ಈ ಸಿದ್ದರಾಮಯ್ಯ ಕ್ಯಾಬಿನೆಟ್ ಶಿವಕುಮಾರ್ ಪಾದದಡಿ ಇದೆಯಂತೆ: ಕುಮಾರಸ್ವಾಮಿ ಹೀಗೆ ಹೇಳಿದ್ಯಾಕೆ?
ಹಾಸನ, ನವೆಂಬರ್ 25: ಕಾಂಗ್ರೆಸ್ ಸರ್ಕಾರ ಡಿಕೆ ಶಿವಕುಮಾರ್ ಕೇಸ್ ವಾಪಸ್ಸು ಪಡೆದಿದೆ. ಈ ಸರ್ಕಾರಕ್ಕೆ ಕನಿಷ್ಟ ತಿಳುವಳಿಕೆ ಎನ್ನುವುದು ಇಲ್ಲ, ಸಿದ್ದರಾಮಯ್ಯನವರ ನೇತೃತ್ವದ ಕ್ಯಾಬಿನೆಟ್ ಏನಿದೆ ಈ ಕ್ಯಾಬಿನೆಟ್ ಶಿವಕುಮಾರ್ ಅವರ ಪಾದದಡಿ ಇದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಈ ಕುರಿತು ಹಾಸನದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರ ಹೇಳಿಕೆಗಳನ್ನ ಗಮನಿಸುತ್ತಿದ್ದೇನೆ. ಹಲವಾರು ಭಾರಿ ಹೇಳಿದ್ದಾರೆ, ಚುನಾವಣೆಯ ಸಂದರ್ಭದಲ್ಲೂ
ಸಂವಿಧಾನದ ವ್ಯವಸ್ಥೆ ಉಳಿಯಬೇಕು ಅಂದ್ರೆ ಕಾಂಗ್ರೆಸ್ ಪಕ್ಷಕ್ಕೆ ಮತಕೊಡಬೇಕು ಅನ್ನೋದನ್ನ ಪದೇ ಪದೇ ಹೇಳಿದ್ದನ್ನ ಗಮನಿಸಿದ್ದೇನೆ. ಇವತ್ತಿನ ಅವರ ತೀರ್ಮಾನ ಸಂವಿಧಾನವನ್ನು ಎಷ್ಟರಮಟ್ಟಿಗೆ ಉಳಿಸುವಂತಹವರು. ಈ ದೇಶದ ಕಾನೂನು ವ್ಯವಸ್ಥೆಯನ್ನು ಅವರ ಪಾದದಡಿ ತೆಗೆದುಕೊಂಡು ಹೋಗೋ ಕೆಲಸ ಮಾಡಿದ್ದಾರೆ ಎಂದು ಕಿಡಿಕಾರಿದರು.

ಕಾಂಗ್ರೆಸ್ ಸರ್ಕಾರ ಡಿ.ಕೆ. ಶಿವಕುಮಾರ್ ಮೇಲೆ ಇದ್ದ ಪ್ರಕರಣ ವಾಪಸ್ ಪಡೆದಿರುವುದನ್ನು ನೋಡಿದರೇ ಇವರೆಲ್ಲಾ ಸಂವಿಧಾನ ಉಳಿಸುವ ಕಾನೂನು ರಕ್ಷಕರ. ಸಂವಿಧಾನವನ್ನ ಉಳಿಸೋರಾ ಇವರೆಲ್ಲಾ...? ಕಾಂಗ್ರೆಸ್ ನಾಯಕರ ಹೇಳಿಕೆಗಳನ್ನ ಗಮನಿಸುತ್ತಿದ್ದೇನೆ. ಹಲವಾರು ಭಾರಿ ಹೇಳಿದ್ದು, ಇವತ್ತಿನ ಅವರ ತೀರ್ಮಾನ ಸಂವಿಧಾನವನ್ನು ಎಷ್ಟರ ಮಟ್ಟಿಗೆ ಉಳಿಸುವಂತಹವರು ಮತ್ತು ದೇಶದ ಕಾನೂನಿನ ವ್ಯವಸ್ಥೆಗಳ ಬಗ್ಗೆ ಎಷ್ಟು ಗೌರವ ಇಟ್ಕೊಂಡಿದ್ದಾರೆ ಗೊತ್ತಾಗುತ್ತದೆ ಎಂದು ಬೇಸರವ್ಯಕ್ತಪಡಿಸಿದರು.
ಈ ತೀರ್ಮಾನ ರಾಜ್ಯ ಸರ್ಕಾರದ ಸಿದ್ದರಾಮಯ್ಯ ನೇತೃತ್ವದ ಕ್ಯಾಬಿನೆಟ್ ಇದೆಯಲ್ಲಾ, ಡಿಕೆಶಿ ಅವರ ಪಾದದಡಿ ಇದೆ. ಈ ದೇಶದ ಕಾನೂನು ವ್ಯವಸ್ಥೆಯನ್ನು ಅವರ ಪಾದದಡಿ ತೆಗೆದುಕೊಂಡು ಹೋಗೋ ಕೆಲಸ ಮಾಡಿದ್ದಾರೆ. ಯಾವುದಾದ್ರೂ ಒಂದು ಉತ್ತಮವಾದ ಕೆಲಸ ಮಾಡೋದಕ್ಕಾಗಿ ಈ ರೀತಿಯ ತೀರ್ಮಾನ ಮಾಡಿದ್ರೆ ಅಭಿನಂದಿಸಬಹುದಾಗಿತ್ತು. ಹಿಂದಿನ ಸರ್ಕಾರಕ್ಕೆ ತನಿಖಾ ಸಂಸ್ಥೆಗಳು ತನಿಖೆ ಮುಂದುವರೆಸಲು ಅನುಮತಿ ಕೋರಿದ್ದರು. ಆ ಸಂದರ್ಭದಲ್ಲಿ ಅವತ್ತಿನ ಸರ್ಕಾರ ತೀರ್ಮಾನ ಕೊಟ್ಟಿತ್ತು. ಇವತ್ತಿನ ಉಪಮುಖ್ಯಮಂತ್ರಿಯವರು ಆ ಸಂದರ್ಭದಲ್ಲಿ ಶಾಸಕರಾಗಿದ್ದರು. ಅವರು ರಾಜ್ಯದ ಜನತೆ ಪರವಾಗಿ ಕೆಲಸ ಮಾಡಿರುವುದಕ್ಕೆ ಬದಲಾಗಿ ಅವರ ವೈಯಕ್ತಿಕ ಸಮಸ್ಯೆ ಬಗೆಹರಿಸಲು ಉಪಯೋಗ ಮಾಡಿರುವುದೇ ಜಾಸ್ತಿ. ಅವರ ಶಾಸಕರ ಲೆಟರ್ಗಳನ್ನ ಇಂತಹ ಕೆಲಸಕ್ಕೆ ಉಪಯೋಗಿಸಿದ್ದೇ ಜಾಸ್ತಿ ಎಂದು ಕುಮಾರಸ್ವಾಮಿ ಕಿಡಿ ಕಾರಿದರು.

ಮೈನಿಂಗ್, ಗ್ರಾನೈಟ್ ಕೆಲಸ ಮಾಡಲು ಹಾಗೂ ಕಾನೂನು ಉಲ್ಲಂಘಿಸಿ ಮಾಡಿದ ಸಂಪತ್ತು ರಕ್ಷಿಸಲು ಸ್ಥಾನಮಾನ ಉಪಯೋಗಿಸಿಕೊಂಡಿದ್ದಾರೆ. ಯಾವ್ಯಾವ ರೀತಿ ಅವರ ಸ್ಥಾನ ಮಾನ ಉಪಯೋಗಿಸಿದ್ದಾರೆ ವೃತ್ತಿಸಂಬಂಧ ಎಂಬುದನ್ನೆಲ್ಲ ಈಗ ಚರ್ಚೆ ಮಾಡುವುದಿಲ್ಲ. ಅವರ ವಿರುದ್ಧ ಸುಪ್ರೀಂಕೋರ್ಟ್, ಹೈಕೋರ್ಟ್ನ ನಲ್ಲಿ ಹಲವು ಪ್ರಕರಣಗಳ ವಿಚಾರಣೆ ನಡೆಯುತ್ತಿದೆ. ತನಿಖೆ ಬಾಕಿ ಇದ್ದಾಗ ಈ ರೀತಿ ಕ್ಯಾಬಿನೆಟ್ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಿಲ್ಲ. ಮುಂದೆ ಇದು ಏನೇನ್ ಆಗುತ್ತೆ ನೋಡೋಣ ಎಂದ ವ್ಯಂಗ್ಯವಾಡಿದರು.












Click it and Unblock the Notifications