Get Updates
Get notified of breaking news, exclusive insights, and must-see stories!

ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ

ಬೆಂಗಳೂರು: ಹೊರಗುತ್ತಿಗೆ ರದ್ದುಪಡಿಸಿ ಅರಣ್ಯ ಇಲಾಖೆಯಿಂದಲೇ ವೇತನ ಪಾವತಿಸುವುದೂ ಸೇರಿದಂತೆ ತಮ್ಮ ಹಲವು ಬೇಡಿಕೆ ಮುಂದಿಟ್ಟು ಏಪ್ರಿಲ್ 1ರಿಂದ ವನ್ಯಜೀವಿ ವಿಭಾಗದ ಹಂಗಾಮಿ ನೌಕರರು ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ. ಈ ಮುಷ್ಕರದಿಂದ ಸಾಕಷ್ಟು ಸಮಸ್ಯೆ ಆಗಲಿದ್ದು, ಕೂಡಲೇ ಅವರನ್ನು ಕರೆದು ಚರ್ಚಿಸುವಂತೆ ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ ಅವರು ಸೂಚನೆ ನೀಡಿದ್ದಾರೆ. ಈ ಮೂಲಕ ಸಂಭಾವ್ಯ ಮುಷ್ಕರ ತಡೆಗೆ ಮುಂದಾಗಿದ್ದಾರೆ.

ಬಂಡೀಪುರದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ದಿನಗೂಲಿ ಹೌರಗುತ್ತಿಗೆ ನೌಕರರ ಸಂಘದ ಅಧ್ಯಕ್ಷರು ಎಂ.ಎ. ನಾಗರಾಜು ಅವರು ಹೇಳಿದ್ದಾರೆ. ಬಂಡೀಪುರ ಮತ್ತು ನಾಗರಹೊಳೆಯಲ್ಲಿ ಕಳೆದ ಅಕ್ಟೋಬರ್ ಮತ್ತು ನವೆಂಬರ್ ನಲ್ಲಿ ಹುಲಿಗಳ ದಾಳಿ ನಡೆದಿತ್ತು. ಆನೆಗಳ ಸಮಸ್ಯೆ ಚಿಕ್ಕಮಗಳೂರು, ಹಾಸನ ಮತ್ತು ಕೊಡುಗು ಜಿಲ್ಲೆಯಲ್ಲಿ ಹೆಚ್ಚಾಗಿದೆ. ಮಿಗಿಲಾಗಿ ಬೇಸಿಗೆ ಕಾಲವಾದ ಕಾರಣ ಕಾಡ್ವಿಚ್ಚಿನ ಭೀತಿಯೂ ಇರುತ್ತದೆ. ಈ ಹಂತದಲ್ಲಿ ಮುಂಚೂಣಿ ಸಿಬ್ಬಂದಿ ಮುಷ್ಕರ ನಡೆಸಿದರೆ ಅದರಿಂದ ಪ್ರತೀಕೂಲ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.

Forest Outsource Employees Strike

ಆದ್ದರಿಂದ ಮುಷ್ಕರ ನಡೆಯದಂತೆ ಕ್ರಮ ಕೈಗೊಳ್ಳುವ ಸಂಬಂಧ ಕೂಡಲೇ ಸಂಘದ ಸದಸ್ಯರು ಒಳಗೊಂಡಂತೆ ಸಭೆ ಕರೆದು ಚರ್ಚಿಸಬೇಕು. ಅರಣ್ಯ ಇಲಾಖೆ ವ್ಯಾಪ್ತಿಯ ಹೊರಗುತ್ತಿಗೆ ನೌಕರರ ಸಮಸ್ಯೆ ಆಲಿಸಿ ಸೂಕ್ತ ಶಿಫಾರಸಿನೊಂದಿಗೆ ಪ್ರಸ್ತಾವನೆಯನ್ನು ಕಡತದಲ್ಲಿ ಮಂಡಿಸುವಂತೆ ಸಚಿವರು ತಿಳಿಸಿದ್ದಾರೆ.

Train Delay: ರೈಲು ಪ್ರಯಾಣಿಕರೇ ಎಚ್ಚರ! ನಾಳೆ ಬೆಂಗಳೂರು-ಚೆನ್ನೈ ನಡುವಿನ ಸಂಚಾರದಲ್ಲಿ ಭಾರಿ ವ್ಯತ್ಯಯ
Train Delay: ರೈಲು ಪ್ರಯಾಣಿಕರೇ ಎಚ್ಚರ! ನಾಳೆ ಬೆಂಗಳೂರು-ಚೆನ್ನೈ ನಡುವಿನ ಸಂಚಾರದಲ್ಲಿ ಭಾರಿ ವ್ಯತ್ಯಯ

ಮುಷ್ಕರಕ್ಕೆ ಮುಂದಾದ ನೌಕರರ ಪ್ರಮುಖ ಬೇಡಿಕೆಗಳೇನು?

1. ಹೊರಗುತ್ತಿಗೆ ನಿಯೋಜನೆಗೊಂಡ ದಿನಗೂಲಿ ನೌಕರರ ಸೇವೆ 15 ರಿಂದ 20 ವರ್ಷಗಳು ವ್ಯರ್ಥವಾಗಿ ಇವರೆಲ್ಲಾ 2017-18ರಿಂದ ಹೊಸಸೇರ್ಪಡೆ ಆಗುತ್ತಾರೆ. 2017ರ ನಂತರದಲ್ಲಿ 10 ವರ್ಷಗಳ ಒಳಗೆ ನಿವೃತ್ತಿ ಹೊಂದಿದ ನೌಕರರಿಗೆ ಕಾರ್ಮಿಕ ಭವಿಷ್ಯನಿಧಿ ಸೌಲಭ್ಯ (E.P.F) ಸಿಗುತ್ತಿಲ್ಲ. ಅದಕ್ಕೆ ವ್ಯವಸ್ಥೆ ಮಾಡಬೇಕು.

2. ಈ ಹಿಂದೆ ಮಾಸಿಕ 30 ದಿನಗಳಿಗೆ ಸಂಬಳ ಸಿಗುತ್ತಿದ್ದು ಈಗ ಇವರಿಗೆ 26 ದಿನಗಳಿಗೆ ಮಾತ್ರ ಸಂಬಳವಿದೆ. ಹಿಂದಿನಂತೆ 30 ದಿನಗಳ ಸಂಬಳಕ್ಕಾಗಿ ನೌಕರರು ಬೇಡಿಕೆ ಇಟ್ಟಿದ್ದಾರೆ.

3. ನೌಕರರಿಗೆ ಬರುವ ಕಡಿಮೆ ಸಂಬಳದಲ್ಲಿ ಉಳಿತಾಯ ಸಾಧ್ಯವಿರುವುದಿಲ್ಲ. ರಕ್ಷಣಾ ಶಿಬಿರದ ನೌಕರರುಗಳು ದಿನದ 24 ಗಂಟೆ ಶಿಬಿರಗಳಲ್ಲಿ ತೊಡಗಿಸಿಕೊಂಡಿರಬೇಕಾಗುತ್ತದೆ. ಏಜೆನ್ಸಿಗಳಿಂದ ಸೇವಾ ಭದ್ರತೆ ಸಾಧ್ಯವಿರುವುದಿಲ್ಲ. ಅಗತ್ಯ ಭದ್ರತೆ ನೀಡುವಂತೆ ಕೋರಿದ್ದಾರೆ.

4. ಕಷ್ಟ ಪರಿಹಾರ ಭತ್ಯೆ ತಾರತಮ್ಯ: ವನ್ಯಜೀವಿ ಘಟಕಗಳಲ್ಲಿ ಮಾನವ ವನ್ಯಜೀವಿ ಸಂಘರ್ಷ ನಿರಂತರವಾಗಿದೆ. ಈ ಕಾರ್ಯಾಚರಣೆಯಲ್ಲಿ ವಾಹನ ಚಾಲಕರ ಸೇವೆ ಅತ್ಯಾವಶ್ಯಕವಾಗಿದೆ. 2024 ರಿಂದ ಜಾರಿಗೆ ಬಂದಿರುವ ಸೌಲಭ್ಯ ಚಾಲಕರಿಗೆ ಲಭ್ಯವಾಗಿಲ್ಲ. ಹಾಗಾಗಿ ವಾಹನ ಚಾಲಕರಿಗೆ ಕಷ್ಟ ಪರಿಹಾರ ಭತ್ಯೆ ನೀಡಲು ಈಗಾಗಲೇ ಮನವಿ ಮಾಡಿದ್ದಾರೆ.

5. ವಿಮಾ ಹಣದ ದುರುಪಯೋಗ: ಹೊರಗುತ್ತಿಗೆ ಜಾರಿ ನಂತರದಲ್ಲಿ ನೌಕರರ ಸಂಬಳದಲ್ಲಿ ಕಡಿತವಾಗಿರುವ E.P.F. ಹಾಗೂ E.S.I. ಶೇ.40 ರಷ್ಟು ಹಣ ಏಜೆನ್ಸಿಗಳ ಪಾಲಾಗಿದೆ, ದುರುಪಯೋಗವಾಗಿದೆ. 2017-18 ರಿಂದ 2025-26ನೇ ಅವಧಿಗೆ 2 ಕೋಟಿಗೂ ಹೆಚ್ಚು ಏಜೆನ್ಸಿಗಳ ಪಾಲಾಗಿದೆ. ನೌಕರರ ಹಣ ವಾಪಸ್ಸು ಸಿಗಬೇಕಿದೆ ಎಂದು ಆಗ್ರಹಿಸಿದ್ದಾರೆ. ಇದೆಲ್ಲ ಬೇಡಿಕೆ ಈಡೇರಿಸದಿದ್ದಲ್ಲಿ, ಬಂಡಿಪುರದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ನೌಕರರ ಸಂಘ ತಿಳಿಸಿದೆ.

"ಕಾಂಗ್ರೆಸ್‌ನಿಂದ ದಲಿತ ದ್ರೋಹ: 14,200 ಕೋಟಿ ರೂ ಎಸ್‌ಸಿಎಸ್‌ಪಿ/ಟಿಎಸ್‌ಪಿ ಹಣ ಗ್ಯಾರಂಟಿ ಪಾಲು''

ಇನ್ನೊಂದು ವಾರದೊಳಗೆ ಅಧಿಕಾರಿಗಳ ಸಭೆ?

ಅಷ್ಟೇ ಅಲ್ಲದೇ ಇಲಾಖೆ ಅಧಿಕಾರಿಗಳು ನೌಕರರ ಮುಷ್ಕರ ಸ್ಥಳಕ್ಕೆ ಭೇಟಿ ನೀಡಿದ್ದು, ನಮ್ಮ ಬೇಡಿಕೆಗಳ ಬಗ್ಗೆ ಅಗತ್ಯ ಕ್ರಮ ವಹಿಸುವ ಭರವಸೆ ನೀಡಿದ್ದೀರಿ. ಅಲ್ಲದೇ ಅರಣ್ಯ ಸಚಿವರು ಕರೆದಿದ್ದ ಅಧಿಕಾರಿಗಳ ಸಭೆಯಲ್ಲೂ ಸಚಿವರು ವಾರದೊಳಗೆ ಈ ಬಗ್ಗೆ ಕ್ರಮವಹಿಸಲು ಸೂಚಿಸಿದ್ದರು. ಆದರೆ ಈವರೆಗೂ ನಮ್ಮ ಬೇಡಿಕೆ ಈಡೇರಿಕೆಗೆ ನೀವು ಮುಂದಾಗಿಲ್ಲ. ಹೀಗಾಗಿ ನೌಕರರ ಬೇಡಿಕೆಗಳ ಬಗ್ಗೆ ನ್ಯಾಯ ದೊರಕಿಸಿಕೊಡಬೇಕೆಂದು ಅವರು ಸರ್ಕಾರದ ಬಳಿ ಕೋರಿದ್ದೇವೆ ಎಂದು ಹೊರಗುತ್ತಿಗೆ ನೌಕರರ ಸಂಘ ತಿಳಿಸಿದೆ. ಇನ್ನೊಂದು ವಾರದೊಳಗೆ ಅರಣ್ಯ ಸಚಿವರ ನಿರ್ದೇಶನದಂತೆ ಇಲಾಖೆ ಅಧಿಕಾರಿಗಳು ನೌಕರರ ಜತೆ ಸಭೆ ನಡೆಸಿ ಸಮಸ್ಯೆ ಬಗೆಹರಿಸುವ ಸಾಧ್ಯತೆ ಇದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+