ಅಶೋಕ್ ಖೇಣಿ ಅವರ ಬೀದರ್ ದಕ್ಷಿಣ ಕ್ಷೇತ್ರ ಈಗ ಡಿಜಿಟಲ್ ಕ್ಷೇತ್ರ

Written By: Ramesh
Subscribe to Oneindia Kannada

ಬೀದರ್, ನವೆಂಬರ್. 03 : ಮಕ್ಕಳ ಪಕ್ಷದ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಖೇಣಿ ಅವರು ತಮ್ಮ ಬೀದರ್ ದಕ್ಷಿಣ ಕ್ಷೇತ್ರವನ್ನು ಡಿಜಿಟಲ್ ಕ್ಷೇತ್ರವನ್ನಾಗಿ ಪರಿವರ್ತಿಸಲು ಪಣತೊಟ್ಟಿದ್ದಾರೆ. ಇದಕ್ಕೆ ಮೊದಲು ಕ್ಷೇತ್ರದ ಎಲ್ಲಾ ಗ್ರಾಮಗಳಿಗೂ ವೈ-ಫೈ ಸೇವೆ ಒದಗಿಸಬೇಕು ಎಂಬುದು ಶಾಸಕ ಅಶೋಕ್ ಖೇಣಿ ಅವರ ಗುರಿಯಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಖೇಣಿಈಗಾಗಲೇ 13 ಗ್ರಾಮಗಳಲ್ಲಿ ಉಚಿತ ವೈ-ಫೈ ಸೇವೆ ಸೇವೆಗೆ ಚಾಲನೆ ನೀಡಲಾಗಿದ್ದು. ಇದರ ಭಾಗವಾಗಿಯೇ ಎಲ್ಲಾ ಗ್ರಾಮಗಳಲ್ಲಿ ವೈ-ಫೈ ಸೇವೆ ಆರಂಭಿಸಲಾಗುವುದು ಎಂದರು.

'ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸ್ಮಾರ್ಟ್ ಸಿಟಿಗಳನ್ನು ಮಾಡಲು ಪ್ರಯತ್ನ ನಡೆಸುತ್ತಿದ್ದಾರೆ. ನಾವು ಸ್ಮಾರ್ಟ್ ನಾಗರೀಕರನ್ನು ತಯಾರು ಮಾಡುತ್ತಿದ್ದೇವೆ' ಎಂದು ಕರ್ನಾಟಕ ಮಕ್ಕಳ ಪಕ್ಷದ ಸಂಸ್ಥಾಪಕ ಅಶೋಕ್ ಖೇಣಿ ಹೇಳಿದರು.

Free wi-fi in all villages in Bidar South constituency, says Ashok Kheny

2017ರೊಳಗೆ ಬೀದರ್ ದಕ್ಷಿಣ ಕ್ಷೇತ್ರವನ್ನು ಡಿಜಿಟಲ್ ಕ್ಷೇತ್ರವಾಗಿ ಪರಿವರ್ತನೆ ಮಾಡಬೇಕು ಎಂಬುದು ಶಾಸಕ ಅಶೋಕ್ ಖೇಣಿ ಅವರ ಕನಸಾಗಿದೆ. ಬೀದರ್ ದಕ್ಷಿಣ ಕ್ಷೇತ್ರದಲ್ಲಿ 125 ಗ್ರಾಮಗಳಿವೆ.

ಅವುಗಳಲ್ಲಿ ಮೊದಲ ಹಂತದಲ್ಲಿ 13 ಗ್ರಾಮಗಳಲ್ಲಿ ವೈ-ಫೈ ಸೇವೆಗೆ ಚಾಲನೆ ನೀಡಲಾಗಿದೆ. ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಉಚಿತ ವೈ-ಫೈ ಸೇವೆಯನ್ನು ಕಲ್ಪಿಸಲಾಗುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Ashok Kheny, MLA, has launched a plan to provide free wi-fi connectivity to all the villages in Bidar South Assembly constituency. He inaugurated the services in 13 villages on Tuesday. Bidar South will become a digital constituency before 2017. he announced at the event in Mannalli village.
Please Wait while comments are loading...