ದಾವಣಗೆರೆ ಜಿಲ್ಲೆಯಲ್ಲಿ ಶೂನ್ಯ ಇದ್ದ ಬಿಜೆಪಿಯನ್ನು ಭದ್ರಕೋಟೆ ಮಾಡಿದ್ದು ಇವರೇ: ಬಿ.ಎಸ್.ಯಡಿಯೂರಪ್ಪ

ದಾವಣಗೆರೆ,ಜುಲೈ 06: ಮಧ್ಯ ಕರ್ನಾಟಕ ದಾವಣಗೆರೆ ಜಿಲ್ಲೆಯನ್ನು ಬಿಜೆಪಿಯ ಭದ್ರಕೋಟೆಯನ್ನಾಗಿ ಮಾಡಿದ ಶ್ರೇಯಸ್ಸು ಸಂಸದ ಜಿ.ಎಂ.ಸಿದ್ದೇಶ್ವರ ಅವರಿಗೆ ಸಲ್ಲಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಬುಧವಾರ ನಗರದ ಹೊಳೆಹೊನ್ನೂರು ತೋಟದ ಆವರಣದಲ್ಲಿ ಹಮ್ಮಿಕೊಂಡಿದ್ದ ಸಂಸದ ಜಿ.ಎಂ.ಸಿದ್ದೇಶ್ವರ ಅವರ 71 ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಸತತ 4 ಬಾರಿ ಕಾಂಗ್ರೆಸ್ ಸೋಲಿಸುವ ಮೂಲಕ ಸಂಸದರಾಗಿ ಆಯ್ಕೆಯಾಗಿರುವ ಸಿದ್ದೇಶ್ವರ ಅವರು ನೇರ ನಡೆ ನುಡಿಗೆ ಹೆಸರಾದವರು. ಶ್ರೀಮಂತ ಕುಟುಂಬದಿಅದ ಬಂದರೂ ಕೂಡ ಜನ ಸಾಮಾನ್ಯರ ನೋವು, ನಲಿವುಗಳಲ್ಲಿ ಪಾಲ್ಗೊಂಡವರು. ಸ್ಮಾರ್ಟ್‌ ಸಿಟಿ ರೂವಾರಿ ಸಿದ್ದೇಶ್ವರ್‌ ಅವರೇ ಎಂದು ಮೆಚ್ಚುಗೆ ಸೂಚಿಸಿದರು.

GM Siddeshwar Is Responsible For Making Davangere As Smart City Says BS Yediyurappa

ಸಿದ್ದೇಶ್ವರ ಅವರ ಅಭಿವೃದ್ಧಿಯ ಚಿಂತನೆ ಮತ್ತು ರೈತರ ಪರವಾದ ನಿಲುವಿನ ಲವಾಗಿ ದಾವಣಗೆರೆ ಜಿಲ್ಲೆ ಇಂದು ಸಾಕಷ್ಟು ಪ್ರಗತಿ ಕಂಡಿದೆ. ಅವರು ಭೇಟಿ ನೀಡದ ಹಳ್ಳಿಗಳಿಲ್ಲ. ನಮ್ಮ ಸರ್ಕಾರದ ಅವಧಿಯಲ್ಲಿ ದಾವಣಗೆರೆ ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟು ಅನುದಾನ ತಂದು ಕೆಲಸ ಮಾಡಿದ್ದಾರೆ. ದಾವಣಗೆರೆ ಜಿಲ್ಲೆಯನ್ನು ಬಿಜೆಪಿಯ ಭದ್ರಕೋಟೆಯನ್ನಾಗಿ ಮಾಡುವಲ್ಲಿ ಅವರ ಶ್ರಮ ಸಾಕಷ್ಟಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಇನ್ನೂ ಈ ವೇಳೆ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮಾತನಾಡಿ, ಒಂದು ಕಾಲದಲ್ಲಿ ದಾವಣಗೆರೆ ಎಂಪಿ ಯಾರು ಎನ್ನುವುದೇ ಬಹಳಷ್ಟು ಜನರಿಗೆ ಗೊತ್ತಿರಲಿಲ್ಲ. ಆದರೆ ಜಿ.ಮಲ್ಲಿಕಾರ್ಜುನಪ್ಪ ಅವರ ಕುಟುಂಬ ಬದ ಮೇಲೆ ಈ ಸ್ಥಿತಿ ಬದಲಾಯಿತು. ಜಿ.ಎಂ.ಸಿದ್ದೇಶ್ವರ ಕೂಡ ಅದೇ ದಾರಿಯಲ್ಲಿ ಸಾಗುತ್ತಿದ್ದಾರೆ. ವಾರಕ್ಕೊಮ್ಮೆ ಸಂಸದರ ಕಚೇರಿಯಲ್ಲಿ ಜನ ಸಾಮಾನ್ಯರಿಗೆ ಸುಲಭವಾಗಿ ಸಿಗುವ ಎಂ ಪಿ ಎಂದರೆ ಅದು ಜಿ.ಎಂ.ಸಿದ್ದೇಶ್ವರ ಮಾತ್ರ. ಅವರು ಸಾರ್ವಜನಿಕ ಬದುಕಿನಿಂದ ಹಿಂದೆ ಸರಿಯದೇ ಇನ್ನೂ ಸಾಕಷ್ಟು ಕಾಲ ಕೆಲಸ ಮಾಡಬೇಕು ಎಂದು ಆಶಿಸಿದರು.

ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ನಾವು ಚುನಾವಣೆಯಲ್ಲಿ ಸೋತಿರಬಹುದು. ಆದರೆ ಸತ್ತಿಲ್ಲ. ಬರುವ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ನರೇಂದ್ರ ಮೋದಿಯವರನ್ನು ಗೆಲ್ಲಿಸಿ ದೇಶದ ಅಭಿವೃದ್ಧಿಗೆ ಶ್ರಮಿಸೋಣ ಎಂದರು.

ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿ, ಸಂಸದ ಜಿ.ಎಂ.ಸಿದ್ದೇಶ್ವರ್ ಸಾರ್ವಜನಿಕರ ಆಸ್ತಿ, ಅವರ ಬಡವರ ಪರ ನಿಲುವು, ರೈತ ಪರವಾದ ಕಾಳಜಿ ಅವರನ್ನು ಸತತವಾಗಿ ಗೆಲ್ಲಿಸಿಕೊಂಡು ಬಂದಿದೆ. ಬರುವ ದಿನಗಳಲ್ಲಿ ಅವರೊಟ್ಟಿಗೆ ನಾವು ಕೂಡ ನಡೆಯೋಣ ಎಂದು ಹೇಳಿದರು.

ಇನ್ನೂ ಸಂಸದ ಜಿ.ಎಂ.ಸಿದ್ದೇಶ್ವರ್ ಮಾತನಾಡಿ, ಬಿಜೆಪಿ ಪಕ್ಷ ಸತತ 7 ಬಾರಿ ನಮ್ಮ ಕುಟುಂಬಕ್ಕೆ ಟಿಕೆಟ್‌ ನೀಡಿ ಜನರ ಋಣ ತೀರಿಸಲು ಅವಕಾಶ ಮಾಡಿಕೊಟ್ಟಿದೆ. ಬರುವ ಚುನಾವಣೆಯಲ್ಲಿ ಯಾರಿಗೆ ಟಿಕೆಟ್ ಕೊಟ್ಟರೂ ತುನ,ಮನ,ಧನ ಸಹಕಾರದೊಂದಿಗೆ ಕೆಲಸ ಮಾಡುತ್ತೇನೆ. ಅಥವಾ ನನಗೆ ಟಿಕೆಟ್‌ ಕೊಟ್ಟು ಕೊನೆಯ ಅವಕಾಶ ನೀಡಿದರೆ ಜನರ ಋಣ ತೀರಿಸುತ್ತೇನೆ ಎಂದರು.

ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ 8 ಸ್ಥಾನಗಳಲ್ಲಿ 7 ರಲ್ಲಿ ಸೋತಿದ್ದೇವೆ. ಸೋಲು-ಗೆಲುವು ಸಾಮಾನ್ಯ. ಸೋಲಿನಿಂದ ಬೇಸರಪಟ್ಟುಕೊಳ್ಳದೇ ಬರುವ ಚುನಾವಣೆಗಳನ್ನು ಎದುರಿಸಬೇಕು. ಪಕ್ಷ ಬೆಳೆಯುವಲ್ಲಿ ಅಭಿಮಾನಿಗಳ, ಕಾರ್ಯಕರ್ತರ ಶ್ರಮ ಸಾಕಷ್ಟಿದೆ ಎಂದು ಹೇಳಿದರು.

ಬರಲಿರುವ ಜಿಪಂ,ತಾಲೂಕು ಪಂಚಾಯಿತಿ ಮತ್ತು ಮುಂದಿನ ವರ್ಷದ ಲೋಕಸಭಾ ಚುನಾವಣೆಗೆ ಎಲ್ಲರೂ ಸಜ್ಜಾಗಬೇಕು. ವಿಶ್ವ ಮೆಚ್ಚಿನ ನರೇಂದ್ರಮೋದಿಯವರು ಮತ್ತೆ ಈ ದೇಶದ ಪ್ರಧಾನಿಯಾಗಲು ಎಲ್ಲರೂ ಕೈ ಜೋಡಿಸಬೇಕೆಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಮುರುಗೇಶ್ ನಿರಾಣಿ, ಹೊಳಲ್ಕೆರೆ ಶಾಸಕ ಎಂ.ಚಅದ್ರಪ್ಪ, ಹರಿಹರ ಶಾಸಕ ಬಿ.ಪಿ.ಹರೀಶ್,ಮಾಜಿ ಶಾಸಕ ಎಸ್.ವಿ.ರಾಮಚಂದ್ರ, ಪರಿಷತ್ ಸದಸ್ಯ ಕೆ.ಎಸ್.ನವೀನ್, ಸಂಸದ ಜಿ.ವೈ.ರಾಘವೇಂದ್ರ, ಶ್ರೀಮತಿ ಗಾಯತ್ರಿ ಸಿದ್ದೇರ್ಶ್ವ, ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ, ಲೋಕಿಕೆರೆ ನಾಗರಾಜ್, ದೇವರ ಮನಿ ಶಿವಕುರ್ಮಾ,ಯಶೋಧಾ ಯಗ್ಗಪ್ಪ, ಕೊಂಡಜ್ಜಿ ಜಯಪ್ರಕಾಶ್, ಡಾ.ಎ.ಎಚ್.ಶಿವಯೋಗಿಸ್ವಾಮಿ, ಮಾಜಿ ಜಿಲ್ಲಾಧ್ಯಕ್ಷ ಯಶವಂತರಾಜ್ ಜಾದವ್, ಬಿ.ಎಸ್.ಜಗದೀಶ್, ಶಾಂತರಾಜ್ ಪಾಟೀಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+