KSRTC: ಚಿಲ್ಲರೆಗಾಗಿ ಜಗಳವಾಡುವ ಕಂಡಕ್ಟರ್ ಹಾಗೂ ಪ್ರಯಾಣಿಕರಿಗೆ ಗುಡ್ ನ್ಯೂಸ್ ಕೊಟ್ಟ ಕೆಎಸ್‌ಆರ್‌ಟಿಸಿ
ಬೆಂಗಳೂರೂ ಜುಲೈ 5: ಪ್ರಯಾಣಿಕರಿಗೆ ಅನುಕೂಲವಾಗಲೆಂದು ಗೂಗಲ್ ಪೇ, ಫೋನ್ ಪೇ ಮೂಲಕ ಟಿಕೆಟ್ ಹಣ ಪಾವತಿಸುವ ವ್ಯವಸ್ಥೆಯನ್ನು ಕೆಎಸ್‌ಆರ್‌ಟಿಸಿ ಜಾರಿಗೆ ತರಲು ನಿರ್ಧರಿಸಿದೆ. ನಿತ್ಯ ಪ್ರಯಾಣಿಕರು ಹಾಗೂ ಕಂಡಕ್ಟರ್ ನಡುವೆ ಚಿಲ್ಲರೆಗಾಗಿ ಗಲಾಟೆ ನಡೆಯುತ್ತಲೇ ಇರುತ್ತದೆ. ಇದನ್ನು ತಪ್ಪಿಸಲು ಕೆಎಸ್‌ಆರ್‌ಟಿಸಿ ಮುಂದಾಗಿದೆ.
ನಿತ್ಯ ಲಕ್ಷಾಂತರ ಜನ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ವಿವಿಧ ಸ್ಥಳಗಳಿಗೆ ಪ್ರಯಾಣ ಮಾಡುತ್ತಾರೆ. ಕೆಲ ಬಾರಿ ಟಿಕೆಟ್ ಪಡೆಯಲು ಕ್ಯಾಶ್ ನೀಡಿದಾಗ ಚಿಲ್ಲರೆಗಾಗಿ ಕಂಡಕ್ಟರ್ ಹಾಗೂ ಪ್ರಯಾಣಿಕರ ನಡುವೆ ಜಗಳಗಳು ಆಗಿರುವುದಿದೆ. ಚಿಲ್ಲರೆ ಇಲ್ಲದೆ ಪ್ರಯಾಣಿಕರು ಬಸ್ ಇಳಿಯುವಂತಹ ಪರಿಸ್ಥಿತಿಯನ್ನೂ ಎದುರಿಸಿದ್ದಾರೆ.

ಹೀಗಾಗಿ ಪ್ರಯಾಣಿಕರ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಕೆಎಸ್‌ಆರ್‌ಟಿಸಿ ಗೂಗಲ್ ಪೇ, ಫೋನ್ ಪೇ ಮೂಲಕ ಹಣ ಪಾವತಿಸುವ ವ್ಯವಸ್ಥೆ ಜಾರಿಗೆ ತರಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ವ್ಯವಸ್ಥೆ ಜಾರಿಗೆಯಾದರೆ ಕ್ಯಾಶ್ ಬದಲು ಪ್ರಯಾಣಿಕರು ಸಲೀಸಾಗಿ ಗೂಗಲ್ ಪೇ, ಫೋನ್ ಪೇ ಮೂಲಕ ಹಣ ಪಾವತಿಸಬಹುದು. ಕೆಎಸ್ಆರ್ಟಿಸಿಯಲ್ಲಿ ಪ್ರಯಾಣಿಸುವ ಪ್ರಯಾಣಿಕರ ಬಳಿ ಗೂಗಲ್ ಪೇ, ಫೋನ್ ಪೇ ಇದ್ದರೆ ಆನ್‌ಲೈನ್ ಪೇಮೆಂಟ್ ಮಾಡಬಹುದು.
ಇದಕ್ಕಾಗಿ ಕೆಎಸ್‌ಆರ್‌ಟಿಸಿ ಖಾಸಗಿ ಕಂಪನಿಯೊಂದರಿಂದ 10245 ಸಾವಿರ ಇಟಿಎಂ ಟಿಕೆಟ್ ಮಷೀನ್‌ಗಳನ್ನು ಖರೀದಿಸಲು ಮುಂದಾಗಿದೆ. ಒಂದು ಮಷೀನ್‌ಗೆ ಪ್ರತಿ ತಿಂಗಳು 645 ರೂಪಾಯಿ ಬಾಡಿಗೆ ಆಧಾರದ ಮೇಲೆ ಖರೀದಿಸಲಾಗುತ್ತದೆ. ಈ ಮಷಿನ್‌ಗಳಲ್ಲಿ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಬಳಸಿ ಪ್ರಯಾಣಿಕರು ಟಿಕೆಟ್ ಪಡೆಯಬಹುದಾಗಿದೆ. ಹಣ ಪಾವತಿಸಿಯೇ ಟಿಕೆಟ್ ಪಡೆಯಬೇಕು ಎಂದಿಲ್ಲ.

ಸಾಮಾನ್ಯವಾಗಿ ಇಂದು ಆನ್‌ಲೈನ್ ಪೇಮೆಂಟ್ ಅನ್ನು ಜನ ಹೆಚ್ಚಾಗಿ ಬಳಕೆ ಮಾಡುತ್ತಾರೆ. ಕೈಯಲ್ಲಿ ದುಡ್ಡು ಇಲ್ಲ ಅಂದರೆ ಮೊಬೈಲ್ ಫೋನ್ ಇದ್ದರೆ ಸಾಕು ಹಣ ಪಾವತಿ ಮಾಡುವ ಮೂಲಕ ಎಲ್ಲಿಗೆ ಬೇಕಾದರೂ ಪ್ರಯಾಣ ಮಾಡಬಹುದು. ಕೆಲ ಬಾರಿ ಹಣ ಕೈಯಲ್ಲಿ ಇಲ್ಲದೇ ಇದ್ದಾಗ, ಕಳೆದುಕೊಂಡಾಗ ಅಥವಾ ಕಡಿಮೆ ಬಿದ್ದಾಗ ಆನ್‌ಲೈನ್ ಮೂಲಕ ಹಣ ಪೇ ಮಾಡಿ ಪ್ರಯಾಣ ಮಾಡಬಹುದು.

ಕಂಡಕ್ಟರ್‌ಗಳಿಗೂ ಇದು ಅನುಕೂಲವಾಗಲಿದೆ. ತಮ್ಮ ಬಳಿ ಚಿಲ್ಲರೆ ಇಲ್ಲದೇ ಇದ್ದಾಗ ಪ್ರಯಾಣಿಕರೊಂದಿಗೆ ಜಗಳವಾಡುವುದು ತಪ್ಪುತ್ತದೆ. ಅಲ್ಲದೆ ಈಗಿರುವ ಮಷಿನ್‌ಗಳು ಕೈಕೊಡುವುದರಿಂದ ಕೆಲ ಬಾರಿ ಸಮಸ್ಯೆಗಳು ಆಗಿರುವುದು ಇದೆ. ಆದರೆ ಹೊಸ ಎಟಿಎಂಗಳಲ್ಲಿ ಈ ಸಮಸ್ಯೆ ಎದುರಾಗುವುದಿಲ್ಲ. ಹೀಗಾಗಿ ಇನ್ಮುಂದೆ ಪ್ರಯಾಣಿಕರಿಗೆ ಇಟಿಎಂ ಮಷಿನ್‌ಗಳನ್ನು ಸ್ಕ್ಯಾನ್ ಮಾಡಿ ಹಣ ಪಾವತಿಸಬಹುದಾಗಿದೆ.
20 ವೋಲ್ವೋ ಮಲ್ಟಿಆಕ್ಸೆಲ್ ಬಸ್ ಖರೀದಿ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು (ಕೆಎಸ್‌ಆರ್‌ಟಿಸಿ) ಅತ್ಯಾಧುನಿಕ ಮಾದರಿಯ 20 ವೋಲ್ವೋ ಮಲ್ಟಿಆಕ್ಸೆಲ್ ಸೀಟರ್ ಪ್ರೋಟೋಟೈಪ್ (9600) ಬಸ್‌ಗಳನ್ನು ಖರೀದಿಸಲು ಮುಂದಾಗಿದೆ.
9600 VOLVO Multiaxle ಸೀಟರ್ ಪ್ರೋಟೋಟೈಪ್ ಬಸ್ ಇದಾಗಿದೆ. ಈ ಬಸ್‌ಗಳು ಹ್ಯಾಲೊಜೆನ್ ಹೆಡ್‌ಲೈಟ್, ಡೇ ರನ್ನಿಂಗ್ ಲೈಟ್‌ಗಳೊಂದಿಗೆ ಬಾಹ್ಯ ಸ್ಕ್ಯಾಂಡಿನೇವಿಯನ್ ವಿನ್ಯಾಸ ಹೊಂದಿವೆ. ಶಕ್ತಿಶಾಲಿ ಹ್ಯಾಲೋಜೆನ್ ಹೆಡ್‌ಲೈಟ್‌ಗಳು ಮತ್ತು ಡೇ ರನ್ನಿಂಗ್ ಲೈಟ್‌ಗಳೊಂದಿಗೆ ಹೊಸ ಪ್ಲಶ್ ಇಂಟೀರಿಯರ್ಸ್ ಮತ್ತು ಬಾಹ್ಯ ಸ್ಕ್ಯಾಂಡಿನೇವಿಯನ್ ವಿನ್ಯಾಸ ಹೊಂದಿರುವುದರಿಂದ ಕಣ್ಣು ತಣಿಸುವ ಸೌಂದರ್ಯ ಹೊಂದಿದೆ.
ಏರೋಡೈನಾಮಿಕ್ ವಿನ್ಯಾಸದಿಂದ ಉತ್ತಮ ಇಂಧನ ದಕ್ಷತೆ ಹೊಂದಿದೆ. ನವೀನ ತಂತ್ರಜ್ಞಾನ/ತಾಂತ್ರಿಕತೆಯಿಂದ ಸುಧಾರಿತ ಇಂಜಿನ್ ಹೊಂದಿದ್ದು ಅತ್ಯುತ್ತಮ ಕಾರ್ಯಕ್ಷಮತೆ ಹಾಗೂ ಸುಧಾರಿತ ಇಂಜಿನ್ ಕೆಎಂಪಿಎಲ್ ನೀಡುತ್ತದೆ. ಒಟ್ಟಾರೆ ಬಸ್ಸಿನ ಉದ್ದದಲ್ಲಿ 3.5% ಹೆಚ್ಚಳ ಇರುವುದರಿಂದ ಸಲೂನ್‌ನಲ್ಲಿ ಪ್ರಯಾಣಿಕರ ಆಸನಗಳ ನಡುವಿನ ಅಂತರ ಹೆಚ್ಚಾಗಿದೆ. ಒಟ್ಟಾರೆ ಬಸ್ಸಿನ ಎತ್ತರದಲ್ಲಿ 5.6% ಹೆಚ್ಚಳ ಇರುವುದರಿಂದ ಹೆಚ್ಚಿನ ಹೆಡ್ ರೂಂ ಇರುತ್ತದೆ.











Click it and Unblock the Notifications