ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರವಾಹ ಪರಿಸ್ಥಿತಿ : ಕಾಂಗ್ರೆಸ್‌ನಿಂದ ವೀಕ್ಷಕರ ನೇಮಕ

|
Google Oneindia Kannada News

ಬೆಂಗಳೂರು, ಆಗಸ್ಟ್ 07 : ಕರ್ನಾಟಕ ಹಲವು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿದ್ದು, ಕಾಂಗ್ರೆಸ್ ವಿವಿಧ ಜಿಲ್ಲೆಗಳಿಗೆ ವೀಕ್ಷಕರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಈ ಕುರಿತು ಆದೇಶ ಹೊರಡಿಸಿದ್ದಾರೆ. ರಾಜ್ಯದಲ್ಲಿ ಉಂಟಾಗಿರುವ ಅತಿವೃಷ್ಟಿ ಪ್ರದೇಶಗಳ ವೀಕ್ಷಣೆಗಾಗಿ ಪ್ರಮುಖ ನಾಯಕರುಗಳನ್ನು ವೀಕ್ಷಕರನ್ನಾಗಿ ನೇಮಿಸಲಾಗಿದೆ ಎಂದು ಹೇಳಿದ್ದಾರೆ.

ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಮೂರು ದಿನ ವಾಸ್ತವ್ಯ: ಯಡಿಯೂರಪ್ಪಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಮೂರು ದಿನ ವಾಸ್ತವ್ಯ: ಯಡಿಯೂರಪ್ಪ

ಪ್ರವಾಹ ಪರಿಸ್ಥಿತಿ ಉಂಟಾಗಿರುವ ಜಿಲ್ಲೆಗಳ ವ್ಯಾಪ್ತಿಗೆ ಒಳಪಡುವ ಶಾಸಕರು ಕ್ಷೇತ್ರದಲ್ಲಿಯೇ ಇದ್ದು ಪರಿಹಾರ ಕಾರ್ಯದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಬೆಳಗಾವಿ, ಬಾಗಲಕೋಟೆ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.

ಯಡಿಯೂರಪ್ಪ ಸರಕಾರಕ್ಕೂ ಮಳೆಗೂ ಯಾಕಿಷ್ಟು ವಿಶೇಷ ನಂಟು?ಯಡಿಯೂರಪ್ಪ ಸರಕಾರಕ್ಕೂ ಮಳೆಗೂ ಯಾಕಿಷ್ಟು ವಿಶೇಷ ನಂಟು?

Flood Situation In Karnataka : Congress Appoints Observers

ಮಲೆನಾಡು, ಕರಾವಳಿ ಭಾಗದ ಜಿಲ್ಲೆಗಳಲ್ಲಿ ಭಾರಿ ಮಳೆಯಿಂದಾಗಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿಯೂ ಜನರು ಮಳೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಇದೇನಾ ನಿಮ್ಮ ಜನಮೆಚ್ಚಿನ ಆಡಳಿತ; ಬಿಎಸ್‌ವೈಗೆ ಜೆಡಿಎಸ್ ಪ್ರಶ್ನೆಇದೇನಾ ನಿಮ್ಮ ಜನಮೆಚ್ಚಿನ ಆಡಳಿತ; ಬಿಎಸ್‌ವೈಗೆ ಜೆಡಿಎಸ್ ಪ್ರಶ್ನೆ

ಬೆಳಗಾವಿ ವಿಭಾಗ : ಬೆಳಗಾವಿ ವಿಭಾಗಕ್ಕೆ ಮಾಜಿ ಸಚಿವ ಎಚ್. ಕೆ. ಪಾಟೀಲ್ ನೇತೃತ್ವದಲ್ಲಿ ವೀಕ್ಷಕರನ್ನು ನೇಮಕ ಮಾಡಲಾಗಿದೆ. ಸತೀಶ್ ಜಾರಕಿಹೊಳಿ, ಆರ್. ಬಿ. ತಿಮ್ಮಾಪುರ, ಉಮಾಶ್ರೀ, ಶಿವಾನಂದ ಪಾಟೀಲ್, ಐ. ಜಿ. ಸಂಗಡಿ ವೀಕ್ಷಕರಾಗಿದ್ದಾರೆ.

ಗದಗ ವಿಭಾಗ : ಕೆಪಿಸಿಸಿಯ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ನೇತೃತ್ವದಲ್ಲಿ ಗದಗ ವಿಭಾಗಕ್ಕೆ ವೀಕ್ಷಕರ ನೇಮಕವಾಗಿದೆ. ಎನ್‌. ಎಸ್. ಬೋಸರಾಜು, ರಾಜಶೇಖರ ಪಾಟೀಲ್, ಪ್ರಿಯಾಂಕ್ ಖರ್ಗೆ, ಶರಣಬಸಪ್ಪ ದರ್ಶನಾಪುರ, ನಾಸೀರ್ ಹುಸೇನ್, ಅಜಯ್ ಸಿಂಗ್ ವೀಕ್ಷಕರು.

English summary
KPCC appointed observers for the flood hit districts of Karnataka. The increase in release of water to river Krishna and heavy rain in Karavali and Malnad region created a flood situation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X