ಕರ್ನಾಟಕ ಸೇರಿದಂತೆ 8 ರಾಜ್ಯಗಳಲ್ಲಿ ಭಾನುವಾರ ಪೆಟ್ರೋಲ್ ರಜಾ

Subscribe to Oneindia Kannada

ಬೆಂಗಳೂರು, ಏಪ್ರಿಲ್ 19: ಇನ್ನು ಮುಂದೆ ಕರ್ನಾಟಕದಲ್ಲಿ ಭಾನುವಾರ ಪೆಟ್ರೋಲ್ ಸಿಗುವುದಿಲ್ಲ. ಮೇ 14ರಿಂದ ಆರಂಭಿಸಿ ಕರ್ನಾಟಕದಾದ್ಯಂತ ಭಾನುವಾರದಂದು ಪೆಟ್ರೋಲ್ ಪಂಪ್ ಗಳನ್ನು ಬಂದ್ ಮಾಡಲಾಗುತ್ತದೆ.

ಇಂಧನ ಉಳಿಸಲು ಪ್ರಧಾನಿ ನರೇಂದ್ರ ಮೋದಿ ನೀಡಿದ ನಿರ್ದೇಶನದಂತೆ ಪೆಟ್ರೋಲಿಯಂ ಡೀಲರ್ ಗಳ ಒಕ್ಕೂಟ ಈ ನಿರ್ಧಾರಕ್ಕೆ ಬಂದಿದೆ. ಕರ್ನಾಟಕ ಸೇರಿದಂತೆ ಒಟ್ಟು 8 ರಾಜ್ಯಗಳಲ್ಲಿ ಈ ಸಂಪ್ರದಾಯ ಜಾರಿಗೆ ಬರಲಿದೆ. ಇದರಿಂದ ಕರ್ನಾಟಕ, ಕೇರಳ, ತಮಿಳುನಾಡು, ಪುದುಚೆರಿ, ತೆಲಂಗಾಣ, ಮಹಾರಾಷ್ಟ್ರ, ಹರ್ಯಾಣ ರಾಜ್ಯಗಳ 20,000 ಪೆಟ್ರೋಲ್ ಪಂಪ್ ಗಳ ಮೇಲೆ ಪರಿಣಾಮ ಬೀರಲಿದೆ.[ಹಳ್ಳಿಗಳಲ್ಲಿ ನೀರು ಕೊರತೆಗೆ ಜಿಲ್ಲಾಧಿಕಾರಿಗಳೇ ಹೊಣೆ: ಸಿಎಂ]

Fuel stations in 8 states to be shut on Sundays from May 14

ಆ್ಯಂಬುಲೆನ್ಸ್ ನಂತಹ ತುರ್ತು ಸೇವೆಗಳಿಗೆ ಇಂಧನವನ್ನು ತುಂಬಿಸಬಹುದು. ಇದಕ್ಕಾಗಿ ಭಾನುವಾರದ ದಿನ ಕನಿಷ್ಠ ಒಬ್ಬ ವ್ಯಕ್ತಿ ಪೆಟ್ರೋಲ್ ಪಂಪ್ ಗಳಲ್ಲಿ ಇರಬೇಕು. ಈ ಕುರಿತು ಪೆಟ್ರೋಲ್ ಪಂಪ್ ಗಳಿಗೆ ಪೆಟ್ರೋಲಿಯಂ ಡೀಲರ್ ಗಳ ಒಕ್ಕೂಟ ಸುತ್ತೋಲೆ ಹೊರಡಿಸಲಿದೆ.[ಇಂದಿರಾ ಕ್ಯಾಂಟೀನ್ ಏಕೆ? ಹೈ ಕಮಾಂಡ್ ಗುಲಾಮಗಿರಿ ಬಿಡಿ]

ಹಲವು ವರ್ಷಗಳ ಹಿಂದೆಯೇ ಭಾನುವಾರದ ದಿನ ಪೆಟ್ರೋಲ್ ಪಂಪ್ ಗಳನ್ನು ಮುಚ್ಚುವ ನಿರ್ಧಾರಕ್ಕೆ ಬರಲಾಗಿತ್ತು. ಆದರೆ ತೈಲ ವರ್ತಕರ ವಿರೋಧದಿಂದ ಜಾರಿಗೆ ಬಂದಿರಲಿಲ್ಲ. ಆದರೆ ಈ ಬಾರಿ ಇದು ಜಾರಿಗೆ ಬರಲಿದೆ.

ಇನ್ನು ಭಾನುವಾರ ಪೆಟ್ರೋಲ್ ಪಂಪ್ ಮುಚ್ಚುವುದರಿಂದ ತಮಿಳುನಾಡಿನಲ್ಲಿ ಕನಿಷ್ಟ 150 ಕೋಟಿ ನಷ್ಟವಾಗಬಹುದು ಎಂದುಕೊಳ್ಳಲಾಗಿದೆ. ಉಳಿದ ರಾಜ್ಯಗಳಲ್ಇ ಸಾಮಾನ್ಯ ಬಾನುವಾರದ ಶೇಕಡಾ 40ರಷ್ಟು ನಷ್ಟವಾಗಬಹುದು ಎಂದು ಅಂದಾಜು ಮಾಡಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The consortium of Indian petroleum dealers declared on Tuesday that fuel outlets across eight states will be closed every Sunday, beginning on May 14. The decision is expected to affect across Karnataka.
Please Wait while comments are loading...