ನಿಮಗೆ ಸ್ವಾಭಿಮಾನ ಇಲ್ಲವೇ?, ಯಡಿಯೂರಪ್ಪಗೆ ಉಗ್ರಪ್ಪ ಪ್ರಶ್ನೆ

ಬೆಂಗಳೂರು, ಆಗಸ್ಟ್ 16 : "ಮುಖ್ಯಮಂತ್ರಿಗಳು ದೆಹಲಿ ಮತ್ತು ಬೆಂಗಳೂರು ನಡುವೆ ದಂಡಯಾತ್ರೆ ಮಾಡುತ್ತಿದ್ದಾರೆ. ಯಡಿಯೂರಪ್ಪ ಸ್ಥಿತಿ ನೋಡಿದರೆ ಗಾಬರಿಯಾಗುತ್ತದೆ. ಅವರ ಸ್ವಾಭಿಮಾನ ಶೂನ್ಯವಾಗಿದೆ" ಎಂದು ಕಾಂಗ್ರೆಸ್ ನಾಯಕ ವಿ. ಎಸ್. ಉಗ್ರಪ್ಪ ಬೇಸರ ವ್ಯಕ್ತಪಡಿಸಿದರು.

ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿದ ಮಾಜಿ ಸಂಸದ ವಿ. ಎಸ್. ಉಗ್ರಪ್ಪ ಕೇಂದ್ರ ಸರ್ಕಾರ ಮತ್ತು ಯಡಿಯೂರಪ್ಪ ವಿರುದ್ದ ವಾಗ್ದಾಳಿ ನಡೆಸಿದರು. "ನಿಮಗೆ ಸ್ವಾಭಿಮಾನ ಬೇಡವೇ?. ನಾವಾಗಿದ್ದರೆ ಅಲ್ಲಿಯೇ ರಾಜೀನಾಮೆ ಬಿಸಾಕಿ ಬರುತ್ತಿದ್ದೆವು?" ಎಂದು ಹೇಳಿದರು.

"ಕರ್ನಾಟಕದ ಪ್ರವಾಹ ಪರಿಸ್ಥಿತಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡಬೇಕು. ತಕ್ಷಣ 5 ಸಾವಿರ ಕೋಟಿ ಪರಿಹಾರ ಘೋಷಣೆ ಮಾಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಬೇಕು. ಇಲ್ಲವಾದಲ್ಲಿ ನಾವು ಸಹ ಹೋರಾಟ ಮಾಡಬೇಕಾಗುತ್ತದೆ" ಎಂದು ಉಗ್ರಪ್ಪ ಎಚ್ಚರಿಕೆ ನೀಡಿದರು.

ಕರ್ನಾಟಕದ ಪ್ರವಾಹ ಪರಿಸ್ಥಿತಿ ಬಗ್ಗೆ ಅಧ್ಯಯನ ಮಾಡಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಗೃಹ ಸಚಿವ ಅಮಿತ್ ಶಾ ಆಗಮಿಸಿದ್ದರು. ಆದರೆ, ಇಬ್ಬರು ಸಚಿವರು ಬಂದು ಹೋದರೂ ಕೇಂದ್ರ ಸರ್ಕಾರದಿಂದ ಯಾವುದೇ ಪರಿಹಾರವನ್ನು ಘೋಷಣೆ ಮಾಡಿಲ್ಲ..

ದಂಡಯಾತ್ರೆ ಮಾಡುತ್ತಿದ್ದಾರೆ

ದಂಡಯಾತ್ರೆ ಮಾಡುತ್ತಿದ್ದಾರೆ

"ಯಡಿಯೂರಪ್ಪ ಬೆಂಗಳೂರು ಟು ದೆಹಲಿ ದೆಹಲಿ ಟು ಬೆಂಗಳೂರು ದಂಡಯಾತ್ರೆ ಮಾಡುತ್ತಿದ್ದಾರೆ. ಅವರ ಸ್ಥಿತಿ ನೋಡಿದರೆ ಗಾಬರಿಯಾಗುತ್ತಿದೆ. ಅವರ ಸ್ವಾಭಿಮಾನ ಶೂನ್ಯವಾಗಿದೆ, ಏನಾದರೂ ಪರವಾಗಿಲ್ಲ ಅಧಿಕಾರ ಇದ್ದರೆ ಸಾಕು ಅಂತಿದ್ದಾರೆ. ಪ್ರವಾಹ ಪರಿಹಾರ ಕೇಳಿದರೆ ನೋಟ್ ಪ್ರಿಂಟ್ ಮಿಷಿನ್ ಇಲ್ಲ ಅಂತಾರೆ. ಆದರೆ, ನೋಟ್ ಕೌಂಟ್ ಮೆಷಿನ್ ಅವರ ಮನೆಯಲ್ಲಿವೆ" ಎಂದು ಉಗ್ರಪ್ಪ ಆರೋಪಿಸಿದರು.

ನಷ್ಟದ ಅಂದಾಜು ಇನ್ನೂ ಸಿಕ್ಕಿಲ್ಲವೇ?

ನಷ್ಟದ ಅಂದಾಜು ಇನ್ನೂ ಸಿಕ್ಕಿಲ್ಲವೇ?

"ರಾಜ್ಯಕ್ಕೆ ಅಮಿತ್ ಶಾ ಭೇಟಿ ನೀಡಿದರು.ನಿರ್ಮಲಾ ಸೀತಾರಾಮನ್ ಕೂಡ ಪರಿಶೀಲಿಸಿ ಹೋಗಿದ್ದಾರೆ.ಇಲ್ಲಿಗೆ ಬಂದು ಹೋದವರು ಕೇಂದ್ರಕ್ಕೆ ಮಾಹಿತಿ ನೀಡಬೇಕಿತ್ತು.ಪ್ರವಾಹ ಪರಿಸ್ಥಿತಿಯ ನಷ್ಟದ ಬಗ್ಗೆ ಸಿಎಂ ಆದರೂ ಅಂದಾಜಿಸಬೇಕಿತ್ತು.ಆದರೆ ಅವರು ನಷ್ಟದ ಅಂದಾಜು ಮಾಡಿಸಿಲ್ಲ,ಸಂತ್ರಸ್ಥರ ಮೇಲೆ ಲಾಠಿ ಚಾರ್ಜ್ ಮಾಡಿಸಿದ್ದಾರೆ" ಎಂದು ಆರೋಪಿಸಿದರು.

1600 ಕೋಟಿ ಕೊಟ್ಟಿದ್ದರು

1600 ಕೋಟಿ ಕೊಟ್ಟಿದ್ದರು

"ಮನಮೋಹನ್ ಸಿಂಗ್ ರಾಯಚೂರಿಗೆ ಭೇಟಿ ನೀಡಿದ್ದರು.ಸ್ಥಳದಲ್ಲೇ 1600 ಕೋಟಿ ಅನುದಾನ ಘೋಷಿಸಿದ್ದರು.ಆದರೆ ಪ್ರಧಾನಿ ಮೋದಿಯವರು ರಾಜ್ಯಕ್ಕೆ ಬಂದೇ ಇಲ್ಲ.ಮಹಾರಾಷ್ಟ್ರಕ್ಕೆ 4,ಗುಜರಾತ್‌ಗೆ 5 ಸಾವಿರ ಕೋಟಿ ಕೊಟ್ಟಿದ್ದಾರೆ.ಆದರೆ, 25 ಸಂಸದರನ್ನ ಗೆಲ್ಲಿಸಿದರೂ ರಾಜ್ಯಕ್ಕೆ ಏಕೆ ಅನುದಾನ ನೀಡಿಲ್ಲ?. ಜನರ ಬದುಕಿನ ಜೊತೆ ಯಡಿಯೂರಪ್ಪ, ಮೋದಿ, ಅಮಿತ್ ಶಾ ಆಟವಾಡುತ್ತಿದ್ದಾರೆ" ಎಂದು ಉಗ್ರಪ್ಪ ದೂರಿದರು.

ರಾಜಕೀಯ ಮಾಡುವುದಿಲ್ಲ

ರಾಜಕೀಯ ಮಾಡುವುದಿಲ್ಲ

"ಬರ, ಪ್ರವಾಹದ ವಿಚಾರದಲ್ಲಿ ಹಸ್ತಕ್ಷೇಪ ಮಾಡಲ್ಲ,ರಾಜಕೀಯ ಲಾಭ ಪಡೆಯುವ ಕೆಲಸವನ್ನು ನಾವು ಮಾಡುವುದಿಲ್ಲ.ಜನರ ಕಷ್ಟದಲ್ಲಿ ಭಾಗಿಯಾಗುವುದಷ್ಟೇ ನಮ್ಮ ಗುರಿ.ಸಂಪುಟ ರಚನೆಗೆ ನಿಮ್ಮ ಹೈಕಮಾಂಡ್ ಬಿಡುತ್ತಿಲ್ಲ.ನೀವು ಅದೇಗೆ ನಿಮ್ಮ ಹೈಕಮಾಂಡ್ ಸಹಿಸಿಕೊಂಡಿದ್ದೀರಿ?.ನಿಮಗೆ ಸ್ವಲ್ಪನಾದರೂ ಸ್ವಾಭಿಮಾನ ಇಲ್ಲವೇ?" ಎಂದು ಉಗ್ರಪ್ಪ ಪ್ರಶ್ನೆ ಮಾಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+