ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರ ಕನ್ನಡದ ಮಂಕಿಯಲ್ಲಿ 13 ಸೆಂಮೀ ಮಳೆ

By Madhusoodhan
|
Google Oneindia Kannada News

ಬೆಂಗಳೂರು, ಜೂನ್, 13: ಮಾನ್ಸೂನ್ ಮಾರುತಗಳು ರಾಜ್ಯದಲ್ಲಿ ತನ್ನ ಆರ್ಭಟ ತೋರುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಮಂಕಿಯಲ್ಲಿ ಅತಿಹೆಚ್ಚು ಅಂದರೆ 13 ಸೆಂ ಮೀ ಮಳೆಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕುಮಟದಲ್ಲಿ 9 ಸೆಂ ಮೀ ಮಳೆಯಾಗಿದೆ.

ಅಂಕೋಲಾ, ಕಾರವಾರ, ಕುಂದಾಪುರ, ಶಿರಾಲಿ, ಗೇರುಸೊಪ್ಪ, ಆನವಟ್ಟಿ, ಕೆರೂರ್, ಬಾಗಲಕೋಟೆ, ಮಂಗಳೂರು, ಮಂಚಿಕೇರಿ, ಹಳಿಯಾಳ, ತಾಳಗುಪ್ಪ, ತ್ಯಾಗರ್ತಿ, ಶಿಕಾರಿಪುರ ಸೇರಿದಂತೆ ಮಲೆನಾಡು ಭಾಗದಲ್ಲಿ ವ್ಯಾಪಕ ಮಳೆಯಾಗಿದೆ. ರಾಜ್ಯದ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಮುಂದಿನ 24 ಗಂಟೆ ಅವಧಿಯಲ್ಲಿ ಭಾರೀ ಮಳೆಯಾಗುವ ನಿರೀಕ್ಷೆ ಇದೆ ಎಂದು ಹವವಾಮಾನ ಇಲಾಖೆ ತಿಳಿಸಿದೆ.[ಹುಬ್ಬಳ್ಳಿಯಲ್ಲಿ ಜಿಟಿಜಿಟಿ ಮಳೆಗೆ ನಲಿದಾಡಿದ ಮಿರ್ಚಿ ಮಂಡಕ್ಕಿ]

rain

ಬೆಂಗಳೂರು ಹವಾಮಾನವೇನು?
ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿದ್ದು ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ನಿಂದ 29 ಡಿಗ್ರಿ ಸೆಲ್ಸಿಯಸ್ ನಡುವೆ ಇರಲಿದೆ. ಸಂಜೆ ಅಥವಾ ರಾತ್ರಿ ಸಾಧಾರಣ ಮಳೆ ಬೀಳುವ ಸಂಭವವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.[ಕೊಚ್ಚಿಗೆ ಬಂದ ಮಳೆರಾಯನಿಗೆ ಯುವತಿಯರ ಸ್ವಾಗತ]

ಕೃಷಿಗೆ ವೇಗ
ಜೂನ್ ಆರಂಭದಲ್ಲಿಯೇ ಮುಂಗಾರು ಆರಂಭವಾಗಿದ್ದರೆ ಇಷ್ಟೊತ್ತಿಗೆ ಬಿತ್ತನೆ ಕೆಲಸ ಆರಂಭವಾಗಬೇಕಿತ್ತು. ಮುಂಗಾರು ಕೊಂಚ ತಡವಾಗಿ ಆಗಮಿಸಿದ್ದರಿಂದ ಇದೀಗ ಕೃಷಿ ಚಟುವಟಿಕೆಗಳು ವೇಗವಾಗಿದೆ

English summary
Weather Report: Rainfall occurred at most places over Coastal Karnataka, at many places over South Interior Karnataka and at a few places over North Interior Karnataka. This is good News for Farmer.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X