'ತುಮಕೂರು, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಮಂಡ್ಯದಲ್ಲೂ ನೀವೇ ನಿಲ್ಲಬೇಕು ಅಂತಾರೆ'
ಹಾಸನ, ಫೆಬ್ರವರಿ 12: ತುಮಕೂರು, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಮಂಡ್ಯದಲ್ಲೂ ನೀವೇ ನಿಲ್ಲಬೇಕು ಅಂತಾರೆ. ಇಲ್ಲಿ ನಮ್ಮ ಹಾಸನ ಜಿಲ್ಲೆಯಲ್ಲಿ ದೇವೇಗೌಡರು ನಿಲ್ಲದೆ ಇದ್ದರೆ ನೀವೇ ಬಂದುಬಿಡಿ ಎಂದು ಅಭಿಮಾನಿಗಳು ಹಾಗೂ ಕಾರ್ಯಕರ್ತರು ಅಂತಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದರು.
ಈ ಕುರಿತು ಸೋಮವಾರ ಹಾಸನದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ನಾನು ಸ್ಪರ್ಧೆ ಮಾಡಬೇಕು ಅಂತ ನಿಮಗೆ ಆಸೆ ಇದೆಯಾ? ರಾಜ್ಯ ಬಿಟ್ಟು ನನ್ನ ಏಕೆ ಕಳುಸ್ತೀರಾ, ನಾನು ರಾಜ್ಯದಲ್ಲಿ ಇರೋಣ ಅಂತ ಇದ್ದೇನೆ. ಎಲ್ಲಾ ಕಡೆ ಕೇಳ್ತಾರೆ, ಈ ಭಾರಿ ನಿಂತರೆ ನೀವು ಕೇಂದ್ರದಲ್ಲಿ ಮಂತ್ರಿ ಆಗ್ತಿರಿ. ರಾಜ್ಯಕ್ಕೆ ಒಳ್ಳೆಯದಾಗುತ್ತೆ ನಿಲ್ಲಬೇಕು, ನಿಲ್ಲಬೇಕು ಅಂತಾರೆ, ನಾನು ಆ ವಿಷಯದಲ್ಲಿ ಈ ಕ್ಷಣದವರೆಗೂ ಯಾವುದೇ ತೀರ್ಮಾನ ಮಾಡಿಲ್ಲ ಎಂದು ಹೇಳಿದರು.

ಹಾಸನ ಮಂಡ್ಯ ಬಿಜೆಪಿಗೆ ಟಿಕೆಟ್ ನೀಡುವಂತೆ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ ಒತ್ತಾಯ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಅವರನ್ನೇ ನಿಲ್ಲಿಸಬೇಕೆಂದರೆ ನಿಲ್ಲಿಸೋಣ. ಅವರೇ ನಿಲ್ಲಬೇಕು ಎನ್ನುವ ಆಸೆ ಇದ್ದರೆ ಚರ್ಚೆ ಮಾಡೋಣ ನಾವು, ಅವರು ಅಣ್ಣ-ತಮ್ಮಂದಿರ ತರ ಹೋಗಬೇಕಲ್ವಾ? ಪಾಪ ಯಾರ್ಯಾರೋ ಅವನ ಮನಸ್ಸಿನ ಮೇಲೆ ಪರಿಣಾಮ ಆಗುವ ಹಾಗೇ ಹೇಳ್ತಾರೆ. ಅವರಿಗೆ ಇನ್ನೂ ಯಂಗ್ ಏಜ್, ಪಾಪ ಮಾತಾಡುತ್ತಾರೆ, ಮಾತಿನ ಬಿರುಸು. ಅವನು ಒಬ್ಬ ನಮ್ಮ ತಮ್ಮ ಅಲ್ವಾ ಕುಳಿತು ಸರಿ ಮಾಡೋಣ ಅದೇನ್ ಸಮಸ್ಯೆ ಇಲ್ಲ ಎಂದು ಹೇಳಿದರು.
ಇತ್ತೀಚಿನ ರಾಜಕೀಯ ಸಂಘರ್ಷ ನಡೆಯುತ್ತಿದೆ. ಕೇಂದ್ರ ರಾಜ್ಯದ ನಡುವೆ ವಾಗ್ದಾಳಿ ನಡೆಯುತ್ತಿದೆ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ ಇಂದಿನಿಂದ ಜಂಟಿ ಅಧಿವೇಶನ ಆರಂಭವಾಗುತ್ತದೆ, ಫೆ.16 ಬಜೆಟ್ ಮಂಡನೆಗೆ ಸಮಯ ನಿಗದಿ ಮಾಡಿದ್ದಾರೆ. ವಿಧಾನಸಭೆ ಕಲಾಪದಲ್ಲಿ ಎಲ್ಲಾ ವಿಷಯಗಳ ಬಗ್ಗೆ ಮಾತನಾಡಲು ತೀರ್ಮಾನ ಮಾಡಿದ್ದೇನೆ, ಅಂಕಿ ಅಂಶಗಳ ಜೊತೆ ಚರ್ಚೆ ಮಾಡುತ್ತೇನೆ, ಕೇಂದ್ರದಿಂದ ರಾಜ್ಯಕ್ಕೆ ಟ್ಯಾಕ್ಸ್ ಹಣ ಕೊಡುವ ಈ ಸಿಸ್ಟಂ ಪ್ರಾರಂಭ ಆಗಿದ್ದು ಯಾವಾಗ? ಈಗ ದೊಡ್ಡಮಟ್ಟದಲ್ಲಿ ಕೇಂದ್ರದ ಮೇಲೆ ದಾಳಿ ನಡೆಯುತ್ತಿದೆ ಎಂದರು.

ಈ ರಾಜ್ಯದಲ್ಲಿ ದಾಖಲೆಯ ಬಜೆಟ್ ಮಂಡನೆ ಮಾಡಿರುವ ಮುಖ್ಯಮಂತ್ರಿಗಳು ನೀವೇ. ಈಗ ಕೇಂದ್ರ ಸರ್ಕಾರದಿಂದ ಅನ್ಯಾಯ ಆಗಿದೆ ಎಂದು ಹೇಳಿತ್ತಿದ್ದೀರಿ, 1952 ಸಂವಿಧಾನದಲ್ಲಿ ಸಂಸ್ಥೆಯನ್ನು ಪ್ರಾರಂಭ ಮಾಡಿದ್ರು. ಅಲ್ಲಿಂದ ಚರ್ಚೆ ಮಾಡಲು ಹೀದರೆ ದೊಡ್ಡ ಕಥೆಯಿದೆ. ಎನ್‌ಡಿಆರ್‌ಎಫ್‌ನಿಂದ ಬಿಡಿಗಾಸು ಕೊಟ್ಟಿಲ್ಲ ಅಂತಾರೆ, ಇವರಿಗೆ ರಾಜಕೀಯ ಗೊತ್ತಿಲ್ಲದೆ ಇದೆಯಾ? ವಿಶೇಷ ಅನುದಾನ ಕೆಲವು ಭಾರಿ ಕೊಟ್ಟಿದ್ದಾರೆ. ಮೈತ್ರಿ ಸೀಟ್ ಬಗ್ಗೆ ಯಾವುದೇ ಸಮಸ್ಯೆ ಇಲ್ಲ. ಕಾಂಗ್ರೆಸ್‌ನ ದುರಾಡಳಿತ ಏನಿದೆ ಅದನ್ನು ತೆಗೆಯಬೇಕು ಎಂದು ಹೇಳಿದರು.
ಕೆಂಪಣ್ಣ ಆರೋಪ ಮಾಡಿದ್ದಾರೆ, ಸಾಕ್ಷಿ ಕೊಡಲಿ ಅಂತಾರೆ. ಅವರ ಪಕ್ಷದ ಮಾಜಿ ಸಚಿವರೇ ಬೆಳಿಗ್ಗೆ ಡಂಗುರ ಹೊಡೆಯುತ್ತಿದ್ದಾರೆ, ಇದೇ ಕೆಂಪಣ್ಣನ ಹೇಳಿಕೆ ಇಟ್ಕಂಡು ಪೇ ಸಿಎಂ ಎಂದು ಅಂಟಿಸಿದರು, ಈ ಭ್ರಷ್ಟ ಸರ್ಕಾರ ತೆಗೆಯಬೇಕು, 28 ಕ್ಕೆ 28 ಸೀಟ್ ಗೆಲ್ಲಬೇಕು. ಸೀಟ್ ಹಂಚಿಕೆಯಲ್ಲಿ ಎಷ್ಟು ಅನ್ನೋದು ಮುಖ್ಯವಲ್ಲ, ಮಂಡ್ಯದು ಪ್ರತಿ ದಿನ ಒಂದು ಧಾರಾವಾಹಿ ಇರಲೇಬೇಕು. ನಿಖಿಲ್ ಕುಮಾರಸ್ವಾಮಿ ಅವರ ರಾಜಕೀಯವಾಗಿ ಮುಗಿಸಲೇಬೇಕು ಎಂದು ಯಾವ ರೀತಿ ರಾಜಕೀಯ ಮಾಡಿದ್ರು. ಪಾಪ ಅವನು ಅಮಾಯಕ ಎಂದು ಕುಮಾರಸ್ವಾಮಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.












Click it and Unblock the Notifications