ಯುಗಾದಿ ಹಬ್ಬ - ಶಿವರಾತ್ರಿಯಂದು ನಾನು ಮಾಂಸ ತಿಂತಿನಿ, ಅದು ನನ್ನಿಷ್ಟ: ಮುಖ್ಯಮಂತ್ರಿ ಸಿದ್ದರಾಮಯ್ಯ
Non Veg: ಧಾರ್ಮಿಕ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ಮುಕ್ತವಾಗಿ ಹಾಗೂ ಸುದೀರ್ಘವಾಗಿ ಮಾತನಾಡಿದ್ದಾರೆ. ಮಾಂಸಾಹಾರ ಸೇವೆ, ಹಿಂದೂ ಧರ್ಮದ ಆಚರಣೆ, ಯಾವುದೇ ಸಮುದಾಯವಿದ್ದರೂ ಎಲ್ಲ ಸಮುದಾಯದವರೂ ಒಂದೇ ಹಾಗೂ ನಾನು ಯುಗಾದಿ ಹಾಗೂ ಶಿವರಾತ್ರಿಯ ಸಂದರ್ಭದಲ್ಲೂ ಮಾಂಸಾಹಾರ ಸೇವನೆ ಮಾಡಿದ್ದೇನೆ ಎಂದು ಅವರು ಹೇಳಿದ್ದಾರೆ. ವಿಧಾನಸಭೆಯಲ್ಲಿ ಅವರು ಯಾವೆಲ್ಲ ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಹಬ್ಬದ ಸಂದರ್ಭಗಳಲ್ಲಿ ಮಾಂಸಾಹಾರ ಸೇವನೆ ಮಾಡಿರುವ ಬಗ್ಗೆ ಹಾಗೂ ಅವರ ಧಾರ್ಮಿಕ ನಂಬಿಕೆಯ ಬಗ್ಗೆ ಅವರು ಮಾತನಾಡಿದ್ದೇನು ಎನ್ನುವುದು ಇಲ್ಲಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಧಾರ್ಮಿಕ ಆಚರಣೆ, ನಂಬಿಕೆ ಹಾಗೂ ಸಿದ್ಧಾಂತ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಮುಕ್ತವಾಗಿ ವಿಧಾನಸಭೆ ಅಧಿವೇಶನದಲ್ಲಿ ಮಾತನಾಡಿದ್ದಾರೆ. ಮೊದಲಿನಿಂದಲೂ ಕೆಲವರು ಸಿದ್ದರಾಮಯ್ಯ ಅವರ ಆಹಾರ ಸೇವನೆ ಹಾಗೂ ಅವರ ಧಾರ್ಮಿಕ ವಿಚಾರದ ಬಗ್ಗೆ ಹೆಚ್ಚು ಟೀಕೆ ಮತ್ತು ಚರ್ಚೆ ಮಾಡುತ್ತಿದ್ದರು. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಈ ವಿಚಾರಗಳ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ಸಿದ್ದರಾಮಯ್ಯ ಅವರ ಭಾಷಣದ ಸಂಪೂರ್ಣ ವಿವರ ಇಲ್ಲಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2026 - 2027ನೇ ಸಾಲಿನ ಕರ್ನಾಟಕ ಬಜೆಟ್ ಅನ್ನು ರಾಹುಕಾಲ ನೋಡಿಕೊಂಡು ಮಂಡಿಸಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಪ್ರಸ್ತಾಪಿಸಿದ್ದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಕ್ತವಾಗಿ ಉತ್ತರ ನೀಡಿದ್ದಾರೆ. ನಿಜ ರಾಹುಕಾಲ ನೋಡಿಕೊಂಡು ಬಜೆಟ್ ಮಂಡನೆ ಮಾಡಿದ್ದೇವೆ. ನಿಮ್ಮಂತವರ ಮಾತನ್ನೂ ಕೇಳಬೇಕಲ್ಲವೇ, ಹಿಂದೆಲ್ಲವೂ ನಾನು ರಾಹುಕಾಲದಲ್ಲೂ ಬಜೆಟ್ ಮಂಡನೆ ಮಾಡಿದ್ದೇನೆ. ಈ ಬಾರಿ ಕೆಲವರು ಅಧಿಕಾರಿಗಳು ಹಾಗೂ ಮನೆಯವರು ರಾಹುಕಾಲದಲ್ಲಿ ಬಜೆಟ್ ಮಂಡನೆ ಮಾಡಬೇಡಿ ಎಂದು ಮನವಿ ಮಾಡಿದ್ದರು.
ನಾನು ಪ್ರಜಾಪ್ರಭುತ್ವದಲ್ಲಿ ಅಭಿಪ್ರಾಯಗಳಿಗೆ ಬೆಲೆ ಕೊಡಬೇಕು ಎಂದು ಹೇಳಿದ್ದಾರೆ. ಆದರೆ, ಸಿದ್ದರಾಮಯ್ಯ ಅವರ ಮಾತಿಗೆ ವಿರೋಧ ಪಕ್ಷದ ನಾಯಕರು ನಕ್ಕಿದ್ದಾರೆ. ಇದಕ್ಕೆ ಉತ್ತರಿಸಿದ ಸಿದ್ದರಾಮಯ್ಯ ಅವರು ಕೇಳ್ರಿ... ನಾನು ಇಂದಿಗೂ ರಾಹುಕಾಲ, ಗುಳಿಗೆ ಕಾಲ ನಂಬಲ್ಲ ಎಂದಿದ್ದಾರೆ. ಹಿಂದೆಯೂ ನಾನು ರಾಹುಕಾಲದಲ್ಲಿ ಬಜೆಟ್ ಮಂಡನೆ ಮಾಡಿದ್ದೇನೆ ಎಂದು ಸಿಎಂ ಹೇಳಿದರು. ಇದಕ್ಕೆ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರು ಅಂದಿನ ಪರಿಸ್ಥಿತಿ ಬೇರೆ, ಇಂದಿನ ಪರಿಸ್ಥಿತಿ ಬೇರೆ. ಮುಂದೆಯೂ ನೀವೇ ಬಜೆಟ್ ಮಂಡನೆ ಮಾಡಬೇಕಲ್ಲವೇ ಎಂದು ಸಿದ್ದರಾಮಯ್ಯ ಅವರ ಕಲೆಳೆದಿದ್ದಾರೆ.
ನಾನು ಎಂದಿಗೂ ಯಾವ ಕಾಲವನ್ನೂ ನೋಡಿಲ್ಲ, ಸೂರ್ಯಗ್ರಹಣವನ್ನೂ ನಾನು ನಂಬಿಲ್ಲ. ಯುಗಾದಿ ಹಬ್ಬದ ದಿನ ಯಾರಾದರೂ ಮಾಂಸಾಹಾರ ಸೇವಿಸುತ್ತಾರೇನ್ರಿ, ಶಿವರಾತ್ರಿಯ ದಿನ ಯಾರಾದರೂ ಮಾಂಸಾಹಾರ ಸೇವೆನೆ ಮಾಡುತ್ತಾರಾ.. ನಾನು ಯುಗಾದಿ - ಶಿವರಾತ್ರಿಯ ದಿನ ಮಾಂಸಾಹಾರ ತಿನ್ನುತ್ತೇನೆ ಎಂದು ಮುಖ್ಯಮಂತ್ರ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಇದರಲ್ಲಿ ಯಾವುದೇ ತಪ್ಪಿಲ್ಲ. ಎಲ್ಲ ದಿನಗಳೂ ಸಹ ಒಂದೇ, ಹಬ್ಬ ಎಂದು ಮಾಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಇದಕ್ಕೆ ವಿರೋಧ ಪಕ್ಷದ ಸದಸ್ಯರು ಡಿ.ಕೆ ಶಿವಕುಮಾರ್ ಅವರು ಪಾಲನೆ ಮಾಡುತ್ತಾರೆ ಎಂದಿದ್ದಾರೆ. ಅದಕ್ಕೆ ಸಿದ್ದರಾಮಯ್ಯ ಅವರು ಅದು ಅವರವರ ನಂಬಿಕೆ ಎಂದಿದ್ದಾರೆ.












Click it and Unblock the Notifications