FY 2022-23ರ ಸಾಲಿನಲ್ಲಿ ಗರಿಷ್ಠ ₹8000 ಕೋಟಿ ಆದಾಯ ಗಳಿಸಿದ ನೈಋತ್ಯ ರೈಲ್ವೆ (SWR)

ಬೆಂಗಳೂರು, ಮೇ 25: ನೈಋತ್ಯ ರಲ್ವೆ ವಿಭಾಗ (SWR) 2022-23ರ ಆರ್ಥಿಕ ವರ್ಷದಲ್ಲಿ ಸಾರ್ವಜನಿಕ ಸೇವೆ- ಸರಕು ಸೇವೆಗಳಲ್ಲಿ ಹಾಗೂ ಆದಾಯ ಗಳಿಕೆಯಲ್ಲಿ ದಾಖಲೆ ಬರೆದಿದೆ. ಹಿಂದಿನ ವರ್ಷಕ್ಕಿಂತ ಶೇಕಡಾ 30ರಷ್ಟು ಆದಾಯವನ್ನು ಹೆಚ್ಚಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

2003 ರಲ್ಲಿ ರಚನೆಯಾದ ನೈಋತ್ಯ ರಲ್ವೆ ವಿಭಾಗ ಕಳೆದ ಆರ್ಥಿಕ ಸಾಲು 2022-23 ರಲ್ಲಿ ₹8,071 ಕೋಟಿಗಳ ಅತ್ಯಧಿಕ ಆದಾಯ ಸಂಗ್ರಹಿಸಿದೆ. ಇಷ್ಟು ಆದಾಯ ಅತ್ಯುತ್ತಮ ಸರಕು ಸೇವೆಯ ಕಾರ್ಯಕ್ಷಮತೆ ಹಾಗೂ ವಾರ್ಷಿಕ 150.34 ಮಿಲಿಯನ್ ಪ್ರಯಾಣಿಕರಿಗೆ ಸೇವೆ ನೀಡಿದ್ದ ಕೊಡುಗೆ ಎಂದು ರೈಲ್ವೆ ಇಲಾಖೆ ಪ್ರಕಟಣೆ ಹೊರಡಿಸಿದೆ.

South Western Railway

ನೈಋತ್ಯ ರೈಲ್ವೆ ವಿಭಾಗ ಆರಂಭವಾದ ನಂತರ ಇದೇ ಮೊದಲ ಬಾರಿಗೆ ಒಟ್ಟು ಆದಾಯ ₹8,000 ಕೋಟಿ ಅಧಿಕ ಆದಾಯ ಕಂಡಿದೆ. ಕಳೆದ ಸಾಲಿನಲ್ಲಿ (2022-23) ದಾಖಲಾದ ಆದಾಯ 2021-22ರಲ್ಲಿ ದಾಖಲಾಗಿದ್ದ ಆದಾಯದಕ್ಕಿಂತ ಸರಿಮಾರು ಶೇಕಡಾ 30% ರಷ್ಟು ಹೆಚ್ಚು ಎಂದು ರೈಲ್ವೆ ವಿಭಾಗ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅನೀಶ್ ಹೆಗ್ಡೆ ತಿಳಿಸಿದ್ದಾರೆ.

ಇನ್ನು ಒಟ್ಟು ಆದಾಯದ ವಿವರ ನೋಡುವುದಾದರೆ ನೋಂದಣಿಯಿಂದ ₹2,756 ಕೋಟಿ, ಪ್ರಯಾಣಿಕರ ಸಾಗಾಟದಿಂದ ₹4,696 ಕೋಟಿ ಸಂಗ್ರಹವಾಗಿದೆ. ಸರಕು ಸೇವೆಯ ಕಾರ್ಯಕ್ಷಮತೆಯಿಂದ ₹348 ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿದೆ. ಅದಲ್ಲದೇ ವಿವಿಧ ಮೂಲಗಳಿಂದ ಒಟ್ಟು ₹271 ಕೋಟಿ ರೂಪಾಯಿ ಹಣ ಗಳಿಕೆ ಆಗಿದೆ.

ಇತರೆ ವ್ಯವಸ್ಥೆಗಳಾದ ಮದುವೆಯಂತಹ ಕಾರ್ಯಗಳಿಗೆ, ಯಾತ್ರೆಗಳಿಗೆ ಹಾಗೂ ಚಲನಚಿತ್ರಗಳ ಶೂಟಿಂಗ್‌ಗೆ ರೈಲು ಗಾಡಿಯನ್ನು ಬಾಡಿಗೆ ಪಡೆಯುವುದರಿಂದ ಒಂದಷ್ಟು ಪ್ರಮಾಣದಲ್ಲಿ ಆದಾಯ ಗಳಿಕೆ ಆಗಿದೆ.

South Western Railway

ಆದಾಯ ಗಳಿಕೆ ಮೂಲಗಳ ವಿವರ

ಒಟ್ಟು 3,506 ಪಾರ್ಸೆಲ್ ವ್ಯಾನ್‌ಗಳನ್ನು ಲೀಸ್‌ಗೆ ನೀಡಲಾಗಿದೆ. 82,200 ಟನ್ ಅಗತ್ಯ ಸರಕುಗಳನ್ನು ಸಾಗಿಸುವ ಮೂಲಕ ರೈಲ್ವೆ ವಿಭಾಗ ರೂ.57 ಕೋಟಿ ಆದಾಯ ಸಂಗ್ರಹಿಸಿದೆ. 170 ಲೀಸ್ ಪಡೆದ ಪಾರ್ಸೆಲ್ ಕಾರ್ಗೋ ಎಕ್ಸ್‌ಪ್ರೆಸ್ ರೈಲು (PCET) 60,493 ಟನ್ ಸರಕುಗಳನ್ನು ಸಾಗಿಸಿ ರೂ.28 ಕೋಟಿ ಆದಾಯಕ್ಕೆ ಕೊಡುಗೆ ನೀಡಿದೆ ಎಂದು ಅವರು ತಿಳಿಸಿದ್ದಾರೆ.

ಕಳೆದ ವರ್ಷದ ನೈಋತ್ಯ ರೈಲ್ವೆಯು 47.7 ಮಿಲಿಯನ್ ಟನ್‌ಗಳ ಅತ್ಯಧಿಕ ಸರಕು ಲೋಡ್ ಅನ್‌ಲೋಡ್ ಮಾಡಿದೆ. 2007-08 ರ ವರ್ಷದಲ್ಲಿ 46.24 ಮಿಲಿಯನ್ ಟನ್‌ಗಳಷ್ಟು ಸರಕು ಸೇವೆ ನೀಡಿದ್ದ ದಾಖಲೆಯು ಈ ಬಾರಿ ಬ್ರೇಕ್ ಆಗಿದೆ.

ಈ ರೈಲ್ವೆ ವಿಭಾಗವು ತನ್ನ ಸೇವೆಯಲ್ಲಿ ಗ್ರಾಹಕ-ಕೇಂದ್ರಿತ ವಿಧಾನದಿಂದ, ವಿಭಾಗದ ಮೂರು ಕಡೆಗಳಲ್ಲಿ ಸ್ಥಾಪಿಸಲಾದ ವ್ಯಾಪಾರ ಅಭಿವೃದ್ಧಿ ಘಟಕಗಳು, ಉತ್ಪನ್ನ ಮಾರಾಟ ಮಾಡುವ ಸಂಘಟಿತ ವ್ಯವಸ್ಥೆಯು ಸಹ ಅಧಿಕ ಆದಾಯ ಸಂಗ್ರಹಕ್ಕೆ ಕಾರಣವಾಗಿದೆ ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿದೆ.

2021-22ರ ಹಿಂದಿನ ವರ್ಷದ 238 ರೇಕ್‌ಗಳಿಗೆ ಹೋಲಿಸಿದರೆ 2022-23ರಲ್ಲಿ 509 ರೇಕ್‌ಗಳ ಆಟೋಮೊಬೈಲ್‌ ಸಾಗಣೆ ಮಾಡಿದೆ. ಖನಿಜ ತೈಲ 2.05 ಮಿಲಿಯನ್ ಟನ್ (MT), ಸಿಮೆಂಟ್ 1.07 MT, ಮತ್ತು ಸಕ್ಕರೆ (1.45 MT) ನಲ್ಲಿ ಅತಿ ಹೆಚ್ಚು ಲೋಡಿಂಗ್ ಮಾಡಿ ದಾಖಲೆ ಬರೆದಿದೆ. 2022-23 ರಲ್ಲಿ ಒಟ್ಟು ಪ್ರಯಾಣಿಕರಿಗೆ 150.34 ಮಿಲಿಯನ್ ಜನರಿಗೆ ಸೇವೆ ನೀಡಿದ್ದು, ಇದು ಈವರೆಗಿನ ದಾಖಲೆಯಾಗಿದೆ ಎಂದು ನೈಋತ್ಯ ರೈಲ್ವೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+