Shakti Scheme: ಪುರುಷರಿಗೂ ಬಸ್‌ಗಳಲ್ಲಿ ಉಚಿತ ಪ್ರಯಾಣ!: ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದೇನು

ಹುಬ್ಬಳ್ಳಿ, ನವೆಂಬರ್ 15: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿಯ ಐದು ಯೋಜನೆಗಳ ಪೈಕಿ ಮೊದಲಿಗೆ ಜಾರಿಗೆ ಬಂದಿದ್ದು ಶಕ್ತಿ ಯೋಜನೆ. ಈ ಯೋಜನೆಯಡಿ ಮಹಿಳೆಯರು ರಾಜ್ಯದ ಸಾರಿಗೆ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. ಇದರಿಂದ ರಾಜ್ಯ ಸರ್ಕಾರ ನಷ್ಟ ಅನುಭವಿಸುತ್ತಿದೆ ಎಂಬ ಆರೋಪದ ಮಧ್ಯೆ ಪುರುಷರಿಗೂ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ನೀಡಬೇಕು ಎಂಬ ಮಾತುಗಳು ಮತ್ತೆ ಕೇಳಿ ಬರುತ್ತಿವೆ.

ಈ ಕುರಿತು ಕರ್ನಾಟಕ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಪ್ರತಿಕ್ರಿಯಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ಸಂವಾದ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.‌ಶಿವಕುಮಾರ ಈ ವಿಷಯವನ್ನು‌ ಪ್ರಸ್ತಾಪಿಸಿದ್ದಾರೆ. ಅವರನ್ನು ಭೇಟಿ ಮಾಡಿದಾಗ ಈ ಕುರಿತು ಮಾತುಕತೆ ನಡೆಸುತ್ತೇನೆ ಎಂದಿದ್ದಾರೆ.

Free Travel for Men in Buses under Shakti Scheme Ramalinga Reddy What Said

ಸದ್ಯ ಶಕ್ತಿ ಯೋಜನೆಯಲ್ಲಿ ಯಾವುದೇ ಬದಲಾವಣೆ ಇರಲ್ಲ. ಎಲ್ ಗ್ಯಾರಂಟಿ ಯೋಜನೆಗಳಂತೆ ಇದು ಸಹ ಮುಂದುವರಿಯಲಿದೆ. ಸದ್ಯಕ್ಕೆ ಶಕ್ತಿ ಯೋಜನೆಯಡಿ ಸಾರಿಗೆ ಸಂಸ್ಥೆಗಳ ಬಸ್ ಗಳಲ್ಲಿ ಪುರುಷರಿಗೆ ಉಚಿತ ಪ್ರಯಾಣದ ಸೌಲಭ್ಯ ಕಲ್ಪಿಸುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಅವರು ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದ್ದಾರೆ.

ಇದರಿಂದ ತಮಗೂ ಇಂದಲ್ಲಾ ನಾಳೆ ಸರ್ಕಾರ ಸಿಹಿ ಸುದ್ದಿ ಕೊಡಲಿದೆ ಎಂದುಕೊಂಡು ಕುತೂಹಲದಿಂದ ಕಾಯುತ್ತಿದ್ದ ಪುರುಷರಿಗೆ, ಗೊಂದಲಗಳಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ನಿವಾರಣೆ ಮಾಡಿದ್ದಾರೆ.

ಕಾಂಗ್ರೆಸ್ ಶಾಸಕರನ್ನು ಖರೀದಿಸುವ ಹಿಂದೆ ಕಾಂಗ್ರೆಸ್ ಮುಖಂಡರೇ ಇದ್ದಾರೆ ಎಂಬ ಬಿಜೆಪಿ ಟೀಕೆಗೆ ತಿರುಗೇಟು ನೀಡಿದರು. ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಬಿಜೆಪಿ ಅಂದರೆ ಬುರುಡೆ ಜನತಾ ಪಕ್ಷ. ಈ ಹಿಂದೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಉರುಳಿಸಿ ಬಿಜೆಪಿ ಸರ್ಕಾರ ರಚನೆ‌ ಮಾಡಿದ್ದು ಹೇಗೆ ? ದೇಶದಲ್ಲಿ ಕಾಂಗ್ರೆಸ್ ನ 214 ಸೇರಿ ಬೇರೆ ಬೇರೆ ಪಕ್ಷಗಳ 450 ಶಾಸಕರನ್ನು ಖರೀದಿ ಮಾಡಿದ್ದಾರೆ ಎಂದು ಆರೋಪಿಸಿದರು.

Free Travel for Men in Buses under Shakti Scheme Ramalinga Reddy What Said

16 ತಿಂಗಳಿಂದ ಆಪರೇಷನ್ ಕಮಲ ಯತ್ನ

ಹುಬ್ಬಳ್ಳಿಯಲ್ಲಿ ಸಾರಿಗೆ ಸಚಿವರ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಕಾರ್ಮಿಕ ಸಚಿವ ಸಂತೋಷ ಲಾಡ್ ಅವರು, ಆಪರೇಶನ್‌ ಕಮಲ‌ ಆರೋಪ‌ ವಿಚಾರಕ್ಕೆ ಟಾಂಗ್ ನೀಡಿದರು. ಬಿಜೆಪಿಯವರು ಕಳೆದ ಕಳೆಸ 16 ತಿಂಗಳುಗಳಿಂದ ಆಪರೇಶನ್ ಕಮಲ‌ದ ಪ್ರಯತ್ನ‌ದಲ್ಲೇ‌ ಇದ್ದಾರೆ. ಆಪರೇಶನ್ ಮಾಡುವುದರಲ್ಲಿ‌ ಬಿಜೆಪಿಯವರು ನಿಸ್ಸೀಮರು

ಬಿಜೆಪಿಯಿಂದ 50 ಕೋಟಿ ಆಫರ್

ಅನೇಕ‌ ರಾಜ್ಯಗಳಲ್ಲಿ ಬಿಜೆಪಿ‌ ಆಪರೇಶನ್ ಗೆ ಮಾಡಿಯೇ ಅಧಿಕಾರದ ಗದ್ದುಗೆ ಏರಿದ್ದಾರೆ. ಕರ್ನಾಟಕದಲ್ಲೂ‌ ಆಪರೇಶನ್ ಗೆ‌ ಬಿಜೆಪಿಯವರು ಮುಂದಾಗಿದ್ದಾರೆ. ಬಿಜೆಪಿಯಿಂದ 50 ಕೋಟಿ ಆಫರ್ ವಿಚಾರ, ಅವರ ಪ್ರಯತ್ನ‌ ಯಾವುದೇ ಕಾರಣಕ್ಕೂ ಫಲಪ್ರದವಾಗಲ್ಲ ಎಂದು ತಿರುಗೇಟು ಕೊಟ್ಟರು.

ಕೋವಿಡ್ ಹಗರಣದ ತನಿಖೆ ವಿಚಾರ, ಜಸ್ಟಿಸ್ ಕುನ್ಹಾ ಅವರ ವರದಿಯನ್ನ‌ ಅವರು‌ ಚಾಲೆಂಜ್ ಮಾಡಲಿ. ಅದಕ್ಕೆ ಅವಕಾಶ ಇದೆ. ಅವರ ಮೇಲೆ ಯಾವುದೇ ವಿಚಾರಣೆಯನ್ನೇ ಮಾಡಬಾರದಾ..? ಪ್ರಹ್ಲಾದ್ ಜೋಶಿಯವರು ಆ ರೀತಿ ಮಾತನಾಡುವುದು‌ ಸರಿಯಲ್ಲ. ನ್ಯಾಯಾಂಗಕ್ಕೆ ಪ್ರತಿಯೊಬ್ಬರು ಗೌರವ ನೀಡಬೇಕು ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+