ಪ್ರಧಾನಿ ಮೋದಿಗೆ ದೇವೇಗೌಡ್ರು ಬರೆದ ಪತ್ರದಲ್ಲೇನಿದೆ?

Posted By:
Subscribe to Oneindia Kannada

ಹಾಸನ, ನ 21: ಒಂದು ವಾರದ ಅಂತರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಎರಡೆರಡು ಬಾರಿ ಪತ್ರ ಬರೆದಿದ್ದಾರೆ.

ಒಂದು 500, 1000 ಮುಖಬೆಲೆಯ ನೋಟನ್ನು ರದ್ದುಗೊಳಿಸಿದ ಮೋದಿಯವರ ಕ್ರಮವನ್ನು ಸ್ವಾಗತಿಸಿ ಪತ್ರ ಬರೆದಿದ್ದರೆ, ಇನ್ನೊಂದು ಪತ್ರ ಕಪ್ಪುಹಣದಿಂದ ರೆಡ್ಡಿ ಪುತ್ರಿ ಅದ್ದೂರಿಯಾಗಿ ಮದುವೆ ಮಾಡಿದ್ದಕ್ಕಾಗಿ.
(ಬೀದಿಬೀದಿಗಳಲ್ಲಿ ದಂಗೆಯಾದೀತು : ಸುಪ್ರೀಂ ತರಾಟೆ)

Former PM HD Deve Gowda correspondence with PM Narendra Modi

ನಗರದಲ್ಲಿ ಭಾನುವಾರ (ನ 20) ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ದೇವೇಗೌಡ್ರು, ಮೂರು ದಿನಗಳ ಹಿಂದೆ ಮೂರು ಪುಟಗಳ ಪತ್ರ ಪ್ರಧಾನಿಗೆ ಬರೆದಿದ್ದೆ. ಕಪ್ಪುಹಣದ ವಿರುದ್ದ ಅವರು ತೆಗೆದುಕೊಂಡ ನಿರ್ಧಾರಕ್ಕೆ ಬೆಂಬಲ ಸೂಚಿಸಿದ್ದೆ.

ಈಗ ಅವರದೇ ಪಕ್ಷದ ಮುಖಂಡರೊಬ್ಬರ ಮಗಳ ಮದುವೆಗೆ ಕಪ್ಪುಹಣ ಬಳಸಿ ಅದ್ದೂರಿಯಾಗಿ ಮದುವೆ ಮಾಡಲಾಗಿದೆ. ಇನ್ನೂರು ಕೋಟಿ ರೂಪಾಯಿಗೂ ಅಧಿಕ ದುಡ್ಡನ್ನು ಮದುವೆಗೆ ಸುರಿಯಲಾಗಿದೆ.

ಜನಾರ್ಧನ ರೆಡ್ಡಿಯವರ ಮಗಳ ಮದುವೆಗೆ ನಿಮ್ಮ ಪಕ್ಷದ ಮುಖಂಡರೇ ಭಾಗವಹಿಸಿ, ನಿಮ್ಮ ಆಶಯಕ್ಕೆ ವಿರುದ್ದವಾಗಿ ರಾಜ್ಯ ಬಿಜೆಪಿ ಘಟಕ ನಡೆದುಕೊಂಡಿದೆ ಎಂದು ಪ್ರಧಾನಿಗೆ ಬರೆದ ಇನ್ನೊಂದು ಪತ್ರದಲ್ಲಿ ದೇವೇಗೌಡ ಬೇಸರ ವ್ಯಕ್ತ ಪಡಿಸಿದ್ದಾರೆ.

ಕೇಂದ್ರದ ನೋಟು ನಿಷೇಧ ಕ್ರಮದಿಂದ ಬಡವರಿಗೆ, ಕಾರ್ಮಿಕರಿಗೆ ಮತ್ತು ಸಣ್ಣ ವ್ಯಾಪಾರಿಗಳಿಗೆ ತುಂಬಾ ತೊಂದರೆಯಾಗುತ್ತಿದೆ. ಈ ಬಗ್ಗೆ ಕೇಂದ್ರ ಸರಕಾರ ಕೂಡಲೇ ಸೂಕ್ತ ಕ್ರಮ ತೆಗೆದುಕೊಳ್ಳಬೇಕು.

ಡಿಸಿಸಿ ಬ್ಯಾಂಕುಗಳಲ್ಲಿ ಹಣದ ವ್ಯವಹಾರಕ್ಕೆ ಸರಕಾರ ಅವಕಾಶ ಮಾಡಿಕೊಟ್ಟರೆ, ಈಗ ಸಾರ್ವಜನಿಕರು ಅನುಭವಿಸುತ್ತಿರುವ ತೊಂದರೆಗೆ ಸ್ವಲ್ಪ ಮಟ್ಟಿನ ಕಡಿವಾಣ ಹಾಕಬಹುದು ಎಂದು ದೇವೇಗೌಡ್ರು ಅಭಿಪ್ರಾಯ ಪಟ್ಟಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Demonetisation : Former PM HD Deve Gowda letter correspondence with Prime Minister Narendra Modi.
Please Wait while comments are loading...