ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2017ರ ಜೂನ್‌ನಲ್ಲೇ ಆಗಬೇಕಿದ್ದ ಗೌರಿ ಹತ್ಯೆ ಮುಂದೂಡಿದ್ದು ಈ ಕಾರಣಕ್ಕೆ

By Manjunatha
|
Google Oneindia Kannada News

ಬೆಂಗಳೂರು, ಜುಲೈ 27: ಕಳೆದ ವರ್ಷ ಸೆಪ್ಟೆಂಬರ್ 5 ರಂದು ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ಆಯಿತು. ಆದರೆ ಹಂತಕರು ಜೂನ್ ತಿಂಗಳಲ್ಲೇ ಗೌರಿ ಹತ್ಯೆಗೆ ಸಂಚು ರೂಪಿಸಿದ್ದರು ಎಂಬುದು ಆರೋಪಿಗಳ ವಿಚಾರಣೆ ವೇಳೆ ಗೊತ್ತಾಗಿದೆ.

ಜೂನ್ ತಿಂಗಳಲ್ಲೇ ಗೌರಿಯನ್ನು ಮುಗಿಸಿಬಿಡಲು ಹತ್ಯೆಯ ಮಾಸ್ಟರ್ ಮೈಂಡ್ ಅಮೋಲ್ ಕಾಳೆ ಯೋಜನೆ ರೂಪಿಸಿದ್ದ ಆದರೆ ಸಕಲ ವ್ಯವಸ್ಥೆಗಳು ಸರಿಯಾಗಿ ಆಗದ ಕಾರಣ ಹತ್ಯೆ ದಿನವನ್ನು ಮುಂದೂಡಿದ್ದ ಎಂದು ಎಸ್‌ಐಟಿ ತನಿಖೆಯಲ್ಲಿ ಬಹಿರಂಗವಾಗಿದೆ.

ಗೌರಿ ಹತ್ಯೆ ಆರೋಪಿಗೆ ಎಸ್‌ಐಟಿ ಹಿಂಸೆ: ನ್ಯಾಯಾಲಯಕ್ಕೆ ದೂರುಗೌರಿ ಹತ್ಯೆ ಆರೋಪಿಗೆ ಎಸ್‌ಐಟಿ ಹಿಂಸೆ: ನ್ಯಾಯಾಲಯಕ್ಕೆ ದೂರು

ಗುಂಡುಗಳ ಸರಬರಾಜಿನಲ್ಲಿ ವಿಳಂಬ ಸೇರಿ ಕೆಲವು ಸಣ್ಣ ಸಮಸ್ಯೆಗಳು ಕಾಣಿಸಿಕೊಂಡ ಕಾರಣ ಗೌರಿ ಹತ್ಯೆಯನ್ನು ಈ ತಂಡ ಮುಂದೂಡಿತ್ತು ಎಂದು ಎಸ್‌ಐಟಿ ಮೂಲಗಳು ಹೇಳಿವೆ.

ಜೂನ್‌ನಲ್ಲೆ ಹತ್ಯೆಗೆ ಸ್ಕೆಚ್‌

ಜೂನ್‌ನಲ್ಲೆ ಹತ್ಯೆಗೆ ಸ್ಕೆಚ್‌

ಸೆಪ್ಟೆಂಬರ್ 4ರಂದು ಗೌರಿ ಹತ್ಯೆಗೆ ಮುಹೂರ್ತ ನಿಗದಿಯಾಗಿತ್ತು. ಆದರೆ ಅಂದು ಗೌರಿ ಲಂಕೇಶ್ ಮನೆಗೆ ಬೇಗ ಬರದ ಕಾರಣ ಅಂದು ಗೌರಿಗೆ ಪರಶುರಾಮ್ ವಾಘ್ಮೋರೆ ಗುಂಡು ಹೊಡೆದಿರಲಿಲ್ಲ. ಅಂದು ತನ್ನ ಯೋಜನೆ ವಿಫಲವಾಗಿದ್ದಕ್ಕೆ ಅಮೋಲ್ ಕಾಳೆ ಪರಶುರಾಮ್‌ ಮೇಲೆ ಕೋಪಗೊಂಡಿದ್ದನಂತೆ.

ಗೌರಿ ಹತ್ಯೆ ಮಾಡಲು ಗುಂಡು ಕೊಟ್ಟಿದ್ದು ಸರ್ಕಾರಿ ನೌಕರ! ಗೌರಿ ಹತ್ಯೆ ಮಾಡಲು ಗುಂಡು ಕೊಟ್ಟಿದ್ದು ಸರ್ಕಾರಿ ನೌಕರ!

6 ಗಂಟೆ ಧ್ಯಾನ ಮಾಡಿಸಿದ್ದ ಅಮೋಲ್ ಕಾಳೆ

6 ಗಂಟೆ ಧ್ಯಾನ ಮಾಡಿಸಿದ್ದ ಅಮೋಲ್ ಕಾಳೆ

ಮಾರನೇ ದಿನ ಅಂದರೆ ಸೆಪ್ಟೆಂಬರ್ 5ರಂದು ಸುಮಾರು 6 ಗಂಟೆಗಳ ಕಾಲ ಪರಶರಾಮ್‌ಗೆ ಧ್ಯಾನ ಮಾಡಿಸಿ ಮನಸ್ಸು ಸ್ಥಿಮಿತದಲ್ಲಿ ಇಟ್ಟುಕೊಳ್ಳುವಂತೆ ಹೇಳಿ ಚೆನ್ನಾಗಿ ಧೈರ್ಯ ತುಂಬಿ ಅಮೋಲ್ ಕಾಳೆ ಕಳುಹಿಸಿದ್ದ. ಅಂತೆಯೇ ಪರಶುರಾಮ್ ಅಂದು ಗೌರಿಗೆ ಗುಂಡಿಕ್ಕಿ ಹತ್ಯೆ ಮಾಡಿದ್ದ.

ಅರೆ ಇದೇನಿದು? ಪರಶುರಾಮ್ ವಾಘ್ಮೋರೆ ಖುಲಾಸೆ! ಅರೆ ಇದೇನಿದು? ಪರಶುರಾಮ್ ವಾಘ್ಮೋರೆ ಖುಲಾಸೆ!

ಮಾಸ್ಟರ್ ಮೈಂಡ್ ಅಮೋಲ್ ಕಾಳೆ

ಮಾಸ್ಟರ್ ಮೈಂಡ್ ಅಮೋಲ್ ಕಾಳೆ

ಇಡೀಯ ಹತ್ಯೆಗೆ ಅಮೋಲ್ ಕಾಳೆ ಮಾಸ್ಟರ್ ಮೈಂಡ್ ಆಗಿದ್ದನಂತೆ. ಆದರೆ ಕೊಲೆ ಮಾಡಲು, ಶಸ್ತ್ರಾಸ್ತ್ರ ಪೂರೈಸಲು, ಪರಶುರಾಮ್‌ನನ್ನು ಹತ್ಯೆ ಸ್ಥಳಕ್ಕೆ ಕರೆದುಕೊಂಡು ಹೋಗಲು, ಹತ್ಯೆ ನಂತರ ಎಸ್ಕೇಪ್ ಆಗಲು ಯಾರ್ಯಾರು ವ್ಯಕ್ತಿಗಳನ್ನು ನಿಯೋಜಿಸಬೇಕು ಎಂಬುದನ್ನು ಆಯ್ಕೆ ಮಾಡಿದ್ದ ಮನೋಹರ ಯಡವೆ. ಇಡೀಯ ಕೃತ್ಯಕ್ಕೆ ಆತ ರಿಕ್ರ್ಯೂಟರ್ ಆಗಿ ಕಾರ್ಯ ನಿರ್ವಹಿಸಿದ್ದಾನೆ.

ವ್ಯವಸ್ಥೆ ನೋಡಿಕೊಳ್ಳುವ ಜವಾಬ್ದಾರಿ ಅಮಿತ್‌ನದ್ದು

ವ್ಯವಸ್ಥೆ ನೋಡಿಕೊಳ್ಳುವ ಜವಾಬ್ದಾರಿ ಅಮಿತ್‌ನದ್ದು

ಅಮಿತ್ ಅಲಿಯಾಸ್ ಸುಜಿತ್‌ ಎಂಬಾತನಿಗೆ ವ್ಯವಸ್ಥಾಪನ ಕಾರ್ಯ ವಹಿಸಲಾಗಿತ್ತಂತೆ. ಮನೆ ಬಾಡಿಗೆಗೆ ಕೊಡಿಸುವುದು, ವಾಹನ ವ್ಯವಸ್ಥೆ, ಹಣಕಾಸು ವ್ಯವಸ್ಥೆ ಜೊತೆಗೆ, ಮಾಸ್ಟರ್‌ ಮೈಂಡ್ ಹಾಗೂ ಕಲಾಳುಗಳ ಜೊತೆ ಸಂಪರ್ಕ ಕೊಂಡಿಯಾಗಿ ಸುಜಿತ್ ಕಾರ್ಯ ನಿರ್ವಹಿಸಿದ್ದ.

ಕಗ್ಗಂಟಾಗಿರುವ ಬೈಕ್ ಮತ್ತು ಬಂದೂಕು

ಕಗ್ಗಂಟಾಗಿರುವ ಬೈಕ್ ಮತ್ತು ಬಂದೂಕು

ಕೃತ್ಯ ಎಸಗಿದ ಬಹುತೇಕ ಎಲ್ಲರನ್ನೂ ಬಂಧಿಸಿರುವ ಎಸ್‌ಐಟಿ ಪೊಲೀಸರಿಗೆ ಈಗ ಕಗ್ಗಂಟಾಗಿರುವುದು ಹತ್ಯೆಗೆ ಬಳಸಲಾದ ಬಂದೂಕು ಮತ್ತು ಬೈಕ್. ಅವೆರಡೂ ದೊರೆತರೆ ಎಸ್‌ಐಟಿಯು ತನಿಖೆಯನ್ನು ಅಂತಿಮಗೊಳಿಸಲಿದೆ. ಆದರೆ ಹತ್ಯೆ ನಡೆದ ದಿನ ಪರಶುರಾಮ್‌ನನ್ನು ಬೈಕ್‌ನಲ್ಲಿ ಕರೆತಂದಾತನೇ ಕೊನೆಗೆ ಬಂದೂಕು ಕಿತ್ತುಕೊಂಡು ಪರಾರಿಯಾಗಿದ್ದ ಹಾಗಾಗಿ ಅದು ಎಲ್ಲಿದೆ ಎಂದು ಮಾಹಿತಿ ಇಲ್ಲ.

ಬೈಕ್ ಹಾಗೂ ಬಂದೂಕು ಸುರೇಶ್‌ ಬಳಿ ಇವೆ?

ಬೈಕ್ ಹಾಗೂ ಬಂದೂಕು ಸುರೇಶ್‌ ಬಳಿ ಇವೆ?

ಹತ್ಯಾ ಸ್ಥಳಕ್ಕೆ ಹೋಗಲು ಬೈಕ್ ವ್ಯವಸ್ಥೆ ಮಾಡಿದ್ದು 11 ನೇ ಆರೋಪಿ ಸುರೇಶ್ ಎನ್ನಲಾಗಿದೆ. ಬೈಕ್ ಚಲಾಯಿಸಿದ್ದು ಹುಬ್ಬಳ್ಳಿಯಲ್ಲಿ ಬಂಧಿತನಾದ ಗಣೇಶ್ ವಿಸ್ಕಿನ್. ಪರಶುರಾಮ್‌ನಿಂದ ಬಂದೂಕು ಕಸಿದುಕೊಂಡು ಗಣೇಶ್ ವಿಸ್ಕಿನ್ ವಾಹನ ಹಾಗೂ ಬಂದೂಕೆರಡನ್ನೂ ಸುರೇಶ್‌ನಿಗೆ ನೀಡಿದ್ದ ಎನ್ನಲಾಗುತ್ತಿದ್ದು. ಅವೆರಡೂ ಎಲ್ಲಿವೆ ಎಂಬುದು ಸುರೇಶ್‌ನಿಗೆ ಗೊತ್ತಿದೆ ಎಂಬುದು ಎಸ್‌ಐಟಿ ವಾದ.

English summary
Gauri Lakesh murder case has been getting curies day by day. SIT till now arrested 11 accused. SIT police now searching for Bike and the gun which used to assassin Gauri Lankesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X