ಒಟ್ಟು ಕುಟುಂಬ ನಿವೃತ್ತಿ ವೇತನವನ್ನು ಮೇಲ್ಕಾಣಿಸಿದ ಸೂಚನೆಗಳನ್ವಯ ಕ್ರೋಢೀಕರಿಸಿ ಒಂದೇ ಖಜಾನೆಯಲ್ಲಿ ಪಾವತಿಸುತ್ತಿದ್ದಲ್ಲಿ ಸದರಿ ಪಾಲುಗಳ ಕ್ರೋಢೀಕರಣ ಮತ್ತು ಪಾಲುಗಳ ನಿರ್ಧರಣೆಗಳನ್ನು ಸಂಬಂಧಿಸಿದ ಖಜಾನಾಧಿಕಾರಿಯೇ ಲೆಕ್ಕಹಾಕತಕ್ಕದ್ದು. ಬೇರೆ ಬೇರೆ ಖಜಾನೆಗಳಲ್ಲಿ ಪಾಲುಗಳನ್ನು ಪಡೆಯಲಾಗುತ್ತಿದ್ದ ಪ್ರಕರಣಗಳಲ್ಲಿ ಮಹಾಲೇಖಪಾಲರನ್ನು ಸಮಾಲೋಚಿಸುವುದು.

ದಿನಾಂಕ: 01.07.2022ಕ್ಕೂ ಮುಂಚೆ ಸೇವೆಯಿಂದ ನಿವೃತ್ತರಾದ ಅಥವಾ ಸೇವಾವಧಿಯಲ್ಲಿರುವಾಗಲೇ ಮರಣ ಹೊಂದಿದ ನಿವೃತ್ತಿ ವೇತನದಾರರು/ಕುಟುಂಬ ನಿವೃತ್ತಿ ವೇತನದಾರರ ಪ್ರಕರಣಗಳಲ್ಲಿ ಈ ಆದೇಶದನ್ವಯ ಹೆಚ್ಚಳವಾಗುವ ನಿವೃತ್ತಿ ವೇತನ ಮತ್ತು ಕುಟುಂಬ ನಿವೃತ್ತಿ ವೇತನದ ಮೊತ್ತವನ್ನು ಅನ್ವಯಿಸುವ ನಿವೃತ್ತಿ ವೇತನದಾರರು / ಕುಟುಂಬ ನಿವೃತ್ತಿ ವೇತನದಾರರಿಗೆ ಈ ಮೇಲಿನ ನಿಬಂಧನೆಗಳ ಪೂರೈಕೆಗೊಳಪಟ್ಟು ಮಹಾಲೇಖಪಾಲರಿಂದ ಯಾವುದೇ ಪ್ರಾಧೀಕರಣ ಪಡೆಯದೇ ಖಜಾನಾಧಿಕಾರಿಯೇ ಪಾವತಿಸತಕ್ಕದ್ದು.

ರಾಜ್ಯ ಸರ್ಕಾರಿ ನೌಕರರ ಅವಲಂಬಿತರ ಕುಟುಂಬದವರ ಪಿಂಚಣಿಯನ್ನೂ ಸಹ ಪರಿಷ್ಕರಣೆ ಮಾಡಲಾಗಿದೆ. ಕನಿಷ್ಠ ನಿವೃತ್ತಿ ವೇತನವನ್ನು 13,500 ರೂ.ಗಳಿಗೆ ನಿಗದಿಗೊಳಿಸಲಾಗಿದ್ದು, ಹಿಂದಿನ ಪಿಂಚಣಿಗಿಂತ 5 ಸಾವಿರ ರೂಪಾಯಿ ಏರಿಸಲಾಗಿದೆ. ಹಾಗೆಯೇ ಗರಿಷ್ಠ ಪಿಂಚಣಿಗೂ ಮಿತಿಯನ್ನು ನಿಗದಿಪಡಿಸಲಾಗಿದೆ. ಅವಲಂಬಿತರ ನಿವೃತ್ತಿ ವೇತನವು 80,400 ರೂಪಾಯಿ ಮೀರುವಂತಿಲ್ಲ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಈ ಹಿಂದೆ ಕುಟುಂಬದ ಅವಲಂಬಿತರ ಗರಿಷ್ಠ ನಿವೃತ್ತಿ ವೇತನ 45,180 ರೂ.ಗಳಿದ್ದು 35,220 ರೂ.ಗಳಿಗೆ ಹೆಚ್ಚಳ ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+