ಬಾರ್ ಹಾಗೂ ರೆಸ್ಟೋರೆಂಟ್‌ಗಳಿಗೆ ಸರ್ಕಾರದಿಂದ ಖಡಕ್ ಸೂಚನೆ
Recommended Video
ಬೆಂಗಳೂರು,
ನವೆಂಬರ್ 7: ಬಾರ್‌ಗಳಿಗೆ ಸರ್ಕಾರವು ಹೊಸ ಸೂಚನೆ ನೀಡಿದೆ. ಬಾರ್ ಮತ್ತು ರೆಸ್ಟೋರೆಂಟ್‌ಗಳು ಹಾಗೂ ಮದ್ಯ ಮಾರಾಟ ಮಳಿಗೆಗಳಿಗೆ ದೇವರ ಹೆಸರು ನಾಮಕರಣ ಮಾಡದಂತೆ ನಿಷೇಧ ಹೇರಲು ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. id="toptextpromo"> id='are-slot-1' class='oiad oi-axt oiadv'>ಮದ್ಯ
ಮಾರಾಟ ಕೇಂದ್ರಗಳ ನಾಮಫಲಕಗಳಿಂದ ದೇವರ ಹೆಸರು ತೆರವುಗೊಳಿಸುವ ಕುರಿತು ಕಾನೂನು ಮತ್ತು ಅಬಕಾರಿ ಇಲಾಖೆಗಳ ಅಭಿಪ್ರಾಯ ಪಡೆಯುವಂತೆ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ತಮ್ಮ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. id='are-slot-2' class='oiad oi-axt oiadv'>
ಮದ್ಯ ಮಾರಾಟ ಮಳಿಗಳಿಗೆ ಈ ಹೆಸರುಗಳಿರುತ್ತಿತ್ತು
ಸಾಕಷ್ಟು ಬಾರ್ ಅಥವಾ ಮದ್ಯ ಮಾರಾಟ ಕೇಂದ್ರಗಳಿಗೆ ಮಹಾ ಗಣಪತಿ, ರಾಘವೇಂದ್ರ, ಮಂಜುನಾಥ , ವೆಂಕಟೇಶ್ವರ, ಎಂಬಿತ್ಯಾದಿ ದೇವರ ಹೆಸರುಗಳನ್ನು ಇಡಲಾಗುತ್ತಿತ್ತು. ಆದರೆ ಇನ್ನುಮುಂದೆ ಮದ್ಯ ಮಾರಾಟ ಮಳಿಗೆಗಳಲ್ಲಿ ದೇವರ ಹೆಸರುಗಳಿದ್ದರೆ ದಂಡ ಬೀಳುವುದು ಗ್ಯಾರಂಟಿ.

ಧಾರ್ಮಿಕ ಭಾವನೆಗಳಿಗೆ ಧಕ್ಕೆ
ಮದ್ಯದಂಗಡಿಗಳಲ್ಲಿ ದೇವರ ಹೆಸರಿದ್ದರೆ ಇದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವುದರ ಜೊತೆಗೆ ದೇವರಿಗೆ ಅಗೌರವ ಸೂಚಿಸಿದಂತಾಗುತ್ತದೆ. ಹೀಗಾಗಿ ಇನ್ನುಮುಂದೆ ಬಾರ್‌ಗಳಿಗೆ ದೇವರ ಹೆಸರು ಇಡದಂತೆ ನಿಷೇಧ ಹೇರಲು ಹಾಗೂ ಹಾಲಿ ಇರುವ ಹೆಸರುಗಳನ್ನು ತೆಗೆಸಿ ಹಾಕಲು ಸಂಬಂಧಪಟ್ಟ ಕಾಯ್ದೆಗೆ ತಿದ್ದುಪಡಿ ಮಾಡಲು ಸರ್ಕಾರ ಚಿಂತನೆ ನಡೆಸಿದೆ.

ಬಾರ್‌ಗಳಿಗೆ ದೇವರ ಹೆಸರಿಡುವುದು ಅಭ್ಯಾಸ
ಬಾರ್‌ಗಳಿಗೆ ದೇವರ ಹೆಸರಿಡುವುದು ಅಭ್ಯಾಸ ಎನಿಸುತ್ತದೆ. ಹೀಗಾಗಿ ಇದನ್ನು ತೆರವುಗೊಳಿಸಲು ಏನು ಕ್ರಮ ಕೈಗೊಳ್ಳಬಹುದು ಎಂಬ ಬಗ್ಗೆ ಕಾನೂನು ಇಲಾಖೆ ಹಾಗೂ ಅಬಕಾರಿ ಇಲಾಖೆಯೊಂದಿಗೆ ಚರ್ಚಿಸಿ ಅಭಿಪ್ರಾಯ ಮಂಡಿಸುವಂತೆ ಸೂಚನೆ ನೀಡಿರುವುದಾಗಿ ಸಚಿವರು ತಿಳಿಸಿದ್ದಾರೆ.

ಚಿಂತನೆ ಇರುವುದು ಸತ್ಯ
ಬಾರ್‌ಗಳಿಂದ ದೇವರ ಹೆಸರಿನ ಬೋರ್ಡ್‌ಗಳನ್ನು ತೆಗೆದುಹಾಕುವ ಚಿಂತನೆ ಇರುವುದು ಸತ್ಯ. ಆದರೆ ಯಾವ ರೀತಿ ಮುಂದುವರೆಯಬೇಕು ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಅಲ್ಲದೆ, ಬಾರ್‌ಗಳಿಗೆ ದೇವರ ಹೆಸರು ಇಡುವುದು ಸರಿಯಲ್ಲ ಎಂಬುದು ನನ್ನ ಅಭಿಪ್ರಾಯ. ಒಂದು ವೇಳೆ ಇದಕ್ಕೆ ಜನರಿಂದಲೂ ಬೆಂಬಲ ದೊರೆತರೆ ಕಾನೂನು ತಿದ್ದುಪಡಿ ಮಾಡಿಯಾದರೂ ನಿಷೇಧ ಮಾಡುತ್ತೇವೆ. ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತೇವೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.












Click it and Unblock the Notifications