ಸಿಸಿ ಕ್ಯಾಮೆರಾ ಮೂಲಕವೇ ಪ್ರವಾಸಿ ದಂಪತಿಗಳಿಗೆ ಸುರಕ್ಷತೆ ಪಾಠ: ಪೊಲೀಸರಿಗೆ ಸಾರ್ವಜನಿಕರ ಪ್ರಶಂಸೆ
ಬೆಂಗಳೂರು, ಜೂನ್ 02: ತಂತ್ರಜ್ಞಾನಗಳ ಸಹಾಯದಿಂದ ಏನಲ್ಲ ಮಾಡಬಹುದು ಎಂಬುದಕ್ಕೆ ಇಲ್ಲೊಂದು ಘಟನೆ ಸಾಕ್ಷಿಯಾಗಿದೆ. ತಂತ್ರಜ್ಞಾನ ಒಳಿತಿನ ಜೊತೆಗೆ ಹೆಚ್ಚು ದುರುಪಯೋಗ ಆಗುತ್ತಿದೆ ಎಂಬ ಆರೋಪ ಇದೆ. ಬರೀ ಆಡಿಯೋ ಸಹಿತ ಸಿಸಿ ಕ್ಯಾಮರಾ ಅಳವಡಿಕೆಯಿಂದಾಗಿ ಜನರಿಗೆ ಅಗತ್ಯ ಎಚ್ಚರಿಕೆ ನೀಡಲು, ಜೀವ ಉಳಿಸಲು ಇತರ ಕಾರಣಗಳಿಗೂ ಸಹಾಯವಾಗುತ್ತಿದೆ. ತುಂಬಿ ಹರಿಯುತ್ತಿರುವ ಗಂಗಾವತಿ ನದಿ ಸೇತುವೆ ಮೇಲೆ ಪಾಪುವಿನ ಜೊತೆ ಬಂದು ಸೆಲ್ಫಿಗೆ ಮುಂದಾಗಿದ್ದ ದಂಪತಿಗಳಿಗೆ ಗೋಕರ್ಣ ಪೊಲೀಸರು ಎಚ್ಚರಿಸಿ ಕಳುಹಿಸಿದ್ದಾರೆ.
ರಾಜ್ಯದ ನಾನಾ ಕಡೆಗಳಲ್ಲಿ ಮಳೆ ಸುರಿಯುತ್ತಿದೆ. ಈಗಾಗಲೇ ಬಂದ ಮಳೆಯಿಂದಾಗಿ ಗಂಗಾವತಿ ನದಿ ಒಳಹರಿವು ಹೆಚ್ಚಾಗಿದೆ. ಇಲ್ಲಿನ ಸೇತುವೆ ಮೇಲೆ ವಾಯು ವಿಹಾರಕ್ಕೆ ಬಂದ ದಂಪತಿಗಳಿಗೆ ಪೊಲೀಸರು ಸಿಸಿಟಿವಿ ಮೂಲಕವೇ ಎಚ್ಚರಿಕೆ ನೀಡಿ, ಸುರಕ್ಷಿತವಾಗಿರುವಂತೆ ಹೇಳಿ ಸೈರನ್ ಮೊಳಗಿಸಿದ್ದಾರೆ.

ಜೂನ್ 01ರ ಭಾನುವಾರ ರಜೆ ದಿನ ಹಿನ್ನೆಲೆಯಲ್ಲಿ ಕಾರಿನಲ್ಲಿ ಬಂದಿದ್ದ ತಮ್ಮ ಮಗು ಸಮೇತ ದಂಪತಿ ಕಾರಿನಲ್ಲಿ ಬಂದಿದ್ದರು. ಮಧ್ಯಾಹ್ನ 13:20 ಗಂಟೆಯ ಸುಮಾರಿಗೆ ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯ ಗಂಗಾವತಿ ನದಿ ಸೇತುವೆ ಕಟ್ಟೆಯ ಮೇಲೆ ಪ್ರವಾಸಿ ದಂಪತಿಗಳಿಬ್ಬರು ತಮ್ಮ ಪುಟ್ಟ ಮಗುವನ್ನು ಅಪಾಯಕಾರಿ ಸ್ಥಿತಿಯಲ್ಲಿ ನಿಲ್ಲಿಸಿಕೊಂಡಿದ್ದರು. ಇನ್ನೇನು ಫೋಟೋ ತೆಗೆದುಕೊಳ್ಳಬೇಕು ಅಷ್ಟರಲ್ಲಿ ಗೋಕರ್ಣ ಠಾಣೆಯ ಪೊಲೀಸರು ಸಿಸಿ ಕ್ಯಾಮರಾಗಳಲ್ಲಿ ಗಮನಿಸಿದ್ದಾರೆ.
ವಿಶೇಷವೆಂದರೆ ಈ ಸಿಸಿ ಕ್ಯಾಮೆರಾದಲ್ಲಿ ಆಡಿಯೋ ವ್ಯವಸ್ಥೆ ಇದೆ. ಇಲ್ಲಿಂದಲೇ ಸಿಸಿ ಕ್ಯಾಮರಾ ವ್ಯಾಪ್ತಿಯಲ್ಲಿರುವವರಿಗೆ ನಿರ್ದೇಶನ ನೀಡಲೂ ಬಹುದಾದ ವ್ಯವಸ್ಥೆ ಇದಾಗಿದೆ. ಕಳೆಗೆ ತುಂಬಿ ಹರಿಯುವ ನದಿ ಮೇಲೆ ಸೇತುವೆ ಅಂಚಿನಲ್ಲಿ ಮಗು ನಿಲ್ಲಿಸಿ ಫೋಟೋ ತೆಗೆದುಕೊಳ್ಳಲು ಮುಂದಾಗಿದ್ದನ್ನು ಸಿಸಿಟಿವಿಯಲ್ಲಿ ಪೊಲೀಸರು ಗಮನಿಸಿದ್ದಾರೆ.
ಪೊಲೀಸರ ಕಾರ್ಯಕ್ಕೆ ಸಾರ್ವಜನಿಕ ಮೆಚ್ಚುಗೆ
ಕೂಡಲೇ ದಂಪತಿಗಳಿಗೆ ಪೊಲೀಸರು, ಪ್ರವಾಸಿಗರೇ ನೀವು ಗೋಕರ್ಣದ ಗಂಗಾ ನದಿ ಸೇತುವೆ ಮೇಲಿದ್ದೀರಿ. ಕೆಳಗೆ ನದಿ ರಭಸವಾಗಿ ಹರಿಯುತ್ತಿದೆ. ಆದ್ದರಿಂದ ತಮ್ಮ ಮಗುವನ್ನು ಸುರಕ್ಷಿತವಾಗಿಟ್ಟುಕೊಳ್ಳಲು ಸಿಸಿ ಕ್ಯಾಮರಾ ಮೂಲಕವೇ ಎಚ್ಚರಿಸಿದ್ದಾರೆ. ಕೂಡಲೇ ದಂಪತಿ ಅಲ್ಲಿಂದ ಸುರಕ್ಷಿತವಾಗಿ ಹೊರಟು ಹೋಗಿದ್ದಾರೆ. ಪೊಲೀಸರ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿರುತ್ತದೆ. ತಂತ್ರಜ್ಞಾನ ಸಹಾಯದಿಂದ ಅಗತ್ಯ ಎಚ್ಚರಿಕೆ ನೀಡುವ, ಜನರ ಸುರಕ್ಷತೆ ಕಾಳಜಿ ವಹಿಸಲು ಸಾಧ್ಯವಾಗುತ್ತಿದೆ ಎಂದು ತಿಳಿಸಿದ್ದಾರೆ.
ಇಂತಹ ಆಡಿಯೋ, ವಾಯ್ಸ್ ಸಹಿತ ಸಿಸಿ ಕ್ಯಾಮೆರಾಗಳ ಬಳಕೆ ಇತ್ತೀಚೆಗೆ ಹೆಚ್ಚಿನ ಪ್ರಮಾಣದಲ್ಲಿ ಆಗುತ್ತಿದೆ. ವ್ಯವಹಾರಿಕ ದೃಷ್ಟಿಯಿಂದ ದೊಡ್ಡ ದೊಡ್ಡ ಅಂಗಡಿ ಮುಂಗಟ್ಟುಗಳಲ್ಲಿ, ಮನೆ ಮುಂದೆ, ಅಪಾರ್ಟ್‌ಮೆಂಟ್‌ಗಳಲ್ಲಿ, ಸೇತುವೆ ಸೇರಿ ಇನ್ನಿತರ ಪ್ರವಾಸಿ ಸ್ಥಳಗಳಲ್ಲಿ ಇವುಗಳ ಬಳಕೆ ಹೆಚ್ಚಾಗುತ್ತಿದೆ. ಇದು ಮಾನವ ಕೆಲಸವನ್ನು ಮತ್ತಷ್ಟು ಸರಳಗೊಳಿಸಿದೆ.












Click it and Unblock the Notifications