ಮೈತ್ರಿಯಾ- ಕಾರ್ತೀಕ್ ಗೌಡಗೆ ಸಂಧಾನ ಪಾಠ ಹೇಳಿದ ಹೈಕೋರ್ಟ್

Posted By:
Subscribe to Oneindia Kannada

ಬೆಂಗಳೂರು:, ನವೆಂಬರ್ 28: ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡರ ಪುತ್ರ ಕಾರ್ತಿಕ್ ಗೌಡ ಅವರ ವಿರುದ್ಧ ನಟಿ ಮೈತ್ರಿಯಾ ಗೌಡ ಅವರು ಹಾಕಿರುವ ಅತ್ಯಾಚಾರ, ವಂಚನೆ ಪ್ರಕರಣಕ್ಕೆ ಇತಿಶ್ರೀ ಹಾಡಲು ಹೈಕೋರ್ಟ್ ಮುಂದಾಗಿದೆ. ಇಬ್ಬರು ಸಂಧಾನ ಮೂಲಕ ಪ್ರಕರಣವನ್ನು ಇತ್ಯರ್ಥ ಮಾಡಿಕೊಳ್ಳಿ, ಮಧ್ಯಸ್ಥಿಕಾ(mediation)ಕೇಂದ್ರಕ್ಕೆ ಹೋಗಿ ಬನ್ನಿ ಎಂದು ಕೋರ್ಟ್ ಸೋಮವಾರ ಸಲಹೆ ನೀಡಿದೆ.

ಮದುವೆಯಾಗುವುದಾಗಿ ನಂಬಿಸಿ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ ನಟಿ ಮೈತ್ರಿಯಾ ಗೌಡ ದಾಖಲಿಸಿರುವ ಪ್ರಕರಣವನ್ನು ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳುವುದು ಒಳಿತು ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡರ ಪುತ್ರ ಕಾರ್ತೀಕ್‌ಗೌಡಗೆ ಹೈಕೋರ್ಟ್ ಸಲಹೆ ನೀಡಿದೆ. [ಕಾರ್ತಿಕ್ ಗೌಡಗೆ ನಿರೀಕ್ಷಣಾ ಜಾಮೀನು]

Go to mediation center- High court tells sadananda Gowda's son

ಕಾರ್ತೀಕ್ ಅವರು ನಂಬಿಕೆ ದ್ರೋಹ ಮಾಡಿದ್ದಾರೆ ಎಂಬುದನ್ನು ಇರುವ ಕಾಲ್ ರೆಕಾರ್ಡಿಂಗ್ ಪುರಾವೆಯನ್ನು ನೀಡುವಂತೆ ಮೈತ್ರಿಯಾ ಪರ ವಕೀಲರಿಗೆ ಕೋರ್ಟ್ ಸೂಚಿಸಿತ್ತು. [ಕೌಟುಂಬಿಕ ಕೋರ್ಟಿಗೆ ಕಾಲಿಟ್ಟಿದ್ದೇಕೆ?]

ಮೈತ್ರಿಯಾ ಗೌಡ ಸಲ್ಲಿರುವ ಅತ್ಯಾಚಾರ ಹಾಗೂ ವಂಚನೆ ಆರೋಪ ಪ್ರಕರಣವನ್ನು ರದ್ದುಗೊಳಿಸುವಂತೆ ಕಾರ್ತೀಕ್ ಗೌಡ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾ.ಆನಂದ ಬೈರಾರೆಡ್ಡಿ ಅವರಿದ್ದ ಹೈಕೋರ್ಟ್ ಏಕಸದಸ್ಯ ಪೀಠ, ಈ ಪ್ರಕರಣವನ್ನು ಸೌಹಾರ್ದಯುತವಾಗಿ ಇತ್ಯರ್ಥಪಡಿಸಿಕೊಳ್ಳುವಂತೆ ಅರ್ಜಿದಾರರಿಗೆ ಸಲಹೆ ನೀಡಿದೆ.

ಕಾರ್ತಿಕ್ ಗೌಡ ಈಗಾಗಲೇ ಮದುವೆಯಾಗಿದ್ದಾರೆ. ಕುಟುಂಬದ ನೆಮ್ಮದಿಗಾಗಿ ಪ್ರಕರಣವನ್ನ ಪರಸ್ಪರ ಕುಳಿತು ಇತ್ಯರ್ಥ ಮಾಡಿಕೊಳ್ಳಿ. ಆಸ್ತಿ, ಹಣಕ್ಕಿಂತ ಮಾನಸಿಕ ನೆಮ್ಮದಿ ಮುಖ್ಯ ಎಂದು ಹೇಳಿದ ನ್ಯಾಯಪೀಠ, 2018ರಲ್ಲಿ ವಿಧಾನಸಭಾ ಚುನಾವಣೆ ಇರುವುದನ್ನು ಕೂಡಾ ಉಲ್ಲೇಖಿಸಿದ್ದು ವಿಶೇಷ. ಮುಂದಿನ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A Bengaluru court today asked D V Sadananda Gowda's son Karthik Gowda to approach the mediation center to reach an amicable settlement with Mythriya Gowda. Karthik Gowda's counsel sought time for the same.
Please Wait while comments are loading...