ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೊಲೀಸ್ ಮನೆಯಲ್ಲಿ ಕೂತೇ ಗೌರಿ ಹತ್ಯೆಗೆ ಸ್ಕೆಚ್ ಹಾಕಿದ್ದ ಹಂತಕರು!

By Manjunatha
|
Google Oneindia Kannada News

ಬೆಂಗಳೂರು, ಜುಲೈ 28: ಗೌರಿ ಲಂಕೇಶ್ ಹತ್ಯೆಯ ಬಗ್ಗೆ ಆಶ್ಚರ್ಯಕಾರಿ ಮಾಹಿತಿಯೊಂದು ಇದೀಗ ಹೊರಬಿದ್ದಿದೆ. ಪೊಲೀಸ್ ಇನ್ಸ್ಪೆಕ್ಟರ್ ಮನೆಯಲ್ಲಿ ಇದ್ದುಕೊಂಡೇ ಹಂತಕರು ಹತ್ಯೆಗೆ ಯೋಜನೆ ರೂಪಿಸಿದ್ದರು ಎಂಬ ಅಂಶ ಬಹಿರಂಗವಾಗಿದೆ.

ಮಾಗಡಿ ರಸ್ತೆ ಬಳಿ ಕಡಬಗೆರೆ ಕ್ರಾಸ್ ಬಳಿ ಪೊಲೀಸ್ ಇನ್ಸ್ಪೆಕ್ಟರ್ ಒಬ್ಬರಿಗೆ ಸೇರಿದ್ದ ಮನೆಯಲ್ಲಿಯೇ ಉಳಿದುಕೊಂಡಿದ್ದ ಗೌರಿ ಹಂತಕರು ಅಲ್ಲಿಯೇ ಗೌರಿ ಹತ್ಯೆಗೆ ಯೋಜನೆ ರೂಪಿಸಿದ್ದರು ಎಂಬ ಮಾಹಿತಿ ಎಸ್‌ಐಟಿ ತನಿಖೆಯಿಂದ ಗೊತ್ತಾಗಿದೆ.

ಅರೆ ಇದೇನಿದು? ಪರಶುರಾಮ್ ವಾಘ್ಮೋರೆ ಖುಲಾಸೆ!ಅರೆ ಇದೇನಿದು? ಪರಶುರಾಮ್ ವಾಘ್ಮೋರೆ ಖುಲಾಸೆ!

ಭ್ರಷ್ಟಾಚಾರ ನಿಗ್ರಹ ದಳಕ್ಕೆ ಸೇರಿದ ಪೊಲೀಸ್ ಅಧಿಕಾರಿಯ ಮನೆಯಲ್ಲಿಯೇ ಹಂತಕರು ವಾಸವಿದ್ದರು. ಬಾಡಿಗೆ ಮನೆಯನ್ನು ಇತ್ತೀಚೆಗೆ ತುಮಕೂರಿನಲ್ಲಿ ಬಂಧನವಾದ ಸುರೇಶ್ ಎಚ್.ಎಲ್ ಹೆಸರಿನಲ್ಲಿ ಪಡೆಯಲಾಗಿತ್ತು.

ಪೊಲೀಸ್ ಅಧಿಕಾರಿ ಮಡದಿ ಹೆಸರಲ್ಲಿ ಮನೆ

ಪೊಲೀಸ್ ಅಧಿಕಾರಿ ಮಡದಿ ಹೆಸರಲ್ಲಿ ಮನೆ

ಬಾಡಿಗೆ ಮನೆಯು ಪೊಲೀಸ್ ಅಧಿಕಾರಿಯ ಪತ್ನಿ ಸುಜಾತ ಎಂಬುವರ ಹೆಸರಿನಲ್ಲಿ ಇತ್ತು. ಬಡಿಗೆ ಮನೆಯ ಉಸ್ತುವಾರಿಯನ್ನು ಪೊಲೀಸ್ ಅಧಿಕಾರಿಯ ಸಂಬಂಧಿಕರು ನೋಡಿಕೊಳ್ಳುತ್ತಿದ್ದರು ಹಾಗಾಗಿ ಅಲ್ಲಿ ಯಾರು ಬಾಡಿಗೆಗೆ ಇದ್ದಾರೆ ಎಂಬುದು ಪೊಲೀಸ್ ಅಧಿಕಾರಿಗೆ ಗೊತ್ತಿರಲಿಲ್ಲ ಎಂದು ಎಸ್‌ಐಟಿ ಮೂಲಗಳು ಹೇಳಿವೆ.

ಗೌರಿ ಹತ್ಯೆ ಮಾಡಲು ಗುಂಡು ಕೊಟ್ಟಿದ್ದು ಸರ್ಕಾರಿ ನೌಕರ! ಗೌರಿ ಹತ್ಯೆ ಮಾಡಲು ಗುಂಡು ಕೊಟ್ಟಿದ್ದು ಸರ್ಕಾರಿ ನೌಕರ!

ಶಿಕ್ಷಕನಾಗಿ ಕಾರ್ಯ ನಿರ್ವಹಿಸಿದ್ದ

ಶಿಕ್ಷಕನಾಗಿ ಕಾರ್ಯ ನಿರ್ವಹಿಸಿದ್ದ

ಎಲ್‌.ಎಲ್.ಸುರೇಶ್ ಯಲಹಂಕ ಸೇರಿದಂತೆ ಕೆಲವು ಕಡೆ ಖಾಸಗಿ ಶಾಲೆಗಳಲ್ಲಿ ಶಿಕ್ಷಕನಾಗಿ ಕಾರ್ಯ ನಿರ್ವಹಿಸಿದ್ದ. ಆ ನಂತರ ತುಮಖೂರಿನ ಕುಣೀಗಲ್‌ಗೆ ತೆರಳಿ ಗುತ್ತಿಗೆದಾರನಾಗಿ ಕೆಲಸ ಪ್ರಾರಂಭಿಸಿದ್ದ. ಬಾಡಿಗೆ ಮನೆ ಪಡೆವಾಗ ಇಲ್ಲಿ ತನ್ನ ಸಹೋದರಿಯ ಮನೆ ನಿರ್ಮಾವಾಗುತ್ತಿದೆ ಅದರ ಗುತ್ತಿಗೆ ಪಡೆದಿದ್ದು ಕೆಲಸ ಮುಗಿಸಿ ತೆರಳುವುದಾಗಿ ಹೇಳಿದ್ದ.

2017ರ ಜೂನ್‌ನಲ್ಲೇ ಆಗಬೇಕಿದ್ದ ಗೌರಿ ಹತ್ಯೆ ಮುಂದೂಡಿದ್ದು ಈ ಕಾರಣಕ್ಕೆ 2017ರ ಜೂನ್‌ನಲ್ಲೇ ಆಗಬೇಕಿದ್ದ ಗೌರಿ ಹತ್ಯೆ ಮುಂದೂಡಿದ್ದು ಈ ಕಾರಣಕ್ಕೆ

ತಾನೇ ಅಡುಗೆ ಮಾಡಿ ಬಡಿಸುತ್ತಿದ್ದ ಸುರೇಶ್

ತಾನೇ ಅಡುಗೆ ಮಾಡಿ ಬಡಿಸುತ್ತಿದ್ದ ಸುರೇಶ್

ಎಚ್‌.ಎಲ್.ಸುರೇಶ್‌ ಪಡೆದಿದ್ದ ಬಾಡಿಗೆ ಇದಾಗಿದ್ದು ಆರೋಪಿಗಳಿಗೆ ವಾಸ್ಥವ್ಯಕ್ಕಾಗಿ ಆತನ ಮಡದಿ ಮಕ್ಕಳನ್ನು ತುಮಕೂರಿಗೆ ಕಳುಹಿಸಿದ್ದನಂತೆ. ಅಲ್ಲದೆ ಆತನೇ ಆರೋಪಿಗಳಿಗೆ ಪ್ರತಿನಿತ್ಯ ಊಟ ಉಪಚಾರದ ವ್ಯವಸ್ಥೆ ಮಾಡಿಕೊಡುತ್ತಿದ್ದ. ಹತ್ಯೆಗೆ ಬಳಸಿದ್ದ ಬೈಕ್ ಸಹ ಈತನೇ ನೀಡಿದ್ದ ಎಂದು ಎಸ್‌ಐಟಿ ಹೇಳುತ್ತಿದೆ.

ಮಾಗಡಿ ರಸ್ತೆಯಿಂದ ಗೌರಿ ಮನೆ ದೂರ

ಮಾಗಡಿ ರಸ್ತೆಯಿಂದ ಗೌರಿ ಮನೆ ದೂರ

ಮಾಗಡಿ ರಸ್ತೆಯಿಂದ ಗೌರಿ ಲಂಕೇಶ್ ಅವರ ಮನೆ ಬಹಳ ದೂರವಾಗುತ್ತದೆ ಎಂಬ ಕಾರಣದಿಂದ ಆರೋಪಿಗಳು ಕುಂಬಳಗೋಡು ಪ್ರದೇಶದಲ್ಲಿ ಮತ್ತೊಂದು ಬಾಡಿಗೆ ಮನೆ ಪಡೆದು ವಾಸವಿದ್ದರು ಎಂಬ ಮಾಹಿತಿ ಗೊತ್ತಾಗಿದೆ. ಈ ಬಾಡಿಗೆ ಮನೆಯನ್ನೂ ಸಹ ಸುರೇಶನೇ ಕೊಡಿಸಿದ್ದು ಎನ್ನಲಾಗಿದೆ.

ನನ್ನದೇ ಮನೆ ಎಂದಿದ್ದ ಸುರೇಶ್

ನನ್ನದೇ ಮನೆ ಎಂದಿದ್ದ ಸುರೇಶ್

ಎಸ್‌ಐಟಿ ತನಿಖೆ ವೇಳೆ ಮೊದಲಿಗೆ ಈ ಬಾಡಿಗೆ ಮನೆ ನನ್ನದೇ ಎಂದಿದ್ದ ಸುರೇಶ್ ಆರೋಪಿಗಳ ಬಗ್ಗೆ ಗೊತ್ತಿಲ್ಲ ಎಂದಿದ್ದ ಆದರೆ ಎಸ್‌ಐಟಿಯು ತನಿಖೆ ನಂತರ ಆ ಮನೆ ಪೊಲೀಸ್ ಅಧಿಕಾರಿಯೊಬ್ಬರ ಮಡದಿಯ ಹೆಸರಿನಲ್ಲಿ ಇರುವುದು ಗೊತ್ತಾಗಿದೆ.

ಸುರೇಶ್ ಸಂಬಂಧಿಗಳಿಂದ ಆರೋಪ

ಸುರೇಶ್ ಸಂಬಂಧಿಗಳಿಂದ ಆರೋಪ

ಮೊದಲಿಗೆ ಎಸ್‌ಐಟಿ ಅಧಿಕಾರಿಗಳು ಸುರೇಶ್‌ನನ್ನು ಸಾಕ್ಷವನ್ನಾಗಿ ಬಳಸಿಕೊಂಡಿದ್ದರು. ಆದರೆ ಈಗ ಆರೋಪಿಯನ್ನಾಗಿ ಮಾಡಿದ್ದಾರೆ. ಮುಂಚೆ ಎರಡು ದಿನಕ್ಕೊಮ್ಮೆ ತುಮಕೂರಿನಿಂದ ಬೆಂಗಳೂರಿಗೆ ಸಾಕ್ಷಿ ಹೇಳಲು ಕರೆಸಿಕೊಳ್ಳುತ್ತಿದ್ದರೆ ಆದರೆ ಈಗ ಒಮ್ಮೆಲೆ ಆರೋಪಿ ಎನ್ನುತ್ತಿದ್ದಾರೆ. ನನ್ನ ಸಹೋದರನಿಗೆ ಎಸ್‌ಐಟಿಯು ಹಿಂಸೆ ನೀಡಿದೆ ಎಂದು ಸುರೇಶ್ ಸಹೋದರ ಹಾಗೂ ಸುರೇಶ್ ಪರ ವಕೀಲರು ಆರೋಪಿಸಿದ್ದಾರೆ.

ಬೈಕ್ ಹಾಗೂ ಬಂದೂಕು ಬಗ್ಗೆ ಮಾಹಿತಿ

ಬೈಕ್ ಹಾಗೂ ಬಂದೂಕು ಬಗ್ಗೆ ಮಾಹಿತಿ

ಹತ್ಯೆಯ ದಿನ ಪರಶುರಾಮ್ ವಾಘ್ಮೋರೆ ಧರಿಸಿದ್ದ ಉಡುಪು, ಹೆಲ್ಮೆಟ್‌ಗಳನ್ನು ಸುರೇಶನೇ ಸುಟ್ಟು ಹಾಕಿದ್ದಾನೆ ಎಂದು ಎಸ್‌ಐಟಿ ಆರೋಪಿಸುತ್ತಿದೆ. ಹತ್ಯೆಗೆ ಬಳಕೆ ಆದ ಬೈಕ್ ಅನ್ನು ಸುರೇಶನೇ ವ್ಯವಸ್ಥೆ ಮಾಡಿದ್ದ ಆ ಬೈಕ್ ಎಲ್ಲಿದೆ ಎಂಬುದು ಸುರೇಶನಿಗೆ ಗೊತ್ತಿದೆ ಎಂದು ಎಸ್‌ಐಟಿ ಹೇಳುತ್ತಿದೆ.

English summary
Gauri Lankesh assassins planed Gauri Lankesh murder sitting in Police's house. They first stayed in rented house near Magadi road which is belongs to a police inspector.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X