ಕಾರವಾರ:18 ಜಾನುವಾರುಗಳ ರಕ್ಷಣೆ, ನಾಲ್ವರ ಬಂಧನ
ಕಾರವಾರ, ಅಕ್ಟೋಬರ್ 11: ಲಾರಿಯೊಂದರಲ್ಲಿ ಕಾನೂನು ಬಾಹಿರವಾಗಿ ಕೋಣಗಳನ್ನು ಸಾಗಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಯಲ್ಲಾಪುರ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಮಹಾರಾಷ್ಟ್ರದ ಕೊಲ್ಲಾಪುರದಿಂದ ಕಾಸರಗೋಡಿಗೆ ಅಕ್ರಮವಾಗಿ 18 ಕೋಣಗಳನ್ನು ಸಾಗಿಸುತ್ತಿದ್ದ ಲಾರಿ ಚಾಲಕ ಜಲೀಲ್ ಎಂ ಹಮೀದ್ (49), ಇನ್ನೋರ್ವ ಚಾಲಕ ಕೆ ಬಾಲ ಅಂಬು(48), ಕಾಸರಗೋಡು ನಿವಾಸಿ ಅಹ್ಮದ್ ಕಬೀರ್ ಅಬ್ದುಲ್ಲಾ (30) ಹಾಗೂ ಕಾಸರಗೋಡಿನ ಸಮೀರ್ ಮಹ್ಮದ್ (32) ಎನ್ನುವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಪೊಲೀಸ್ ನಿರೀಕ್ಷಕ ಡಾ.ಮಂಜುನಾಥ ನಾಯಕ, ಪಿಎಸ್ಐ ಶ್ರೀಧರ ಎಸ್ ಆರ್ ದಾಳಿಯ ನೇತೃತ್ವ ವಹಿಸಿದ್ದರು. ಆರೋಪಿತರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಜಾನುವಾರುಗಳನ್ನು ಗೋಶಾಲೆಗೆ ಸಾಗಿಸಲಾಗಿದೆ.












Click it and Unblock the Notifications