ವಿಜಯಪುರ: ಆಸ್ತಿಗಾಗಿ ಪತ್ನಿ ಮೇಲೆ ಫೈರಿಂಗ್ ಮಾಡಿದ ಮಾಜಿ ಸೈನಿಕ

Posted By:
Subscribe to Oneindia Kannada

ವಿಜಯಪುರ, ಏಪ್ರಿಲ್ 20 : ಆಸ್ತಿ ಕಲಹಕ್ಕೆ ಸಂಬಂಧಿಸಿದಂತೆ ಮಾಜಿ ಸೈನಿಕನೊಬ್ಬ ತನ್ನ ಪತ್ನಿಯ ಮೇಲೆ ಫೈರಿಂಗ್ ಮಾಡಿರುವ ಘಟನೆ ಗುರುವಾರ ವಿಜಯಪುರ ಜಿಲ್ಲೆಯ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ನಡೆದಿದೆ.

ಮಾಜಿ ಸೈನಿಕನಾಗಿರುವ ಖಾಜಾ ಎಂಬಾತ ತನ್ನ ಪತ್ನಿ ಮಹಾದೇವಿ ನಡುವೆ ಕಳೆದ 12 ವರ್ಷಗಳಿಂದ ಆಸ್ತಿಗಾಗಿ ಜಗಳ ನಡೆಯುತ್ತಿತ್ತು. ಮಹಾದೇವಿ ತನಗೆ ಜೀವಾನಂಶ ನೀಡಬೇಕೆಂದು ಪತಿ ವಿರುದ್ಧ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದರು. ಈ ಸಂಬಂಧ ಪತಿ-ಪತ್ನಿ ನಡುವೆ ಪ್ರತಿದಿನ ಜಗಳ ನಡೆಯುತ್ತಿತ್ತು.[ಸಾವಿನ ಮನೆಯಲ್ಲೂ ಲಂಚಾವತಾರ, ಇದೆಂಥ ವಿಪರ್ಯಾಸ!]

Former soldier fired on his wife in Vijayapura

ಇದೇ ವಿಷಯವಾಗಿ ಗುರುವಾರ ನಡೆದ ಜಗಳದಲ್ಲಿ ಆಕ್ರೋಶದಿಂದ ಪತಿ ಖಾಜಾ ರಿವಾಲ್ವಾರನಿಂದ ತನ್ನ ಪತ್ನಿ ಮೇಲೆ ಫೈರ್ ಮಾಡಿದ್ದಾನೆ. ಇದರಿಂದ ಮಹಾದೇವಿ ಅವರ ಕಾಲಿಗೆ ಗುಂಡು ತಗುಲಿದ್ದು ಅವರನ್ನು ಮಹಾರಾಷ್ಟ್ರದ ಸೋಲಾಪುರ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಸಂಬಂಧ ಇಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಖಾಜಾ ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Asset dispute husband fired on his wife at Indi, Vijayapura district, on April 20. His wife admitted in Sollapur pravait hospital.
Please Wait while comments are loading...