ಕುಮಾರಸ್ವಾಮಿ ರಾಜೀನಾಮೆ ಕೊಡಿ ಅಂದ್ರೆ ಕೊಡ್ತಾರಾ?.. ಸಿದ್ದರಾಮಯ್ಯ ಯಾಕೆ ನೀಡ್ಬೇಕು?: ಜೆಡಿಎಸ್ ಶಾಸಕ ಜಿಟಿ ದೇವೇಗೌಡ
ಬೆಂಗಳೂರು, ಅಕ್ಟೋಬರ್, 03: ಮುಡಾ ಹಗರಣ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ವಿರುದ್ಧ ಮೈಸೂರು ಲೋಕಾಯುಕ್ತದಲ್ಲಿ ಎಫ್‌ಆರ್ ದಾಖಲಾಗಿತ್ತು. ಬಳಿಕ ಅವರ ಪತ್ನಿ ಪಾರ್ವತಿಯವರೇ 14 ಸೈಟ್‌ಗಳನ್ನು ಮುಡಾಗೆ ಹಿಂತಿರುಗಿಸಿದ್ದರು. ಇಷ್ಟಾದರೂ ಕೂಡ ಸಿಎಂ ವಿರುದ್ಧ ವಿಪಕ್ಷಗಳು ಮಾತ್ರ ಕೆಂಡಕಾರುತ್ತಲೇ ಇವೆ. ಇದರ ನಡುವೇ ಇದೀಗ ಜೆಡಿಎಸ್ ಶಾಸಕರೊಬ್ಬರು ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದ್ದಾರೆ.
ಸಿಎಂ ಸಿದ್ದರಾಮಯ್ಯ ವಿರುದ್ಧ ಮುಡಾ ಹಗರಣ ಆರೋಪ ಕೇಳಿ ಬಂದಾಗಿದ್ದ ವಿಪಕ್ಷಗಳು ಅವರ ಮೇಲೆ ಮುಗಿಬಿದ್ದಿದ್ದವು. ಅಲ್ಲದೆ, 14 ಸೈಟ್‌ಗಳನ್ನು ಹಿಂತಿರುಗಿಸಿದಾಗಲೂ ಕೂಡ ಮತ್ತೆ ಸಿಎಂ ಸಿದ್ದರಾಯ್ಯ ವಿರುದ್ಧ ಬಿಜೆಪಿ, ಜೆಡಿಎಸ್ ಪಕ್ಷಗಳ ನಾಯಕರು ವಾಗ್ದಾಳಿ ಮುಂದುವರೆಸಿದ್ದು, ಸಿದ್ದರಾಮಯ್ಯ ಅವರನ್ನು ರಾಜೀನಾಮೆ ಕೊಡುವಂತೆ ಪಟ್ಟು ಹಿಡಿದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಜೆಡಿಎಸ್ ಶಾಸಕ ಅಚ್ಚರಿ ಹೇಳಿಕೆ ನೀಡುವ ಮೂಲಕ ಗಮನ ಸೆಳೆದಿದ್ದಾರೆ.

ಮೈಸೂರಿನಲ್ಲಿ ದಸರಾ ಉದ್ಘಾಟನೆ ಸಮಾರಂಭದ ವೇದಿಕೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು "ಬರೀ ರಾಜೀನಾಮೆ ಕೇಳೋದಿಲ್ಲ. ಕೇಂದ್ರದಿಂದ ರಾಜ್ಯಕ್ಕೆ ಏನು ತರಬೇಕೋ ಅದನ್ನು ಮೊದಲು ಮಾಡಿ. ಇಲ್ಲದಿದ್ದರೆ, ಯಾವುದೇ ಸುಮ್ಮ ಆರೋಪ ಮಾಡುತ್ತಾ ಹೋದರೆ, ಕೆಲಸಗಳು ಹೇಗೆ ಆಗುತ್ತವೆ. ಜನರ ಸಮಸ್ಯೆಯನ್ನು ಕೇಳುವವರು ಯಾರು." ಎಂದು ಪ್ರಶ್ನಿಸುವ ಮೂಲಕ ಬಿಜೆಪಿ, ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಅಲ್ಲದೆ ಇದೇ ವೇಳೆ ಎಚ್.ಡಿ.ಕುಮಾಸ್ವಾರಸ್ವಾಮಿಯರನ್ನು ರಾಜೀನೇಮೆ ಕೇಳಿದರೆ ಅವರು ಕೊಡ್ತಾರಾ? ಹಾಗೆಯೇ ಸಿದ್ದರಾಮಯ್ಯ ಕೂಡ ರಾಜೀನಾಮೆ ಕೊಡುವ ಅಗತ್ಯವಿಲ್ಲ. ರಾಜೀನೇಮೆ ಕೊಟ್ಟರೆ ಜನರ ಕಷ್ಟಗಳನ್ನು ಆಲಿಸುವವರು ಯಾರು ಎಂದು ಹೇಳುವ ಮೂಲಕ ನೇರವಾಗಿ ಜೆಡಿಎಸ್ ವಿರುದ್ಧ ಕಾರ್ಯಕ್ರಮ ವೇದಿಕೆಯಲ್ಲೇ ವಾಗ್ದಾಳಿ ನಡೆಸಿದರು.
"ಸಿದ್ದರಾಮಯ್ಯಗೆ ರಾಜೀನಾಮೆ ಕೊಡುವಂತೆ ಕೋರ್ಟ್ ಹೇಳಿದೆಯಾ? ಎಫ್‌ಐಆರ್ ಆದವರು ರಾಜೀನಾಮೆ ಕೊಡಬೇಕಾಗಿದ್ದರೆ ಜೆಡಿಎಸ್‌ನಲ್ಲಿರುವವರು ರಾಜೀನಾಮೆ ಕೊಡ್ತಾರಾ? ಕೇಂದ್ರದಲ್ಲಿ ಮಂತ್ರಿ ಆದವರಿಗೆ ಸ್ವಲ್ಪನಾದ್ರೂ ಜವಾಬ್ದಾರಿ ಇರಬೇಕು. ಕುಮಾರಸ್ವಾಮಿಯವರಿಗೆ ರಾಜೀನಾಮೆ ಕೊಡು ಅಂದ್ರೆ ಅವರು ಕೊಡುತ್ತಾರಾ? 136 ಸ್ಥಾನಗಳನ್ನು ಗೆದ್ದು ಸಿಎಂ ಆಗಿರುವ ಸಿದ್ದರಾಮಯ್ಯ ರಾಜೀನಾಮೆ ನೀಡಲು ಆಗುತ್ತಾ? ರಾಜೀನಾಮೆ ಕೊಡಿ ಅಂದರೆ ನೀಡುವುದಕ್ಕೆ ಸಾಧ್ಯವೇ," ಎಂದು ಪ್ರಶ್ನಿಸಿದರು.
"ಈಗಾಗಲೇ ಸೈಟ್‌ಗಳನ್ನೆಲ್ಲ ವಾಪಾಸ್ ಕೊಟ್ಟಿದ್ದಾರೆ. ತನಿಖೆ ಕೂಡ ನಡೆಯುತ್ತಿವೆ. ಆದರೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡುವ ಅಗತ್ಯ ಇಲ್ಲ," ಎಂದು ಅಚ್ಚರಿ ಹೇಳಿಕೆ ನೀಡಿದರು. ಮಾತು ಮುಂದುವರೆಸಿದ ಅವರು, ಸಿದ್ದರಾಮಯ್ಯ ತಾಯಿ ಚಾಮುಂಡೇಶ್ವರಿ ವರಪುತ್ರ. ಚಾಮುಂಡೇಶ್ವರಿ ಕ್ಷೇತ್ರದಿಂದ ಸಿದ್ದರಾಮಯ್ಯ ಅವರು ರಾಜಕೀಯ ಆರಂಭಿಸಿ ಇಲ್ಲಿಯವರೆಗೆ ಬೆಳೆದಿದ್ದಾರೆ ಎಂದಯ ಹೇಳಿದರು.
"ಸಿದ್ದರಾಮಯ್ಯ ಅವರು ತಾಯಿ ಚಾಮುಂಡಿ ದೇವಿ ಮತ್ತು ಜನರ ಆಶೀರ್ವಾದದಿಂದ ಎರಡು ಬಾರಿ ಸಿಎಂ ಆಗಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಇಬ್ಬರು ಸೇರಿ ಅವರನ್ನು ಸೋಲಿಸಲು ಯತ್ನಿಸಿದೆವು. ಆದರೆ ಚಾಮುಂಡಿ ಆಶೀರ್ವಾದಿಂದ ಸಿದ್ದರಾಮಯ್ಯ ಅಂದು ಜಯಗಳಿಸಿದ್ದರು. ಈ ಮೂಲ ಜೋಡೆತ್ತಿನ ರೀತಿಯಲ್ಲೇ ಸಿದ್ದರಾಮಯ್ಯ, ಡಿಕೆಶಿವಕುಮಾರ್ ಸರ್ಕಾರವನ್ನು ತಂದರು ಎಂದು ಹೇಳಿದರು.












Click it and Unblock the Notifications