ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೌರಿ ಹತ್ಯೆ ದಿನವೇ ಪತ್ನಿಯನ್ನು ಮಂಗಳೂರಿಗೆ ಕರೆದೊಯ್ದಿದ್ದ ಆರೋಪಿ

By ಒನ್ ಇಂಡಿಯಾ ಡೆಸ್ಕ್
|
Google Oneindia Kannada News

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿ ಕೆ.ಟಿ. ನವೀನ್ ಕುಮಾರ್, 'ದೃಶ್ಯ' ಸಿನಿಮಾದ ಸನ್ನಿವೇಶವನ್ನು ಸೃಷ್ಟಿಸಲು ಮುಂದಾಗಿದ್ದ ಎನ್ನುವುದು ಎಸ್‌ಐಟಿ ತನಿಖೆ ವೇಳೆ ತಿಳಿದುಬಂದಿದೆ.

ಗೌರಿ ಹತ್ಯೆಯಾದ ದಿನದಂದು ಮದ್ದೂರಿನ 70 ಕಿ.ಮೀ. ದೂರದಲ್ಲಿರುವ ತನ್ನ ಮನೆಗೆ ತರಾತುರಿಯಲ್ಲಿ ಬಂದಿದ್ದ ನವೀನ್ ಕುಮಾರ್, ಪತ್ನಿಯನ್ನು ಮಂಗಳೂರಿನ ಆಶ್ರಮಕ್ಕೆ ಕರೆದೊಯ್ದಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಗೌರಿ ಲಂಕೇಶ್ ಹತ್ಯೆ ಆರೋಪಿ ಕಲಬುರ್ಗಿ ಕೊಲೆಯಲ್ಲೂ ಭಾಗಿ?ಗೌರಿ ಲಂಕೇಶ್ ಹತ್ಯೆ ಆರೋಪಿ ಕಲಬುರ್ಗಿ ಕೊಲೆಯಲ್ಲೂ ಭಾಗಿ?

ಈ ಮೂಲಕ ತಾನು ಮತ್ತು ತನ್ನ ಪತ್ನಿ ಇಬ್ಬರೂ ಅಂದು ಬೆಂಗಳೂರಿನಲ್ಲಿ ಇರಲಿಲ್ಲ. ಕೊಲೆ ಪ್ರಕರಣದಲ್ಲಿ ತನ್ನ ಕೈವಾಡ ಏನೂ ಇಲ್ಲ ಎಂಬ ಸನ್ನಿವೇಶ ಸೃಷ್ಟಿಸಲು ಆತ ಪ್ರಯತ್ನಿಸಿದ್ದ.

gauri lankesh murder accused took wife to mangaluru

ಹಿಂದೂ ಯುವಸೇನೆ ಮತ್ತು ಸನಾತನ ಸಂಸ್ಥಾದೊಂದಿಗೆ ಗುರುತಿಸಿಕೊಂಡಿದ್ದಾರೆ. ತಮ್ಮ ಯಾವುದೇ ಸದಸ್ಯ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿಲ್ಲ ಎಂದು ಸನಾತನ ಸಂಸ್ಥಾ ಹೇಳಿಕೆ ನೀಡಿತ್ತು.

ಗೌರಿ ಹತ್ಯೆಯ ಮಿಸ್ಟರಿ : ಅಸಲಿಗೆ ಟ್ರಿಗರ್ ಎಳೆದದ್ದು ಯಾರು? ಗೌರಿ ಹತ್ಯೆಯ ಮಿಸ್ಟರಿ : ಅಸಲಿಗೆ ಟ್ರಿಗರ್ ಎಳೆದದ್ದು ಯಾರು?

ಆದರೆ ಕೊಲೆಯಲ್ಲಿ ನವೀನ್ ನಂಟಿನ ಕುರಿತ ಶಂಕೆಯು ಆತನ ಪತ್ನಿ ನೀಡಿರುವ ಹೇಳಿಕೆಯಿಂದ ಬಲವಾಗಿದೆ.

'ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳುವ ಸಲುವಾಗಿ ಅವರು ಹುಬ್ಬಳ್ಳಿಗೆ ತೆರಳುತ್ತಿರುವುದಾಗಿ ಹೇಳಿದ್ದರು. ಆದರೆ, ಮರುದಿನವೇ ಮನೆಗೆ ಮರಳಿದ ಅವರು, ರೈಲಿನಲ್ಲಿ ಚೀಲ ಕಳೆದುಹೋಯಿತು ಎಂದು ಹೇಳಿದರು.

ಗೌರಿ ಹತ್ಯೆಗೂ ನಮಗೂ ಸಂಬಂಧವಿಲ್ಲ: ಸನಾತನ ಸಂಸ್ಥೆಗೌರಿ ಹತ್ಯೆಗೂ ನಮಗೂ ಸಂಬಂಧವಿಲ್ಲ: ಸನಾತನ ಸಂಸ್ಥೆ

ದೇಹಕ್ಕೆ ಆರಾಮಿಲ್ಲ ಎಂದು ಹೇಳಿದ ಅವರು, ನಾವು ಮಂಗಳೂರಿಗೆ ಹೋಗೋಣ ಎಂದರು. ರಾತ್ರಿ 9.45ರ ಸುಮಾರಿಗೆ ಮಂಗಳೂರು ತಲುಪಿದೆವು.

ಬಸ್ ನಿಲ್ದಾಣದಿಂದ ಕಾರ್‌ ಒಂದು ನಮ್ಮನ್ನು ಸನಾತನ ಆಶ್ರಮಕ್ಕೆ ಕರೆದುಕೊಂಡು ಬಂದಿತು. ಗೌರಿ ಲಂಕೇಶ್ ಅವರನ್ನು ಕೊಲೆ ಮಾಡಲಾಗಿದೆ ಎನ್ನುವುದನ್ನು ನಾವು ಮರುದಿನ ಬೆಳಿಗ್ಗೆ ಟಿವಿಯಲ್ಲಿ ನೋಡಿದೆವು' ಎಂದು ನವೀನ್ ಕುಮಾರ್ ಅವರ ಪತ್ನಿ ಸಿ.ಎನ್. ರೂಪಾ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.

ಸರ್ಕಾರಿ ಉದ್ಯೋಗಿಯಾಗಿರುವ ರೂಪಾ ಅವರ ಹೇಳಿಕೆಯನ್ನು ವಿಶೇಷ ತನಿಖಾ ದಳದ ಪೊಲೀಸರು ಮೇ 28ರಂದು ಸಲ್ಲಿಸಿರುವ ಚಾರ್ಜ್‌ಷೀಟ್‌ನಲ್ಲಿ ಅಡಕ ಮಾಡಿದ್ದಾರೆ.

ಸನಾತನ ಸಂಸ್ಥಾದೊಂದಿಗೆ ತನ್ನ ಗಂಡನಿಗೆ ಸಂಪರ್ಕವಿತ್ತು. ಶಿವಮೊಗ್ಗ ಮತ್ತು ಇತರೆ ಕಡೆಗಳಲ್ಲಿ ನಡೆದ ವಿವಿಧ ಕಾರ್ಯಕ್ರಮಗಳಿಗೆ ತನ್ನನ್ನು ಕರೆದೊಯ್ದಿದ್ದರು ಎಂದು ರೂಪಾ ವಿವರಿಸಿದ್ದರು.

ಅಲ್ಲದೆ, ಸಂಸ್ಥಾಕ್ಕೆ ಸೇರಿದ, 'ಅಣ್ಣ' ಎಂದು ಕರೆಯಲಾಗುತ್ತಿದ್ದ ಕನ್ನಡ ಮಾತನಾಡುವ ವ್ಯಕ್ತಿಯೊಬ್ಬರು ತಮ್ಮ ಮನೆಯಲ್ಲಿ ಒಂದು ದಿನ ಇದ್ದರು ಎಂದು ಅವರು ಹೇಳಿಕೆ ನೀಡಿದ್ದರು.

ಸನಾತನ ಸಂಸ್ಥಾ ಒಂದು ಧಾರ್ಮಿಕ ಸಂಸ್ಥೆ. ನಾವು ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾಗಳಲ್ಲಿ ಸಕ್ರಿಯರಾಗಿದ್ದೇವೆ. ನಮಗೆ ನವೀನ್ ಕುಮಾರ್ ಎಂಬ ಹೆಸರಿನ ಈ ವ್ಯಕ್ತಿ ಜತೆ ಯಾವುದೇ ನಂಟು ಇಲ್ಲ. ಆತನ ಹೆಸರನ್ನು ಮೊದಲ ಬಾರಿಗೆ ಕೇಳಿರುವುದು ಎಂದು ಸಂಸ್ಥಾದ ವಕ್ತಾರ ಚೇತನ್ ರಾಜಹಂಸ ಹೇಳಿದ್ದರು.

ಆದರೆ, ಹಿಂದೂ ಜಾಗೃತಿ ಸಭಾದ ವಕ್ತಾರ ಮೋಹನ್ ಗೌಡ ಅವರು, ನವೀನ್ ಸಂಘಟನೆ ಜತೆ ನಂಟು ಹೊಂದಿದ್ದನ್ನು ಒಪ್ಪಿಕೊಂಡಿದ್ದಾರೆ.

ನವೀನ್ ನಮಗೆ ಪರಿಚಿತ. ನಮ್ಮ ಆಹ್ವಾನದ ಮೇರೆ ಕಳೆದ ವರ್ಷ ಗೋವಾದಲ್ಲಿ ನಡೆದ ನಮ್ಮ ಅಧಿವೇಶನ್‌ದಲ್ಲಿ ಪಾಲ್ಗೊಂಡಿದ್ದರು. ಭಗತ್ ಸಿಂಗ್ ಕುರಿತು ಬೆಂಗಳೂರಿನಲ್ಲಿ ನಡೆಸಿದ ಧರ್ಮ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅವರ ಸ್ವಂತ ಊರು ಮದ್ದೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿಯೂ ಪಾಲ್ಗೊಂಡಿದ್ದರು ಎಂದು ಅವರು ತಿಳಿಸಿದ್ದಾರೆ.

English summary
accused Naveen Kumar who was arrested in the case of Gauri Lankesh murder, took his wife to Mangaluru ashram to create his alibi in the case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X