ಗದಗಿನಲ್ಲಿ ಹಗಲಿನಲ್ಲಿಯೂ ಉರಿಯುವ ಬೀದಿ ದೀಪಗಳು
ಗದಗ, ನವೆಂಬರ್, 26- ರಾಜ್ಯ ಸರಕಾರ ರಾಜ್ಯದೆಲ್ಲೆಡೆ ಲೋಡ ಶೆಡ್ಡಿಂಗ್ ಜಾರಿ ಮಾಡಿ
ವಿದ್ಯುತ್ ಉಳಿತಾಯ ಮಾಡುತ್ತಿದೆ. ಮೇಲಾಗಿ ಗ್ರಾಮೀಣ ಪ್ರದೇಶಗಲ್ಲಿ ಹಗಲು
ಹೊತ್ತಿನಲ್ಲಿಯೇ ವಿದ್ಯುತ್ ಪೂರೈಕೆ ಇರುವುದಿಲ್ಲ. ಸಂಜೆ ವಿದ್ಯುತ್ ಬಂದರೂ ಕೂಡ ಸಿಂಗಲ್ ಫೇಸ್ ಇರುತ್ತದೆ.[ಹತ್ತಿ ಗಿರಣಿಗಳಿಂದ ವಾಯುಮಾಲಿನ್ಯ: ಮಾಲೀಕರಿಗೆ ಎಚ್ಚರಿಕೆ]

ಆದರೆ ಗದುಗಿನ ರೈಲ್ವೆ ಸ್ಟೇಷನ್ ರಸ್ತೆಯಲ್ಲಿ ಮಧ್ಯಾಹ್ನ 12 ಗಂಟೆಯಾದರೂ ಬೀದಿ ದೀಪಗಳು
ಉರಿಯುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈಗಾಗಲೇ ಲೋಡ್ ಶೆಡ್ಡಿಂಗ್
ನಿಂದ ಪರಿತಪಿಸುತ್ತಿರುವ ಜನತೆ ಈ ದೃಶ್ಯ ನೋಡಿ ಸರ್ಕಾರಕ್ಕೆ ಹಿಡಿಶಾಪ
ಹಾಕುತ್ತಿದ್ದಾರೆ. ಸಂಭಂದಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ಇದುವರೆಗೂ ಲೈಟ್
ಉರಿಯುತ್ತಿವೆ ಎಂದು ಜೆಡಿಎಸ್ (ಎಸ್) ಯುವ ಮುಖಂಡ ಪ್ರಭುರಾಜ ಗೌಡ ಪಾಟೀಲ ದೂರಿದರು.
ಈ ಹಿಂದೆಯೂ ಹಲವಾರು ಬಾರಿ ಇದೇ ರೀತಿ ಹಗಲು ಹೊತ್ತಿನಲ್ಲಿ ಕೆಲವೊಂದು ಬಡಾವಣೆಗಳಲ್ಲಿ
ಬೀದಿ ದೀಪಗಳು ಹೊತ್ತಿ ಉರಿದಿದ್ದವು. ಆ ಸಮಯದಲ್ಲಿ ಹಿರಿಯ ಅಧಿಕಾರಿಗಳು ಯಾರ ಮೇಲೆಯೂ
ಕ್ರಮ ತೆಗೆದುಕೊಳ್ಳಲಿಲ್ಲ. ಈಗಲಾದರೂ ತಪ್ಪು ಮಾಡಿದವರ ಮೇಲೆ ಸೂಕ್ತ ಕ್ರಮ
ಕೈಗೊಳ್ಳಬೇಕೆಂದು ಮತ್ತೋಬ್ಬ ಜೆಡಿಎಸ್ ಧುರೀಣ ಸಂತೋಷ ಪಾಟೀಲ ಆಗ್ರಹಿಸಿದ್ದಾರೆ.












Click it and Unblock the Notifications