ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

13 ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಉಚಿತ ವೈ-ಫೈ ಸೇವೆ

|
Google Oneindia Kannada News

ಬೆಂಗಳೂರು, ಜನವರಿ 27 : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ರಾಜ್ಯದ 13 ಬಸ್ ನಿಲ್ದಾಣಗಳಲ್ಲಿ ಪ್ರಾಯೋಗಿಕವಾಗಿ ಉಚಿತ ವೈ-ಫೈ ಸೇವೆಯನ್ನು ಆರಂಭಿಸಿದೆ. ಮುಂದಿನ ದಿನಗಳಲ್ಲಿ ಚಿತ್ರದುರ್ಗ ಮತ್ತು ಕೋಲಾರ ನಗರಗಳಿಗೂ ವೈ-ಫೈ ಸೇವೆ ವಿಸ್ತರಣೆ ಮಾಡಲು ಕೆಎಸ್ಆರ್‌ಟಿಸಿ ನಿರ್ಧರಿಸಿದೆ.

ಬೆಂಗಳೂರಿನ ಕೆಂಪೇಗೌಡ ಬಸ್‌ ನಿಲ್ದಾಣ ಮತ್ತು ಶಾಂತಿನಗರ ಬಸ್‌ ನಿಲ್ದಾಣ ಹಾಗೂ ಹಾಸನ, ಮಂಡ್ಯ, ಮಡಿಕೇರಿ, ಧರ್ಮಸ್ಥಳ, ಮಂಗಳೂರು, ಕುಂದಾಪುರ, ಶಿವಮೊಗ್ಗ, ಹರಿಹರ, ದಾವಣಗೆರೆ, ಚಿಕ್ಕಮಗಳೂರು ಮತ್ತು ತುಮಕೂರು ಬಸ್‌ ನಿಲ್ದಾಣಗಳಲ್ಲಿ ವೈ-ಫೈ ಸೇವೆ ಆರಂಭಿಸಲಾಗಿದೆ ಎಂದು ಕೆಎಸ್ಆರ್‌ಟಿಸಿ ಪ್ರಕಟಣೆ ತಿಳಿಸಿದೆ. [ಕೆಎಸ್ಆರ್ ಟಿಸಿಯಲ್ಲಿ ಕೆಲಸ ಖಾಲಿ ಇದೆ]

ksrtc

ವೈ-ಫೈ ಸೇವೆ ಪಡೆಯುವುದು ಹೇಗೆ? : ಕೆಎಸ್ಆರ್‌ಟಿಸಿ ಬಸ್ ನಿಲ್ದಾಣಗಳಲ್ಲಿ ಲಭ್ಯವಿರುವ ವೈ-ಫೈ ಸೇವೆಯನ್ನು ಪಡೆಯಲು I-ON ನೆಟ್ ವರ್ಕ್‌ ಅಥವಾ ಗೂಗಲ್‌ ಪ್ಲೇಸ್ಟೋರ್‌ನಿಂದ ಉಚಿತವಾಗಿ I-ON WI-FI ಅಪ್ಲಿಕೇಶನ್‌ ಡೌನ್‌ಲೋಡ್ ಮಾಡಿಕೊಳ್ಳಬೇಕು. [ಸದ್ಯದಲ್ಲೇ ದೇಶದ ನೂರು ರೈಲ್ವೆ ನಿಲ್ದಾಣದಲ್ಲಿ ಉಚಿತ ವೈಫೈ]

ಬಸ್ ನಿಲ್ದಾಣಗಳಲ್ಲಿ ಮೊಬೈಲ್‌, ಲ್ಯಾಪ್‌ಟಾಪ್‌ ಅಥವ ಟ್ಯಾಬ್ಲೆಟ್‌ನಲ್ಲಿ ಲಭ್ಯವಿರುವ ವೈ-ಫೈನಲ್ಲಿ I-ON WI-FI ಆಯ್ಕೆ ಮಾಡಬೇಕು. ಅಲ್ಲಿ 10 ಅಂಕಿಯ ಮೊಬೈಲ್ ನಂಬರ್ ನೀಡಿ, ನೋಂದಣಿ ಮಾಡಿಕೊಂಡರೆ ವೈ-ಫೈ ಪಾಸ್‌ಪರ್ಡ್, ಎಸ್‌ಎಂಎಸ್ ರೂಪದಲ್ಲಿ ದೊರೆಯಲಿದೆ. ಪಾಸ್ ವರ್ಡ್ ಹಾಕಿ ಉಚಿತ ಇಂಟರ್‌ನೆಟ್ ಸಂಪರ್ಕ ಪಡೆಯಬಹುದಾಗಿದೆ.

ಪ್ರಾಯೋಗಿಕವಾಗಿ ಈ ವೈ-ಫೈ ಸೇವೆಯನ್ನು ಆರಂಭಿಸಲಾಗಿದೆ. ಸದ್ಯ, 13 ಬಸ್ ನಿಲ್ದಾಣಗಳಲ್ಲಿ ಪ್ರಾಯೋಗಿಕವಾಗಿ ಉಚಿತ ವೈ-ಫೈ ಸೇವೆ ದೊರೆಯಲಿದ್ದು, ಮುಂದಿನ ದಿನಗಳಲ್ಲಿ ಚಿತ್ರದುರ್ಗ ಮತ್ತು ಕೋಲಾರ ನಗರಗಳಿಗೂ ಈ ಸೇವೆ ವಿಸ್ತರಣೆ ಮಾಡಲಾಗುತ್ತದೆ ಎಂದು ಕೆಎಸ್ಆರ್‌ಟಿಸಿ ಹೇಳಿದೆ.

English summary
The Karnataka State Road Transport Corporation has launched free Wi-Fi facility to passengers in 13 bus-stand in the state. Wi-Fi available in Kempegowda, Shantinagar bus stand in Bengaluru city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X