HD Kumaraswamy: ಜೆಡಿಎಸ್‌ಗೆ ಸಿದ್ದಾಂತ ಎಲ್ಲಿದೆ ಎಂದ ಸಿದ್ದರಾಮಯ್ಯ ವಿರುದ್ದ ಕುಮಾರಸ್ವಾಮಿ ಆಕ್ರೋಶ

ಬೆಂಗಳೂರು, ಜುಲೈ 18: ಜೆಡಿಎಸ್‌ಗೆ ಸಿದ್ದಾಂತ ಎಲ್ಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್‌ ನಾಯಕ ಹೆಚ್‌ ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಸಿದ್ದಾರೆ.

ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರಿಗೆ ಯಾವ ಸಿದ್ದಾಂತವಿದೆ, ಪಕ್ಕದಲ್ಲೇ ಕೂರಿಸಿಕೊಂಡಿದ್ದರಲ್ಲ. ನಿತೀಶ್ ಕುಮಾರ್,ಅಬ್ದುಲ್ಲಾಗೆ ಯಾವ ಸಿದ್ದಾಂತವಿದೆ. ಯಾವಾಗ ಕಾಂಗ್ರೆಸ್ ಜೊತೆ ಇದ್ರು, ಬಿಜೆಪಿ ಜೊತೆಗೆ ಯಾವಾಗ ಸರ್ಕಾರ ಮಾಡಿದ್ರು ಎಲ್ಲವೂ ಉದಾಹರಣೆಗಳಿದೆ. ಎಷ್ಟು ಪ್ರಕರಣಗಳಿದೆ, ಜೆಡಿಎಸ್‌ಗೆ ಮಾತ್ರ ಸಿದ್ದಾಂತವಿಲ್ಲ ಇವರಿಗೆ ಮಾತ್ರ ಸಿದ್ದಾಂತವಿದ್ಯಾ!? ಎಂದು ಪ್ರಶ್ನಿಸಿದರು.

Former CM HD Kumaraswamy

2008-2009 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜೊತೆಗೆ ಮೈತ್ರಿಗೆ ಹೋಗಿದ್ದು ಯಾರು..? ಮಲ್ಲಿಕಾರ್ಜುನ ಖರ್ಗೆ ವಿಪಕ್ಷನಾಯಕರಾಗಿದ್ದಾಗ ಮೈತ್ರಿಗೆ ಹೋಗಿರಲಿಲ್ವಾ? ಅವರನ್ನೆ ಕೇಳಿ, ಈ ಬೂಟಾಟಿಕೆಗಳು ಬೇಡ ಎಂದು ಕಾಂಗ್ರೆಸ್ ವಿರುದ್ದ ಮಾಜಿ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದರು.

ಘಟಬಂಧನ್ ಸಭೆಗೆ ಅಧಿಕಾರಿಗಳ ನಿಯೋಜನೆ ವಿಚಾರವಾಗಿ ಮಾತನಾಡಿದ ಅವರು, 40 ವರ್ಷದ ರಾಜಕೀಯ ಇತಿಹಾಸದಲ್ಲಿ ಈ ರೀತಿ ಎಂದು ನಡೆದಿಲ್ಲ. ದೇಶದಲ್ಲಿ ರಾಜಕೀಯ ಸಭೆ ಎಲ್ಲಾ ಕಡೆ ನಡೆದಿದೆ, ಈ ಹಿಂದೆ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿಯವರು ಹಲವರು ನಾಯಕರ ಸಭೆ ನಡೆಸಿದರು. ಕಲ್ಕತ್ತಾದಲ್ಲಿ ಸಭೆಗೆ ನಮಗೆ ಆಹ್ವಾನ ಕೊಟ್ಟಿದ್ದರು. ನಾವು ಸಭೆಗೆ ಹೋಗಿದ್ದಾಗ ಶಾಸಕರು,ಸಂಸದರನ್ನ ಕಳಿಸಿ ಆಹ್ವಾನ ಮಾಡಿಸಿದರು. ಅದರೆ, ಇಲ್ಲಿ ಸ್ವೇಚ್ಚಾಚಾರ ಮಾಡಿ ಐಎಎಸ್ ಅಧಿಕಾರಿಗಳ ನಿಯಮವನ್ನು ಗಾಳಿಗೆ ತೂರಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

Former CM HD Kumaraswamy

ಇನ್ನೂ ಸಿಎಂ ಆದೇಶ ಮಾಡಿರುವುದು ಎಂದು ಅಧಿಕಾರಿಗಳೆ ಹೇಳಿದ್ದಾರೆ. ಸಿಎಂ,ದೊಡ್ಡ ಮಟ್ಟದ ನಾಯಕರು ಓಕೆ, ದ್ವಾರಪಾಲಕರ ರೀತಿ ಕೆಲಸ ಮಾಡುವುದನ್ನ ಅಧಿಕಾರಿಗಳನ್ನ ಯಾವ ಮಟ್ಟಕ್ಕೆ ಇಳಿಸಿದ್ದಾರೆ. ಇನ್ನೂ 50 ಜನ ನಾಯಕರನ್ನ ಕರೆಸಿಕೊಳ್ಳಿ. ಶಾಸಕರು, ಮಂತ್ರಿ, ಮುಖ್ಯಮಂತ್ರಿ ಹೋದ್ರೆ ಪರವಾಗಿಲ್ಲ. ಅಧಿಕಾರ ದುರುಪಯೋಗ ಪಡಿಸಿಕೊಳ್ಳುವುದು ಸರಿಯಲ್ಲ, ಪಕ್ಷದ ಖಾಸಗಿ ಕಾರ್ಯಕ್ರಮಕ್ಕೆ ನಿಯೋಜನೆ ಮಾಡುವುದು ಇದಕ್ಕಿಂದ ನಾಚಿಕೆಗೇಡಿನ ಕೆಲಸವಿಲ್ಲ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಎಲ್ಲಾ ಕಾಲದಲ್ಲೂ ಅಧಿಕಾರಿಗಳ ನಿಯೋಜನೆ ಮಾಡಲಾಗಿತ್ತು ಎಂಬ ಡಿಸಿಎಂ ಡಿ ಕೆ ಶಿವಕುಮಾರ್‌ ಹೇಳಿಕೆ ವಿಚಾರವಾಗಿ ಮಾತನಾಡಿ, ಯಾವ ಸರ್ಕಾರದಲ್ಲಿ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿತ್ತು. ರಾಮಕೃಷ್ಣ ಹೆಗ್ಗಡೆಗಳು ಇದ್ದಾಗಲೂ ಸಭೆ ನಡೆಸಲಾಗಿತ್ತಲ್ಲ. ಗಾಜಿನ ಭವನದಲ್ಲಿ ಅಂದು ಕಾಂಗ್ರೆಸ್ ಸಭೆ ನಡೆಸಲಾಗಿತ್ತು, ಯಾವತ್ತೂ ಈ ರೀತಿ ಆಗಿಲ್ಲ. ಅಧಿಕಾರಿಗಳನ್ನು ಗನ್ ಮ್ಯಾನ್ ರೀತಿ ನಡೆಸಿಕೊಳ್ಳುವುದು ಸರಿಯಲ್ಲ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+