ಟ್ವೀಟ್ ನಕಲು ಮಾಡಿ ಟ್ರಾಲ್, ಸ್ಪಷ್ಟನೆ ಕೊಟ್ಟ ಸಿದ್ದರಾಮಯ್ಯ
ಬೆಂಗಳೂರು, ಫೆಬ್ರವರಿ 27 : ಬಾಲಾಕೋಟ್ ಪ್ರದೇಶದಲ್ಲಿರುವ ಉಗ್ರರ ಶಿಬಿರದ ಮೇಲೆ ನಡೆಸಿದ ದಾಳಿಯ ಬಗ್ಗೆ ಸಿದ್ದರಾಮಯ್ಯ ಟ್ವೀಟ್ ಅನ್ನು ನಕಲು ಮಾಡಿ ಟ್ರಾಲ್ ಮಾಡಲಾಗಿದೆ. ಸಿದ್ದರಾಮಯ್ಯ ಅವರು ಈ ಕುರಿತು ಸ್ಪಷ್ಟನೆಯನ್ನು ನೀಡಿದ್ದಾರೆ.
ಭಾರತೀಯ ವಾಯುಸೇನೆ ಮಂಗಳವಾರ ಮುಂಜಾನೆ ಬಾಲಾಕೋಟ್ ಪ್ರದೇಶದಲ್ಲಿರುವ ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ತರಬೇತಿ ಶಿಬಿರದ ಮೇಲೆ ದಾಳಿ ಮಾಡಿ, ಶಿಬಿರವನ್ನು ನಾಶ ಮಾಡಿತ್ತು.
ಗಡಿನಿಯಂತ್ರಣ ರೇಖೆಯಾಚೆ ಇರುವ ಬಾಲಾಕೋಟ್ ಪ್ರದೇಶದಲ್ಲಿರುವ ಉಗ್ರರ ಶಿಬಿರಗಳನ್ನು ನಾಶ ಮಾಡಿದ್ದ ವಾಯುಸೇನೆಯ ಕಾರ್ಯಾಚರಣೆಯನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶ್ಲಾಘಿಸಿ ಟ್ವೀಟ್ ಮಾಡಿದ್ದರು.
ಆದರೆ, ಸಿದ್ದರಾಮಯ್ಯ ಅವರ ಟ್ವೀಟ್ ಅನ್ನು ನಕಲು ಮಾಡಿ ಟ್ರಾಲ್ ಮಾಡಲಾಗಿದೆ. ಇದು ಫೇಕ್ ಟ್ವೀಟ್ ಬೆಂಗಳೂರು ಪೊಲೀಸ್ ಮತ್ತು ಗೃಹ ಸಚಿವರು ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಸಿದ್ದರಾಮಯ್ಯ ಅವರು ಬುಧವಾರ ಟ್ವೀಟರ್ ಮೂಲಕ ಆಗ್ರಹಿಸಿದ್ದಾರೆ.
|
ಸಿದ್ದರಾಮಯ್ಯ ಟ್ವೀಟ್ ನಕಲು
'ನನ್ನ ಟ್ವೀಟ್ ಅನ್ನು ನಕಲು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಡಿಸಲಾಗುತ್ತಿದೆ. ಟ್ವೀಟ್‌ನಲ್ಲಿ ಟ್ರಾಲ್ ಶಿಷ್ಯಂದ್ರು ಲೋಗೋ ಇದೆ. ಬೆಂಗಳೂರು ಪೊಲೀಸರು ಈ ಕುರಿತು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಟ್ವೀಟ್‌ನಲ್ಲಿ ಏನಿದೆ?
ಇಂದು ಭಾರತೀಯ ವಾಯುಪಡೆ ಬಾಗಲಕೋಟೆ ಪ್ರದೇಶದಲ್ಲಿ ಉಗ್ರರ ಶಿಬಿರಗಳ ಮೇಲೆ ದಾಳಿ ಮಾಡಿದೆ ಎಂದು ನಕಲು ಟ್ವೀಟ್ ಅನ್ನು ರಚಿಸಿ ಸಾಮಾಜಿಕ ಜಾಲತಾಣದಲ್ಲಿ ಹರಡಿಸಲಾಗುತ್ತಿದೆ.

ನಕಲು ಟ್ವೀಟ್ ಟ್ರಾಲ್
ಫೆ.26, 2019ರಂದು 5.15ಕ್ಕೆ ಟ್ರಾಲ್ ಶಿಷ್ಯಂದ್ರು ಎಂಬ ಟ್ವೀಟರ್ ಪೇಜ್ ನಲ್ಲಿ ನಕಲಿ ಟ್ವೀಟ್ ಹಾಕಲಾಗಿದೆ. ಈ ಟ್ವೀಟ್‌ಗೆ 2356 ಲೈಕ್ ಬಂದಿದ್ದು, 1 ರೀ ಟ್ವೀಟ್ ಆಗಿದೆ.
|
ಪಾಕಿಸ್ತಾನಕ್ಕೆ ಪಾಠ
ಭಾರತೀಯ ವಾಯುಸೇನೆ ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ತರಬೇತಿ ಶಿಬಿರದ ಮೇಲೆ ದಾಳಿ ಮಾಡಿ ಉಗ್ರರನ್ನು ಕೊಂದ ಹಾಕಿತ್ತು. ಈ ಕುರಿತು ಸಿದ್ದರಾಮಯ್ಯ ಅವರು ಮಂಗಳವಾ ಟ್ವೀಟ್ ಮಾಡಿದ್ದರು.












Click it and Unblock the Notifications