ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಬಿಜೆಪಿಯಲ್ಲಿ ಬದಲಾವಣೆ ಗಾಳಿ ಆರಂಭ

By ಒನ್ ಇಂಡಿಯಾ ಪೊಲಿಟಿಕಲ್ ಡೆಸ್ಕ್
|
Google Oneindia Kannada News

ಬೆಂಗಳೂರು, ಜೂನ್ , 20: ಮುಂಬರುವ 2018ರ ರಾಜ್ಯ ವಿಧಾನಸಭಾ ಚುನಾವಣೆಗೆ ರಾಜ್ಯ ಬಿಜೆಪಿ ಸಕಲ ಕಡೆಯಿಂದಲೂ ಸಂಘಟಿತವಾಗುತ್ತಿದೆ. ಎಲ್ಲ ಭಿನ್ನಾಭಿಪ್ರಾಯಗಳನ್ನು ಬದಿಗೆ ಇಟ್ಟು ನಾಯಕರು ಒಂದಾಗಿ ಸಾಗುತ್ತಿದ್ದಾರೆ.

ರಾಜ್ಯ ಬಿಜೆಪಿ ನಡುವಿನಲ್ಲಿ ಎರಡು ಬಣಗಳಿವೆ ಎಂಬ ಸಂಗತಿಯನ್ನು ಒಪ್ಪಿಕೊಂಡಿದ್ದರೂ ಕೇಂದ್ರದ ನಾಯಕರು ಎಲ್ಲರನ್ನು ಒಟ್ಟಿಗೆ ಕರೆದುಕೊಂಡು ಹೋಗಲು ಶ್ರಮಿಸುತ್ತಿದ್ದಾರೆ. ಅದರಲ್ಲಿ ಆರಂಭಿಕ ಯಶಸ್ಸನ್ನು ಕಂಡಿದ್ದಾರೆ. [ಶೋಭಾ ಕರಂದ್ಲಾಜೆ ಕರ್ನಾಟಕದ ಜಯಲಲಿತಾ ಆಗುವರೆ?]

ಯುಗಾದಿಗೆ ಬಿಎಸ್ ವೈ ಗಾದಿ ಪಡೆದ ನಂತರ ಕೆಲವು ಕ್ಷಿಪ್ರ ಬದಲಾವಣೆಗಳು ನಡೆದಿವೆ. ವಿಧಾನ ಪರಿಷತ್ ಮತ್ತು ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಜಯ ದಾಖಲಿಸಿದ್ದು ಪಕ್ಷ ಸಂಘಟನೆ ದೃಷ್ಟಿಯಿಂದ ಉತ್ತಮ ಬೆಳವಣಿಗೆ ಎಂದೇ ಹೇಳಲಾಗಿದೆ.

ಪಕ್ಷ ಸಂಘಟನೆ

ಪಕ್ಷ ಸಂಘಟನೆ

2018 ರ ಚುನಾವಣೆಯಲ್ಲಿ ಬಿಜೆಪಿ ಕರ್ನಾಟಕದ ಅಧಿಕಾರದ ಚುಕ್ಕಾಣಿ ಹಿಡಿಯಲು ಸಕಲ ಸಿದ್ಧತೆ ಮಾಡಿಕೊಂಡಿದೆ. ಅದರಂತೆ ಪಕ್ಷ ಸಂಘಟನೆಗೆ ಒತ್ತು ನೀಡುತ್ತಿದೆ.

ಒಗ್ಗಟ್ಟಿನಲ್ಲಿ ಬಲವಿದೆ

ಒಗ್ಗಟ್ಟಿನಲ್ಲಿ ಬಲವಿದೆ

ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿಎಸ್ ವೈ ನಿಯುಕ್ತಿಗೊಂಡು ರಾಜ್ಯದ ಸಂಘಟನೆ ಹೇಗಲಿಗೇರಿಸಿಕೊಂಡರೆ ಅನಂತ್ ಕುಮಾರ್ ಕೇಂದ್ರದಲ್ಲಿ ಸಚಿವರಾಗಿದ್ದುಕೊಂಡು ರಾಜ್ಯದ ಆಗು ಹೋಗುಗಳಿಗೆ ಧ್ವನಿಯಾಗಿದ್ದಾರೆ.

ಬಿಜೆಪಿ ಹೊಸ ಪಡೆ

ಬಿಜೆಪಿ ಹೊಸ ಪಡೆ

ಬಿಎಸ್ ವೈ ಅಧ್ಯಕ್ಷರಾದ ನಂತರ ಜಿಲ್ಲಾ ಅಧ್ಯಕ್ಷರು ಸೇರಿದಂತೆ ಹೊಸ ಪಡೆಯನ್ನು ನೇಮಕ ಮಾಡಿಕೊಂಡಿದ್ದಾರೆ.

ಒಟ್ಟಾಗಿ ಸಾಗೋಣ

ಒಟ್ಟಾಗಿ ಸಾಗೋಣ

ಕೇಂದ್ರದ ನಾಯಕರು ರಾಜ್ಯ ಬಿಜೆಪಿಯ ಬದಲಾವಣೆ ಮತ್ತು ಬೆಳವಣಿಗೆಯನ್ನು ಗಮನಿಸುತ್ತಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಗೆ ಸಂಘಟನಾ ಸೂತ್ರಗಳನ್ನು ಕಳಿಸಿಕೊಟ್ಟಿದ್ದಾರೆ.

English summary
Karnataka BJP is ready for upcoming 2018 assembly election. With an eye on the assembly polls on 2018 Karnataka state BJP appointed new presidents for all districts in the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X