ಕಲಬುರಗಿ ಜೈಲಿನ ಗೋಡೆ ಕೊರೆದು ನಾಲ್ವರು ಕೈದಿಗಳು ಪರಾರಿ
ಕಲಬುರಗಿ, ಮಾರ್ಚ್ 23 : ಕಲಬುರಗಿಯ ಜಿಲ್ಲಾ ಕಾರಾಗೃಹ ಮತ್ತೆ ಸುದ್ದಿಯಲ್ಲಿದೆ. ಬುಧವಾರ ಮುಂಜಾನೆ ಜೈಲಿನಿಂದ ನಾಲ್ವರು ಕೈದಿಗಳು ಪರಾರಿಯಾಗಿದ್ದಾರೆ. ಕಳೆದ ವರ್ಷವೂ ಇಬ್ಬರು ಕೈದಿಗಳು ಜೈಲಿನ ಗೋಡೆ ಹಾರಿ ಪರಾರಿಯಾಗಿದ್ದರು.
ಸಿನಿಮೀಯ ರೀತಿಯಲ್ಲಿ ಬ್ಯಾರಕ್‌ನ ಗೋಡೆ ಕೊರೆದು, ಜೈಲಿನ ಗೋಡೆ ಹಾರಿ ಬುಧವಾರ ಮುಂಜಾನೆ 1 ಗಂಟೆ ಸುಮಾರಿಗೆ ನಾಲ್ವರು ಕೈದಿಗಳು ಪರಾರಿಯಾಗಿದ್ದಾರೆ. ಫರಹತಾಬಾದ್ ಠಾಣೆ ಪೊಲೀಸರು ಮತ್ತು ಜೈಲಿನ ಸಿಬ್ಬಂದಿಗಳು ಕೈದಿಗಳಿಗಾಗಿ ಹುಡುಕಾಟ ಆರಂಭಿಸಿದ್ದಾರೆ. [ಕಲಬುರಗಿ ಜೈಲಿನಿಂದ ಪರಾರಿಯಾದರು, ಲಾರಿಯಲ್ಲಿ ಸಿಕ್ಕರು]

ವಿಚಾರಣಾಧೀನ ಕೈದಿಗಳಾದ ಶಿವಕುಮಾರ್, ಸುನೀಲ್ ಕುಮಾರ್, ಲಕ್ಷಣ್ ಮತ್ತು ತಾಜುದ್ದೀನ್ ಪರಾರಿಯಾದ ಕೈದಿಗಳು. ಈ ನಾಲ್ವರು ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಆರೋಪಿಗಳಾಗಿದ್ದರು. [ಸೈಕೋ ಜೈಶಂಕರ್ ಸೆರೆಸಿಕ್ಕಿದ್ದು ಹೇಗೆ?]
ಇಬ್ಬರು ತಪ್ಪಿಸಿಕೊಂಡಿದ್ದರು : 2015ರ ಏಪ್ರಿಲ್‌ನಲ್ಲಿ ಕಲಬುರಗಿ ಕೇಂದ್ರ ಕಾರಾಗೃಹದಿಂದ ಇಬ್ಬರು ಕೈದಿಗಳು ಪರಾರಿಯಾಗಿದ್ದರು. ಮಹಮದ್ ಸಾಧಿಕ್ ಮತ್ತು ರಫೀಕ್ ಎಂಬ ಕೈದಿಗಳು ಗೋಡೆ ಹಾರಿ ತಪ್ಪಿಸಿಕೊಂಡಿದ್ದರು. ಬೆಂಗಳೂರಿಗೆ ಹೋಗುತ್ತಿದ್ದ ಲಾರಿಯಲ್ಲಿ ಅಡಗಿ ಕುಳಿತಿದ್ದ ಇಬ್ಬರನ್ನು ಜೇವರ್ಗಿ ಬಳಿ ಪೊಲೀಸರು ಬಂಧಿಸಿದ್ದರು.












Click it and Unblock the Notifications