lokayukta Raid: ಮುಡಾ ಬೆನ್ನಲ್ಲೇ ಬುಡಾದಲ್ಲೂ ಬ್ರಹ್ಮಾಂಡ ಭ್ರಷ್ಟಾಚಾರ!
ಮುಡಾ ( ಮೈಸೂರು ಅಭಿವೃದ್ಧಿ ಪ್ರಾಧಿಕಾರ)ವು ಭ್ರಷ್ಟಾಚಾರದಿಂದ ಭಾರೀ ಸಂಚಲನವನ್ನೇ ಮೂಡಿಸಿದೆ. ಚುನಾವಣೆ ಹಿನ್ನೆಲೆಯಲ್ಲಿ ಮುಡಾ ಪ್ರಕರಣದ ವಿಷಯ ತುಸು ಹಿನ್ನೆಲೆಗೆ ಸರಿದಿತ್ತು. ಈ ನಡುವೆ ವಿವಿಧ ಪ್ರಾಧಿಕಾರಗಳಲ್ಲೂ ಭಾರೀ ಭ್ರಷ್ಟಾಚಾರ ನಡೆಯುತ್ತಿದೆಯೇ ಎನ್ನುವ ವಿಚಾರ ಜೋರಾಗಿ ಚರ್ಚೆಯಾಗುತ್ತಿದೆ. ಕರ್ನಾಟಕದ ಎಲ್ಲಾ ಇಲಾಖೆಗಳಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಬಿಜೆಪಿ ಹಾಗೂ ಜೆಡಿಎಸ್ ದೂರಿದೆ. ಇದೀಗ ಈ ವಿಷಯಕ್ಕೆ ಪುಷ್ಠಿ ನೀಡುವಂತೆ ಮತ್ತಷ್ಟು ಬೆಳವಣಿಗೆಗಳು ರಾಜ್ಯದಲ್ಲಿ ನಡೆಯುತ್ತಿವೆ. ಮುಡಾ ನಂತರ ಇದೀಗ ಬುಡಾದಲ್ಲೂ ಭಾರೀ ಭ್ರಷ್ಟಾಚಾರ ನಡೆದಿರುವುದು ರೆಡ್ ಹ್ಯಾಂಡ್ ಆಗಿ ಬೆಳಕಿಗೆ ಬಂದಿದೆ.
ಬುಡಾ ಅಂದರೆ ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ (ಬುಡಾ) ಆಯುಕ್ತ 10 ಲಕ್ಷ ರೂಪಾಯಿ ಲಂಚ ಪಡೆಯುವ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸ್ ಅವರ ಬಲೆಗೆ ಬಿದಿದ್ದು, ಇದೀಗ ವಿವಿಧ ಇಲಾಖೆಗಳಲ್ಲಿ ಭಾರೀ ಭ್ರಷ್ಟಾಚಾರ ನಡೆಯುತ್ತಿದೆ ಎನ್ನುವುದಕ್ಕೆ ಇಂಬು ನೀಡಿದಂತೆ ಆಗಿದೆ. ನಿವೇಶನವೊಂದಕ್ಕೆ ಸಂಬಂಧಿಸಿದಂತೆ ಇಲಾಖೆಯ ಅನುಮತಿ ನೀಡುವಾಗ 10 ಲಕ್ಷ ರೂಪಾಯಿ ಲಂಚ ಕೇಳಿರುವುದು ಈಗ ಬಯಲಾಗಿದೆ.

ಕೇವಲ ಲೋಕಾಯುಕ್ತ ಮಾತ್ರವಲ್ಲ ಅವರೊಂದಿಗೆ ಇನ್ನೂ ಇಬ್ಬರು ಅಧಿಕಾರಿಗಳು ಸಹ ಬಲೆಗೆ ಬಿದಿದ್ದಾರೆ. ಬೀದರ್‌ನಲ್ಲಿ ಕೃಷಿಯೇತರ ಜಮೀನಿನ(NA) ನಿವೇಶನಗಳ ಮಾರಾಟ ಮಾಡುವುದಕ್ಕೆ ಅನುಮತಿ ನೀಡಲು ಲಂಚ ಕೇಳಿದ್ದು, ಇದಕ್ಕಾಗಿ 10 ಲಕ್ಷ ರೂಪಾಯಿ ಲಂಚ ಸ್ವೀಕರಿಸುವ ಸಂದರ್ಭದಲ್ಲಿ ಬೀದರ್ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶ್ರೀಕಾಂತ್ ಚಿಮಕೋಡೆ, ಬುಡಾ ಸದಸ್ಯ ಚಂದ್ರಕಾಂತ್ ರೆಡ್ಡಿ ಮತ್ತು ಅವರ ಆಪ್ತ ಸಿದ್ದು ಹೂಗಾರ ಎನ್ನುವವರನ್ನು ಲೋಕಾಯುಕ್ತ ಪೊಲೀಸರು ಬಲೆ ಬೀಸಿದ್ದಾರೆ. ಈ ಬೆಳವಣಿಗೆ ರಾಜ್ಯ ಸರ್ಕಾರಕ್ಕೆ ತೀವ್ರ ಮುಜುಗರವನ್ನು ಉಂಟು ಮಾಡಿದೆ.
ಮುಡಾ ಹಗರಣದ ವಿಚಾರ ರಾಜ್ಯದಲ್ಲಿ ಭಾರೀ ಸಂಚಲವನ್ನೇ ಸೃಷ್ಟಿ ಮಾಡಿತ್ತು. ಅಲ್ಲದೇ ಈ ವಿಷಯವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸಹ ದೇಶದ ವಿವಿಧ ಚುನಾವಣೆ ರ್ಯಾಲಿಗಳಲ್ಲಿ ಪ್ರಸ್ತಾಪಿಸಿದ್ದರು. ಈ ವಿಷಯದಿಂದ ರಾಜ್ಯ ಸರ್ಕಾರವು ಭಾರೀ ಮುಜುಗರವನ್ನು ಅನುಭವಿಸಿತ್ತು. ರಾಜ್ಯ ಸರ್ಕಾರ ಮಾತ್ರವಲ್ಲ. ಈ ವಿಷಯದಿಂದ ಕಾಂಗ್ರೆಸ್‌ಗೆ ದೇಶದಾದ್ಯಂತ ಮುಜುಗರ ಆಗಿತ್ತು. ಈ ವಿಷಯ ತಣ್ಣಗಾಗುವ ಮೊದಲೇ ಇದೀಗ ರಾಜ್ಯದ ಮತ್ತೊಂದು ಅಭಿವೃದ್ಧಿ ಪ್ರಾಧಿಕಾರದಿಂದ ಭ್ರಷ್ಟಾಚಾರ ಹಾಗೂ ಭಾರೀ ಸಂಚಲನ ಸೃಷ್ಟಿ ಮಾಡಿದೆ.
ಬೀದರ್ ನಗರದ ಚಿಕ್ಕಪೇಟೆ ಎನ್ನುವ ಪ್ರದೇಶದ ಸರ್ವೇ ನಂಬರ್ 26ರಲ್ಲಿ ಕೃಷಿಯೇತರ ಜಮೀನಿನ ಶೇಕಡ 60 ರಷ್ಟು ನಿವೇಶನಗಳನ್ನು ಬಿಡುಗಡೆ ಮಾಡುವುದಕ್ಕೆ ಹಾಗೂ ಮಾರಾಟಕ್ಕೆ ಅನುಮತಿ ನೀಡಲು ಹಣ ಕೇಳಿದ್ದಾರೆ ಎನ್ನಲಾಗಿದೆ. ಬುಡಾದ ಆಯುಕ್ತ ಶ್ರೀಕಾಂತ್ ಹಾಗೂ ಚಂದ್ರಕಾಂತ್ ಎನ್ನುವವರು 50 ಲಕ್ಷ ರೂಪಾಯಿ ದುಡ್ಡು ನೀಡುವಂತೆ ಬೇಡಿಕೆ ಇರಿಸಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ 10 ಲಕ್ಷ ರೂಪಾಯಿ ಅಡ್ವಾನ್ಸ್ ಕೇಳುವಾಗ ಲೋಕಾಯುಕ್ತ ಪೊಲೀಸರು ಬಿಗ್ ಕಾರ್ಯಾಚರಣೆ ನಡೆಸಿದ್ದಾರೆ ಎಂದು ಹೇಳಲಾಗಿದೆ.
ಲೋಕಾಯುಕ್ತ ಕಾರ್ಯಾಚರಣೆಯಲ್ಲಿ ಟ್ವಿಸ್ಟ್: ಇನ್ನು ಲೋಕಾಯುಕ್ತ ಕಾರ್ಯಾಚರಣೆಯಲ್ಲಿ ಟ್ವಿಸ್ಟ್ ಇದೆ ಎಂದು ಹೇಳಲಾಗುತ್ತಿದೆ. ಭ್ರಷ್ಟಾಚಾರದ ಬಗ್ಗೆ ರಿಯಲ್ ಎಸ್ಟೇಟ್ ಉದ್ಯಮಿ ಸತೀಶ್ ನೌಬಾದೆ ಎನ್ನುವವರು ಲೋಕಾಯುಕ್ತಗೆ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಎಸ್ಪಿ ಉಮೇಶ್ ಅವರ ಅಧ್ಯಕ್ಷತೆಯಲ್ಲಿ ದಾಳಿ ಮಾಡಲಾಗಿದೆ. ಇನ್ನು ಶ್ರೀಕಾಂತ್ ಚಿಮಕೋಡೆ ಎನ್ನುವವರು ಬಿಜೆಪಿ ಮುಖಂಡ ಮತ್ತು ಗುತ್ತಿಗೆದಾರರಾದ ಗುರುನಾಥ್ ಕೊಳ್ಳೂರು ಎನ್ನುವವರ ಅವರ ಅಳಿಯ ಎಂದು ಹೇಳಲಾಗಿದೆ.











Click it and Unblock the Notifications