ಅನರ್ಹತೆ ಭೀತಿಯಲ್ಲಿ ತಿಮ್ಮಾಪುರ, ಸಚಿವ ಸ್ಥಾನ ಕೈತಪ್ಪುವ ಸಾಧ್ಯತೆ
ಬೆಂಗಳೂರು, ಆಗಸ್ಟ್ 31 : ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟ ವಿಸ್ತರಣೆಗೆ ಈಗಾಗಲೇ ಮುಹೂರ್ತ ನಾಳೆಗೆ (ಸೆ.01) ನಿಗದಿಯಾಗಿದ್ದು, ಕೊನೆಗಳಿಗೆಯಲ್ಲಿ ಸಂಪುಟ ಸೇರುವರ ಪಟ್ಟಿಯಲ್ಲಿ ಕೊಂಚ ಬದಲಾವಣೆಯಾಗಿದೆ.
ನೂತನ ಸಚಿವರ ಪಟ್ಟಿಯಲ್ಲಿ ತಿಪಟೂರು ಕ್ಷೇತ್ರದ ಶಾಸಕ ಕೆ.ಷಡಕ್ಷರಿ, ಎಂಲ್ಸಿ ಆರ್.ಬಿ.ತಿಮ್ಮಾಪುರ ಹಾಗೂ ವಿಧಾನಪರಿಷತ್ ಸದಸ್ಯ ಎಚ್.ಎಂ ರೇವಣ್ಣ ಅವರ ಹೆಸರುಗಳು ಅಂತಿಮವಾಗಿದ್ದವು. ಆದರೆ, ಇದೀಗ ಈ ಪಟ್ಟಿಯಲ್ಲಿ ಎಚ್.ಎಸ್.ಮಹದೇವ ಪ್ರಸಾದ್ ಅವರ ಪತ್ನಿ, ಗುಂಡ್ಲುಪೇಟೆ ಶಾಸಕಿ ಗೀತಾ ಮಹದೇವ ಪ್ರಸಾದ್ ಅವರ ಹೆಸರು ಸೇರಿಕೊಂಡಿದೆ.

ಸುಳ್ಳು ಮಾಹಿತಿ ನೀಡಿ ಭತ್ಯೆ ಪಡೆಯುತ್ತಿರುವ ಆರೋಪವನ್ನು ಎದುರಿಸುತ್ತಿರುವ 8 ವಿಧಾನ ಪರಿಷತ್ ಸದಸ್ಯರಲ್ಲಿ ನೂತನ ಸಚಿವರ ಪಟ್ಟಿಯಲ್ಲಿರುವ ಆರ್.ಬಿ.ತಿಮ್ಮಾಪುರ ಅವರೂ ಸಹ ಇದ್ದು, ಇವರನ್ನು ಅನರ್ಹಗೊಳಿಸುವ ಸಾಧ್ಯತೆಗಳಿವೆ.
ಈ ಹಿನ್ನೆಯಲ್ಲಿ ತಿಮ್ಮಾಪುರ ಬದಲಿಗೆ ಗೀತಾ ಅವರಿಗೆ ಸಚಿವ ಸ್ಥಾನ ನೀಡಲಾಗುತ್ತಿದೆ ಎಂದು ಹೇಳಲಾಗಿದೆ. ಮತ್ತೊಂದೆಡೆ ಕೆ.ಷಡಕ್ಷರಿ ಅವರಿಗೆ ಕೊಕ್ ಕೊಡಲಾಗಿದೆ ಎಂಬ ಗುಸು ಗುಸು ಸುದ್ದಿಗಳು ಎದ್ದಿವೆ.
ಆದರೆ. ಯಾರು ಸಚಿವರಾಗಲಿದ್ದಾರೆ ಎನ್ನುವುದು ಶುಕ್ರವಾರ ನಡೆಯಲಿರುವ ನೂತನ ಸಚಿವರ ಪ್ರಮಾಣವಚದ ಬಳಿಕ ಸ್ಪಷ್ಟ ಚಿತ್ರಣ ತಿಳಿಯಲಿದೆ.












Click it and Unblock the Notifications