Karnataka Elections: ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಗೆ ಕ್ಷಣಗಣನೆ; ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ

ಚುನಾವಣೆಯಲ್ಲಿ ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗುವುದು, ಬಹುತೇಕ ಹಾಲಿ ಶಾಸಕರಿಗೆ ಟಿಕೆಟ್ ಘೋಷಣೆ ಮಾಡಲಿದ್ದಾರೆ ಎನ್ನಲಾಗಿದೆ.

ಬೆಂಗಳೂರು, ಮಾರ್ಚ್ 16: ಮುಂಬರುವ ವಿಧಾನಸಭಾ ಚುನಾವಣೆಗೆ ಪಕ್ಷಗಳು ಟಿಕೆಟ್ ಹಂಚಿಕೆ ಮಾಡುತ್ತಿದ್ದು, ಶುಕ್ರವಾರ (ಮಾರ್ಚ್ 17) ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ. ದೆಹಲಿಯಲ್ಲಿ ಎಐಸಿಸಿ‌ ಚುನಾವಣಾ ಸಮಿತಿ ಸಭೆ ನಡೆಯಲಿದ್ದು, ಮೊದಲ ಪಟ್ಟಿ ಹೊರಬೀಳಬಹುದು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ಚುನಾವಣಾ ಸಮಿತಿ ಸಭೆಯು ನಡೆಯಲ್ಲಿದೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಮಾಜಿ ಡಿಸಿಎಂ ಜಿ. ಪರಮೇಶ್ವರ್ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಮಾರ್ಚ್ 20 ರಂದು ರಾಜ್ಯಕ್ಕೆ ರಾಹುಲ್ ಗಾಂಧಿ ಭೇಟಿ ನೀಡಲಿದ್ದಾರೆ. ಈ ನಂತರ ಅಧಿಕೃತ ಘೋಷಣೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಚುನಾವಣೆಯಲ್ಲಿ ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗುವುದು, ಬಹುತೇಕ ಹಾಲಿ ಶಾಸಕರಿಗೆ ಟಿಕೆಟ್ ಘೋಷಣೆ ಮಾಡಲಿದ್ದಾರೆ ಎನ್ನಲಾಗಿದೆ.

First List of Congress Candidates on March 17, Here is Candidates probable list

ಹಾಗಾದರೇ ಯಾರಿಗೆ ಟಿಕೆಟ್ ಸಿಗಬಹುದು ಎಂಬ ಬಗ್ಗೆ ಈಗಾಗಲೇ ಭಾರೀ ಚರ್ಚೆ ನಡೆಯುತ್ತಿದೆ. ಸಿದ್ದರಾಮಯ್ಯ ಬಣ ಮತ್ತು ಡಿ.ಕೆ.ಶಿವಕುಮಾರ್ ಬಣ ಎಂಬ ಎರಡು ಗುಂಪುಗಳು ತಮ್ಮದೇ ಆದ ಒತ್ತಡ ಹಾಕುತ್ತಿವೆ. ಗೆಲ್ಲುವ ಅಭ್ಯರ್ಥಿಗೆ ಟಿಕೆಟ್ ನೀಡಬೇಕಿರುವುದು ಮುಖ್ಯ ಮಾನದಂಡ ಎಂದು ಹೇಳಲಾಗುತ್ತಿದೆ. ಟಿಕೆಟ್ ಆಕಾಂಕ್ಷಿ ಅಭ್ಯರ್ಥಿಗಳು ಹೆಚ್ಚಿದ್ದು, ಶುಕ್ರವಾರ ಪಟ್ಟಿ ಬಿಡುಗಡೆಯಾದ ಮೇಲೆ ಎಲ್ಲಕೂ ಉತ್ತರ ಸಿಗಲಿದೆ.

*ಸಂಭವನೀಯ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ*

ಯಾವ ಯಾವ ಕ್ಷೇತ್ರಗಳಿಗೆ ಒಂದು ಹೆಸರು ಎನ್ನುವುದು ನೋಡುವುದಾದರೇ,

* ಕೋಲಾರ - ಸಿದ್ದರಾಮಯ್ಯ

* ಕಡೂರು - ವೈಎಸ್‌ವಿ ದತ್ತ

* ಹೊಸಕೋಟೆ - ಶರತ್ ಬಚ್ಚೇಗೌಡ

* ಗೋಕಾಕ್ - ಅಶೋಕ್ ಪೂಜಾರಿ

*ಹುನಗುಂದ - ವಿಜಯಾನಂದ ಕಾಶಪ್ಪನವರ್

* ಮುದ್ದೇಬಿಹಾಳ - ಸಿ.ಎಸ್ ನಾಡಗೌಡ

* ಕನಕಗಿರಿ - ಶಿವರಾಜ್ ತಂಗಡಗಿ

* ರಾಯಚೂರು - ಎನ್.ಎಸ್ ಬೋಸರಾಜ್

* ಯಲಬುರ್ಗಾ - ಬಸವರಾಜ್ ರಾಯರೆಡ್ಡಿ

* ಕಾರವಾರ - ಸತೀಶ್ ಸೈಲ್

* ಹಾನಗಲ್ - ಶ್ರೀನಿವಾಸ್ ಮಾನೆ

*ಭಟ್ಕಳ - ಮಂಕಾಳ ವೈದ್ಯ

* ಬೈಂದೂರು - ಗೋಪಾಲ್ ಪೂಜಾರಿ

* ಕಾಪು - ವಿನಯ್ ಕುಮಾರ್ ಸೊರಕೆ

* ಬಸವನಗುಡಿ - ಯುಬಿ ವೆಂಕಟೇಶ್

* ಸೊರಬ - ಮಧು ಬಂಗಾರಪ್ಪ,

* ಚಿತ್ರದುರ್ಗ - ವೀರೇಂದ್ರ ಪಪ್ಪಿ

* ಹಿರಿಯೂರು -ಸುಧಾಕರ್

* ವಿರಾಜಪೇಟೆ - ಪೊನ್ನಣ್ಣ

*ಮಾಗಡಿ - ಬಾಲಕೃಷ್ಣ

*ಹಿರೇಕೆರೂರು - ಯುಬಿ ಬಣಕಾರ್

*ವಿರಾಜಪೇಟೆ - ಪೊನ್ನಣ್ಣ

*ರಾಮನಗರ - ಇಕ್ಬಾಲ್ ಹುಸೇನ್

*ಚಿಂತಾಮಣಿ - ಎಂಸಿ ಸುಧಾಕರ್

* ಚಿಕ್ಕಬಳ್ಳಾಪುರ - ಕೊತ್ತೂರ್ ಮಂಜುನಾಥ್

* ನಿಪ್ಪಾಣಿ - ಕಾಕಾಸಾಹೇಬ್ ಪಾಟೀಲ್

* ಟಿ. ನರಸಿಪುರ - ಸುನಿಲ್ ಬೋಸ್

* ಹುಕ್ಕೇರಿ - ಎ.ಬಿ ಪಾಟೀಲ್

* ನಂಜನಗೂಡು - ದರ್ಶನ ದ್ರುವನಾರಾಯಣ್

First List of Congress Candidates on March 17, Here is Candidates probable list

ಇನ್ನು, ಒಂದೇ ಕ್ಷೇತ್ರಕ್ಕೆ ಎರಡೇರಡು ಹೆಸರುಗಳು ಇರುವ ಸಂಭವನೀಯ ಅಭ್ಯರ್ಥಿಗಳ ಪಟ್ಟಿ*

* ರಾಜಾಜಿನಗರ - ಪುಟ್ಟಣ್ಣ/ ಭವ್ಯ ನರಸಿಂಹಮೂರ್ತಿ

* ಬಳ್ಳಾರಿ ಸಿಟಿ - ಅಲ್ಲಂ ಪ್ರಶಾಂತ್ / ಅನಿಲ್ ಲಾಡ್

* ಮಂಗಳೂರು ದಕ್ಷಿಣ - ಐವಾನ್ ಡಿಸೋಜಾ / ಜೆ ಆರ್ ಲೋಬೋ

* ಚಾಮುಂಡೇಶ್ವರಿ - ಮರಿಗೌಡ / ಚಂದ್ರಶೇಖರ್

* ಬೆಳ್ತಂಗಡಿ - ರಕ್ಷಿತ್ / ಶಿವರಾಂ

* ಬೆಂಗಳೂರು ದಕ್ಷಿಣ - ಆರ್ ಕೆ ರಮೇಶ್ / ಸುಷ್ಮಾ ರಾಜಗೋಪಾಲ್

* ಪಾವಗಡ - ವೆಂಕಟರಮಣಪ್ಪ / ಶಾಸಕ ಎಚ್.ವಿ ವೆಂಕಟೇಶ್

* ದಾಸರಹಳ್ಳಿ- ಕೃಷ್ಣಮೂರ್ತಿ / ಸಿ.ಎಂ ಧನಂಜಯ

* ಗಂಗಾವತಿ - ಇಕ್ಬಾಲ್ ಅನ್ಸಾರಿ / ಎಚ್.ಆರ್ ಶ್ರೀನಾಥ್

* ಕಲಘಟಗಿ - ಸಂತೋಷ್ ಲಾಡ್ / ನಾಗರಾಜ್ ಚಬ್ಬಿ

* ಶಿಗ್ಗಾಂವಿ - ಅಜಂಪೀರ್ ಖಾದ್ರಿ/ ಸೋಮಣ್ಣ ಬೇವಿನಮರದ

* ಬಾಗಲಕೋಟ - ಎಚ್ ವೈ ಮೇಟಿ / ದೇವರಾಜ್ ಪಾಟೀಲ್

* ಹೊಳಲ್ಕೆರೆ - ಸವಿತಾ ರಘು / ಆಂಜನೇಯ

* ತೀರ್ಥಹಳ್ಳಿ - ಕಿಮ್ಮನೆ ರತ್ನಾಕರ್ / ಮಂಜುನಾಥ್ ಗೌಡ

* ಕಲಬುರಗಿ ಗ್ರಾಮೀಣ - ರೇವುನಾಯಕ ಬೆಳಮಗಿ / ವಿಜಯಕುಮಾರ್

* ಲಿಂಗಸುಗೂರು - ಡಿ‌ಎಸ್ ಹೂಲಗೇರಿ / ರುದ್ರಯ್ಯ

* ಬೆಳಗಾವಿ ಉತ್ತರ - ಫೀರೋಜ್ ಸೇಠ್ / ಆಸೀಫ್ ಸೇಠ್

* ತೇರದಾಳ್ - ಉಮಾಶ್ರೀ / ಮಲ್ಲೇಶಪ್ಪ

*ದೊಡ್ಡಬಳ್ಳಾಪುರ - ವೆಂಕಟರಮಣಯ್ಯ / ಶಾಸಕ ಬಿಸಿ ಆನಂದ್

* ಬೆಳಗಾವಿ ಉತ್ತರ - ಫೀರೋಜ್ ಸೇಠ್ / ಆಸೀಫ್ ಸೇಠ್

*ಕುಂದಗೋಳ - ಕುಸುಮಾ ಶಿವಳ್ಳಿ/ ಶಾಸಕಿ ಚಂದ್ರಶೇಖರ್ ಜತ್ತಲ್

* ಕುಡಚಿ - ಶ್ಯಾಮ್ ಭೀಮ್ ಘಾಟ್ಗೆ / ಮಹೇಂದ್ರ ತಮ್ಮಣ್ಣ

* ಕಾಗವಾಡ - ರಾಜೂ ಕಾಗೆ / ದಿಗ್ವಿಜಯ್ ದೇಸಾಯಿ

* ಅಥಣಿ - ಗಜಾನನ್ ಮಂಗಸೂಳಿ / ಶ್ರೀಕಾಂತ್ ಪೂಜಾರಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+