ಜೆಸ್ಕಾಂ ನೇಮಕಾತಿ ಅಧಿಸೂಚನೆ ವಿವರಗಳು

Posted By:
Subscribe to Oneindia Kannada

ಕಲಬುರಗಿ, ಏಪ್ರಿಲ್ 01 : ಗುಲಬರ್ಗಾ ವಿದ್ಯುಚ್ಛಕ್ತಿ ಸರಬರಾಜು ಕಂಪನಿ ನಿಯಮಿತ ಕಿರಿಯ ಸ್ಟೇಷನ್ ಆಪರೇಟರ್ ಮತ್ತು ಕಿರಿಯ ಮಾರ್ಗದಾಳು ಹುದ್ದೆಗಳನ್ನು ಭರ್ತಿ ಮಾಡಲು ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.

540 ಕಿರಿಯ ಸ್ಟೇಷನ್ ಆಪರೇಟರ್ ಮತ್ತು 1300 ಕಿರಿಯ ಮಾರ್ಗದಾಳು ಹುದ್ದೆಗಳನ್ನು ಭರ್ತಿ ಮಾಡಲು 371 ಜೆ ಅನ್ವಯ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ. [ನೇಮಕಾತಿ ಆದೇಶ ಓದಿ]

jobs

ಕಿರಿಯ ಸ್ಟೇಷನ್ ಆಪರೇಟರ್ : ಈ ಹುದ್ದೆಗೆ ಅರ್ಜಿ ಸಲ್ಲಿಸುವವರು ಕರ್ನಾಟಕ ಸರ್ಕಾರದಿಂದ ಮನ್ನಣೆ ಪಡೆದ ಔದ್ಯೋಗಿಕ ತರಬೇತಿ ಸಂಸ್ಥೆ/ಕೇಂದ್ರದಿಂದ ಎಲೆಕ್ಟ್ರಿಷಿಯನ್ ವೃತ್ತಿಯಲ್ಲಿ 2 ವರ್ಷ ಪಠ್ಯಕ್ರಮದಲ್ಲಿ ಉತ್ತೀರ್ಣರಾಗಿರುವ ಐಟಿಐ ಪ್ರಮಾಣ ಪತ್ರ ಹೊಂದಿರತಕ್ಕದ್ದು. ಕವಿಮಂ/ಕವಿಪ್ರನಿನಿಯಿಂದ ನಡೆಸಲಾಗುವ 3 ವರ್ಷದ ಐ.ಟಿ.ಸಿ.ತರಬೇತಿಯಲ್ಲಿ ಉತ್ತೀರ್ಣರಾಗಿರಬೇಕು. [555 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಅರಣ್ಯ ಇಲಾಖೆ]

ಕಿರಿಯ ಮಾರ್ಗದಾಳು : ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಸ್‌ಎಸ್ಎಲ್‌ಸಿ ಅಥವ 10ನೇ ತರಗತಿಯ ಪರೀಕ್ಷೆಯನ್ನು ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯಿಂದ ಉತ್ತೀರ್ಣರಾಗಿರಬೇಕು. [162 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ KPSC]

www.gescom.in ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸುವ ವಿಧಾನ, ವಯಸ್ಸು, ಮೀಸಲಾತಿ, ವೇತನ ಮುಂತಾದ ವಿವರಗಳನ್ನು ನೀಡಲಾಗಿದೆ. [ವಿದ್ಯುತ್ ದರಗಳು ಏರಿಕೆ, ದರಪಟ್ಟಿ]

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Gulbarga Electricity Supply Company Limited (GESCOM)invited applications for the post of junior Linemen and Junior station operator.
Please Wait while comments are loading...