ಹನಿಟ್ರ್ಯಾಪ್: KN ರಾಜಣ್ಣ ದೂರು ಕೊಡದಂತೆ ಒತ್ತಡವಿದೆಯಾ?: ಜಿ.ಪರಮೇಶ್ವರ ಮಹತ್ವದ ಹೇಳಿಕೆ
ಬೆಂಗಳೂರು, ಮಾರ್ಚ್ 23: ಸದನದಲ್ಲಿ ಚರ್ಚೆಯಾದ ಬಳಿಕ ಕರ್ನಾಟಕ ರಾಜಕಾರಣದಲ್ಲಿ ಮಾತ್ರವಲ್ಲದೇ ದೇಶಾದ್ಯಂತ ಸದ್ದು ಮಾಡುತ್ತಿರುವ 'ಹನಿಟ್ರ್ಯಾಪ್' ಪ್ರಕರಣವು ಚಿಕ್ಕದಲ್ಲ. ಈ ಬಗ್ಗೆ ಮುಕ್ತವಾಗಿ ಚರ್ಚೆಯಾಗಿದ್ದು, ಗಂಭೀರ ಆರೋಪ ಕೇಳಿ ಬಂದಿದೆ. ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಹನಿಟ್ರ್ಯಾಪ್ ಬಗ್ಗೆ ಆರೋಪಿಸಿದ ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರು ದೂರು ನೀಡುವುದು ವಿಳಂಬವಾಗಿದೆ ಎಂದು ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ತಿಳಿಸಿದ್ದಾರೆ.
ಭಾನುವಾರ ಬೆಂಗಳೂರಿನಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಜಿ.ಪರಮೇಶ್ವರ ಅವರು, ರಾಜಣ್ಣ ದೂರು ಕೊಡೋದಾಗಿ ಹೇಳಿದ್ದಾರೆ, ಇನ್ನೂ ಕೊಟ್ಟಿಲ್ಲ. ಅವರು ದೂರು ಕೊಟ್ಟರೆ ತನಿಖೆಗೆ ವಹಿಸುತ್ತೇವೆ. ಈ ಗಂಭೀರ ಆರೋಪದ ಕುರಿತು ಮುಖ್ಯಮಂತ್ರಿಗಳ ಜೊತೆಗೆ ಉನ್ನತ ಮಟ್ಟದ ತನಿಖೆ ನಡೆಸುವ ಕುರಿತು ಚರ್ಚೆ ಮಾಡುತ್ತೇವೆ. ಯಾವ ತನಿಖೆಗೆ ಕೊಡಬೇಕು ಎಂದು ಮುಖ್ಯಮಂತ್ರಿ ಜೊತೆಗಿನ ಸಮಾಲೋಚನೆ ಬಳಿಕ ಒಗತ್ತಾಗಲಿದೆ ಎಂದರು.

ರಾಜ್ಯದಲ್ಲಿ ಹನಿಟ್ರ್ಯಾಪ್ ಬಗ್ಗೆ ಕೇಳಿ ಬರುತ್ತಿದ್ದಂತೆ ಈಗಾಗಲೇ ಯಾವ ತನಿಖೆಗೆ ಕೊಡಬೇಕು ಅಂತ ಪ್ರಾಥಮಿಕವಾಗಿ ನಾವು ಅಂದುಕೊಂಡಿದ್ದೇವೋ ಹಾಗೇ ಮಾಡುವ ಮೊದಲು ಮುಖ್ಯಮಂತ್ರಿಗಳ ಜೊತೆಗೆ ಸಮಾಲೋಚಿಸುತ್ತೇವೆ. ಇದೊಂದು ಚಿಕ್ಕ ಪ್ರಕರಣವಲ್ಲ. ಹೀಗಾಗಿ ಸರ್ಕಾರ ಇದನ್ನು ಗಂಭೀರ ಸ್ವರೂಪದ ಪ್ರಕರಣವಾಗಿ ಪರಿಗಣಿಸಲಿದೆ.
ಸಚಿವ ಕೆ.ಎನ್.ರಾಜಣ್ಣ ಅವರು ಶನಿವಾರ ದೂರು ನೀಡಿದ್ದರೆ, ಯಾವ ಸ್ವರೂಪದ ತನಿಖೆ ಮಾಡಬಹುದೆಂದು ಘೋಷಣೆ ಮಾಡುತ್ತಿದ್ದೆವು. ಆದರೆ ಅವರು ದೂರು ನೀಡಿಲ್ಲ. ಇನ್ನೂ ಈ ಹನಿಟ್ರ್ಯಾಪ್ ಪ್ರಕರಣವನ್ನು ಸಿಬಿಐ ತನಿಖೆಗೆ, ನ್ಯಾಯಾಧೀಶ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಗೆ ಆಗ್ರಹಿಸಿದ್ದಾರೆ.
ಈ ಬಗ್ಗೆ ಸರ್ಕಾರ ತನ್ನದೇ ಆದ ರೀತಿಯಲ್ಲಿ ಪರಿಶೀಲಿಸಿ ತಿರ್ಮಾನಿಸುತ್ತದೆ. ಇಷ್ಟು ದೊಡ್ಡದೊಂದು ಪ್ರಕರಣದ ಚರ್ಚೆಗಳು, ಆರೋಪ ಶಕ್ತಿ ಸೌಧ ವಿಧಾನಸೌಧದಲ್ಲಿ ಅಧಿವೇಶ ವೇಳೆಯ ನಡೆದಿದೆ. ಹೀಗಿದ್ದಾಗ ಇದೊಂದು ಸಣ್ಣ ಪ್ರಕರಣವೆಂಬಂತೆ ನೋಡಲು ಆಗುವುದಿಲ್ಲ. ಏನೆಲ್ಲ ತನಿಖೆ ಕೈಗೊಂಡು, ಕ್ರಮ ವಹಿಸಬೇಕೋ, ಅದನ್ನು ಸರ್ಕಾರ ಮಾಲಿದೆ ಎಂದರು.

ಸದನದಲ್ಲಿ ಏಕಾಏಕಿ ಕೆ.ಎನ್. ರಾಜಣ್ಣ ಅವರು ಹನಿಟ್ರ್ಯಾಪ್ ಬಗ್ಗೆ ಮಾತಾಡಿದ್ದಕ್ಕೆ ಹೈಕಮಾಂಡ್ ಬೇಸರವಾಗಿದೆಯೇ? ಎಂಬ ಪ್ರಶ್ನೆಗೆ, ಈ ಬಗ್ಗೆ ಮಾಹಿತಿ ಇಲ್ಲ. ಇದೆಲ್ಲವನ್ನು ಕೆಪಿಸಿಸಿ ಅಧ್ಯಕ್ಷರು, ಡಿಸಿಎಂ ಡಿಕೆ ಶಿವಕುಮಾರ್ ಅವರು ನೋಡಿಕೊಳ್ಳುತ್ತಾರೆ.
ಹನಿಟ್ರ್ಯಾಪ್ ದೂರು ನೀಡದಂತೆ ರಾಜಣ್ಣ ಮೇಲೆ ಒತ್ತಡ?
ಹನಿಟ್ರ್ಯಾಪ್ ಬಗ್ಗೆ ಮುಕ್ತವಾಗಿ ಸದನದಲ್ಲಿ ಮಾತನಾಡಿದ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ದೂರು ನೀಡದಂತೆ ಅವರ ಮೇಲೆ ಒತ್ತಡ ಇದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಸಚಿವರು, ದೂರು ನೀಡದಂತೆ ಒತ್ತಡ ಕುರಿತು ನನ್ನೊಂದಿಗೆ ಯಾರು ಮಾತನಾಡಿಲ್ಲ. ಹೈಕಮಾಂಡ್ ವರಿಷ್ಠರು ಸಹ ಮಾತನಾಡಿಲ್ಲ.
ರಾಜಕಾರಣಿಗಳು ಸೇರಿದಂತೆ ರಾಜ್ಯದಲ್ಲಿ ಒಟ್ಟು 48 ಜನರ ಹನಿಟ್ರ್ಯಾಪ್ ನಡೆದಿದೆ ಎನ್ನಲಾಗಿದೆ. ಇಷ್ಟು ಸಂಖ್ಯೆಯಲ್ಲಿ ಪ್ರಯತ್ನ ನಡೆದಿದೆ ಎಂದು ಊಹೆ ಸಹ ಮಾಡಿರಲಿಲ್ಲ. ಇಂತಹ ಕೇಸ್ ಗಳಲ್ಲಿ ಊಹೆ ಮಾಡಿ ತನಿಖೆಗೆ ಕೊಡಲು ಆಗುವುದಿಲ್ಲ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.












Click it and Unblock the Notifications