Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ
Gold: ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ಉತ್ಖನನ ಪ್ರಕ್ರಿಯೆ ಪೂರ್ಣಗೊಂಡಿದೆ. ಈ ಉತ್ಖನನದಲ್ಲಿ ವಿಜಯನಗರ ಕಾಲದ ಆಭರಣಗಳು, 500-600 ವರ್ಷಗಳಷ್ಟು ಹಳೆಯ ಚಿನ್ನದ ನಾಣ್ಯಗಳು, ಕಲ್ಲಿನ ಮುಕುಟಮಣಿ, ತ್ರಿಮುಖ ನಾಗಶಿಲೆ, ಮತ್ತು ಪುರಾತನ ದೇವಾಲಯಗಳ ಅವಶೇಷಗಳು ಪತ್ತೆ ಆಗಿವೆ. ಇದರ ಮೌಲ್ಯವು ಕೋಟ್ಯಾಂತರ ರೂಪಾಯಿ ಎಂದು ಈಗ ಖಚಿತವಾಗಿದೆ. ಇಲ್ಲಿನ ಕೋಟೆ ವೀರಭದ್ರೇಶ್ವರ ದೇವಸ್ಥಾನದಲ್ಲಿ ಉತ್ಖನನ ಕಾರ್ಯ ನಡೆದಿತ್ತು. ಮನೆ ನಿರ್ಮಾಣಕ್ಕೆಂದು ಪಾಯ ಅಗೆಯುವ ಸಂದರ್ಭದಲ್ಲಿ ಪ್ರಜ್ವಲ್ ರಿತ್ತಿ ಅವರ ಕುಟುಂಬದವರಿಗೆ ಪುರಾತನ ಕಾಲದ 466 ಗ್ರಾಂ ಚಿನ್ನದ ಆಭರಣಗಳು ಸಿಕ್ಕಿದ್ದವು. ಇದಾದ ಮೇಲೆ ಈ ಭಾಗದಲ್ಲಿ ಉತ್ಖನನ ಕಾರ್ಯ ನಡೆಸಲಾಗಿತ್ತು.
ಇದೀಗ ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ಇತ್ತೀಚೆಗೆ ಪತ್ತೆಯಾದ ಚಿನ್ನದ ನಿಧಿಯು ಬರೋಬ್ಬರಿ 500 ರಿಂದ 600 ವರ್ಷ ಹಳೆಯದ್ದಾಗಿದೆ. ಇದರ ಮೌಲ್ಯವು ಈಗ ಇರುವುದಕ್ಕಿಂತ 10 ಪಟ್ಟು ಹೆಚ್ಚು ಎಂದು ನಿಧಿ ಪರಿಶೀಲನಾ ಸಮಿತಿ ಹೇಳಿದೆ. ನಿಧಿ ಪರಿಶೀಲನಾ ಸಮಿತಿ ಅಧ್ಯಕ್ಷ, ಇತಿಹಾಸ ತಜ್ಞರಾದ ಡಾ. ಎಂ.ಎಸ್. ಕೃಷ್ಣಮೂರ್ತಿ ಅವರು ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಗದಗದಲ್ಲಿ ಚಿನ್ನದ ನಿಧಿ: ನಿಧಿ ಪರಿಶೀಲನಾ ಸಮಿತಿ
ಲಕ್ಕುಂಡಿಯಲ್ಲಿ ಸಿಕ್ಕಿದ್ದ ಚಿನ್ನದ ನಿಧಿ ಪ್ರಕರಣವು ಇಡೀ ರಾಜ್ಯದ ಕುತೂಹಲಕ್ಕೆ ಕಾರಣವಾಗಿತ್ತು. ಇದೀಗ ಇಲ್ಲಿ ಸಿಕ್ಕಿರುವ ನಿಧಿ ಯಾವುದು ಹಾಗೂ ಅದರ ಮೌಲ್ಯದ ಬಗ್ಗೆ ಡಾ. ಎಂ.ಎಸ್. ಕೃಷ್ಣಮೂರ್ತಿ ಅವರು ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಲಕ್ಕುಂಡಿಯಲ್ಲಿ ಪತ್ತೆಯಾದ ಆಭರಣಗಳ ಆಕಾರ, ವಿನ್ಯಾಸ ಮತ್ತು ತಯಾರಿಕೆಯ ಶೈಲಿಗಳನ್ನು ಪರಿಶೀಲನೆ ಮಾಡಿದ ಮೇಳೆ ಇದು ವಿಜಯನಗರ ಸಾಮ್ರಾಜ್ಯದ ಕಾಲಘಟ್ಟಕ್ಕೆ ಸೇರಿದ್ದವಾಗಿವೆ ಎನ್ನುವುದು ಖಚಿತವಾಗುತ್ತದೆ. ಇನ್ನು ಈ ಭಾಗದಲ್ಲಿ ನಡೆಸಲಾಗಿದ್ದ ಉತ್ಖನನ ಕಾರ್ಯದ ಸಂದರ್ಭದಲ್ಲಿ ಪತ್ತೆಯಾದ ಆಭರಣಗಳಲ್ಲಿ ಸಿಂಹ ಅಥವಾ ಕೀರ್ತಿ ಮುಖದ ವಿನ್ಯಾಸಗಳು ಇವೆ. ಇದು ಹೆಣ್ಣು ದೇವರಿಗೆ ಅರ್ಪಿಸಲು ತಯಾರಿಸಲಾದ ಆಭರಣವಾಗಿರಬಹುದು. ಮುಸ್ಲಿಂ ರಾಜರ ದಾಳಿಗಳ ಕಾಲದಲ್ಲಿ ಸುರಕ್ಷತೆಗಾಗಿ ಮುಚ್ಚಿಟ್ಟ ಚಿನ್ನವಾಗಿರುವ ಸಾಧ್ಯತೆಯೂ ಇದೆ ಎಂದು ಹೇಳಿದ್ದಾರೆ.
ಇದು ಸಾಮಾನ್ಯ ಚಿನ್ನವಲ್ಲ
ಲಕ್ಕುಂಡಿಯಲ್ಲಿ ಸಿಕ್ಕ ಚಿನ್ನವು ಸಾಮಾನ್ಯ ಚಿನ್ನವಲ್ಲ ಎಂದು ಹೇಳಲಾಗಿದೆ. ಪುರಾತನ ಕಾಲದ ಐತಿಹಾಸಿಕ ಆಭರಣಗಳಾಗಿದ್ದು, ಇದರ ಮೌಲ್ಯವು ಕನಿಷ್ಠ 10 ಪಟ್ಟು ಹೆಚ್ಚಾಗುವ ಸಾಧ್ಯತೆ ಇದೆ. ಈ ನಿಧಿಯ ಕಾಲಮಾನ ಯಾವುದು ಮತ್ತು ಮೌಲ್ಯಮಾಪನ ಮಾಡುವುದಕ್ಕಾಗಿ ಸರ್ಕಾರವು ಇತಿಹಾಸ ತಜ್ಞರಾದ ಡಾ. ಎಂ.ಎಸ್. ಕೃಷ್ಣಮೂರ್ತಿ ಅವರ ನೇತೃತ್ವದಲ್ಲಿ 6 ಜನ ಸದಸ್ಯರ ತಂಡವನ್ನು ರಚನೆ ಮಾಡಲಾಗಿತ್ತು. ತಂಡವು ಪರಿಶೀಲನೆ ನಡೆಸಿದ್ದು, ಸಂಪೂರ್ಣ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಇನ್ನು ಈ ಆಭರಣಗಳಲ್ಲಿ ನೀಲಮಣಿ, ಪಚ್ಚೆ ಹಾಗೂ ಹವಳದಂತಹ ಅಮೂಲ್ಯ ಹರಳುಗಳನ್ನು ಅಳವಡಿಸಲಾಗಿದೆ. ಅವುಗಳ ಕಲಾತ್ಮಕತೆ ವಿಶೇಷವಾಗಿದ್ದು, ಪತ್ತೆಯಾದ ಚಿನ್ನದ ತೂಕ ಸುಮಾರು 470 ಗ್ರಾಂ ಇದೆ. ಇಂದಿನ ಮಾರುಕಟ್ಟೆಯ ಬೆಲೆಗೆ ಹೋಲಿಕೆ ಮಾಡಿದರೆ 80 ಲಕ್ಷ ರೂಪಾಯಿಗೂ ಹೆಚ್ಚು ಎಂದು ತಜ್ಞರ ಸಮಿತಿ ಹೇಳಿದೆ. ಈ ಮೂಲಕ ನಿಧಿ ಪ್ರಕರಣಕ್ಕೆ ಪ್ರಮುಖ ಟ್ವಿಸ್ಟ್ ಸಿಕ್ಕಂತಾಗಿದೆ.
ಪ್ರಕರಣದ ಹಿನ್ನೆಲೆ ಏನು
ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ಮನೆ ನಿರ್ಮಾಣ ಮಾಡುವ ಸಂದರ್ಭದಲ್ಲಿ ಪ್ರಜ್ವಲ್ ರಿತ್ತಿ ಎನ್ನುವ ಕುಟುಂಬಕ್ಕೆ 466 ಗ್ರಾಂ ಚಿನ್ನದ ಆಭರಣಗಳು ಸಿಕ್ಕಿದ್ದವು. ಚಿನ್ನದ ಆಭರಣಗಳು ಮತ್ತು ಕೆಲವು ತಾಮ್ರದ ವಸ್ತುಗಳನ್ನು ಸಹ ಈ ಕುಟುಂಬವು ಅತ್ಯಂತ ಪ್ರಮಾಣಿಕವಾಗಿ ಸರ್ಕಾರಕ್ಕೆ ಒಪ್ಪಿಸಿತ್ತು. ಇದು ಲಕ್ಕುಂಡಿಯ ಐತಿಹಾಸಿಕ ಮಹತ್ವದ ವಿಷಯ ಚರ್ಚೆಯ ಮುನ್ನೆಲೆಗೆ ಬರುವಂತೆ ಮಾಡಿತು. ಈ ಭಾಗದಲ್ಲಿ ಸಿಕ್ಕ ನಿಧಿಯು ಸುಮಾರು 300 ವರ್ಷಗಳ ಹಳೆಯದ್ದು ಎಂದು ಪ್ರಾಥಮಿಕ ಹಂತದಲ್ಲಿ ಅಂದಾಜಿಸಲಾಗಿತ್ತಿ. ಆದರೆ ಇದೀಗ ಈ ಆಭರಣಗಳು 500ರಿಂದ 600 ವರ್ಷ ಹಳೆಯದ್ದಾಗಿವೆ ಎಂದು ಖಚಿತವಾಗಿದೆ.
-
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
Tejasvi Surya: ಕೆಎಸ್ಸಿಎನಿಂದ ಐಪಿಎಲ್ ಫ್ರೀ ಟಿಕೆಟ್ ಚರ್ಚೆ: ಕಾಂಗ್ರೆಸ್ ಶಾಸಕರಿಗೆ ಸಂಸದ ತೇಜಸ್ವಿ ಸೂರ್ಯ ಕ್ಲಾಸ್ -
IPL Tickets: ನಾವು ವಿಐಪಿಗಳು; 5 ಫ್ರೀ ಟಿಕೆಟ್ ಕೊಡಲಿ: ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ -
ಕರ್ನಾಟಕದ ಕರಾವಳಿಯಲ್ಲಿ ಕಾಣದ ಅಗ್ನಿಕುಂಡದ ಮೇಲೆ ಘನತ್ಯಾಜ್ಯ ವಿಲೇವಾರಿಗೆ ವೀರಾವೇಶದ ಜಿದ್ದಾಜಿದ್ದಿ: ರಾಜಾರಾಂ ತಲ್ಲೂರು ಬರಹ -
Love Mocktail 3 Row: ಕೃತಿಚೌರ್ಯ ವಿವಾದದ ನಡುವೆ ಸತ್ಯ ಮತ್ತು ನೈತಿಕತೆ ಚರ್ಚೆ: ಮಧು ವೈ.ಎನ್ ಬರಹ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
ವಂದೇ ಭಾರತ್ ರೈಲಿನ ಊಟದಲ್ಲಿ ಹುಳು: 'ಅದು ಕೇಸರಿ' ಎಂದ ಸಿಬ್ಬಂದಿ, IRCTCಗೆ 10 ಲಕ್ಷ ದಂಡ -
Viral Video: 11 ವರ್ಷದ ಬಾಲಕನಿಂದ ಯಶಸ್ವಿ ವಿಮಾನ ಲ್ಯಾಂಡಿಂಗ್; ನೆಟ್ಟಿಗರ ಮನಗೆದ್ದ ಈ ಪುಟ್ಟ ಪೋರ -
Water: ಅನಂತರಪುರ ಜಿಲ್ಲೆಯ ಬರಡು ಭೂಮಿಯ ಯಶೋಗಾಥೆ: ಜಗದೀಶ್ ಕೊಪ್ಪ ಬರಹ -
ಯುಗಾದಿ ಹಬ್ಬ - ಶಿವರಾತ್ರಿಯಂದು ನಾನು ಮಾಂಸ ತಿಂತಿನಿ, ಅದು ನನ್ನಿಷ್ಟ: ಮುಖ್ಯಮಂತ್ರಿ ಸಿದ್ದರಾಮಯ್ಯ -
Rashmika Mandanna: ರಶ್ಮಿಕಾ ಮಂದಣ್ಣ - ವಿಜಯ್ ದೇವರಕೊಂಡ ಕನಸಿನ ಹನಿಮೂನ್: ವಿಶೇಷ ವಿಡಿಯೋ ಹಂಚಿಕೊಂಡ ಜೋಡಿ -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್










Click it and Unblock the Notifications