ಬಾಗಲಕೋಟೆ : ಬೆಂಕಿ ಉಗುಳುತ್ತಿದೆ ಕೊಳವೆ ಬಾವಿ!

Posted By:
Subscribe to Oneindia Kannada

ಬಾಗಲಕೋಟೆ, ಡಿಸೆಂಬರ್ 28 : ಮುಧೋಳ ತಾಲೂಕಿನಲ್ಲಿ ಕೊಳವೆ ಬಾವಿಯೊಂದು ಮೂರು ದಿನದಿಂದ ಬೆಂಕಿ ಉಗುಳುತ್ತಿದ್ದು, ಗ್ರಾಮಸ್ಥರ ಅಚ್ಚರಿಗೆ ಕಾರಣವಾಗಿದೆ. ಜಿಲ್ಲಾಧಿಕಾರಿಗಳು ಮತ್ತು ಭೂಗರ್ಭ ಶಾಸ್ತ್ರಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮುಧೋಳ ತಾಲೂಕಿನ ಕುಳಲಿ ರಸ್ತೆಯ ಭೀಮಪ್ಪ ಗೋಲಬಾವಿ ಅವರ ಜಮೀನಿನಲ್ಲಿರುವ ಕೊಳವೆ ಬಾವಿಯಲ್ಲಿ ಬೆಂಕಿ ಬರುತ್ತಿದೆ. ಕಳೆದ ಮೂರು ವರ್ಷಗಳ ಹಿಂದೆ ಈ ಕೊಳವೆ ಬಾವಿ ಕೊರೆಸಲಾಗಿತ್ತು. 400 ಅಡಿ ಆಳದ ಬಾವಿಯಲ್ಲಿ ನೀರು ಬರುತ್ತಿತ್ತು. ಆದರೆ, ಕಳೆದ 3 ದಿನಗಳಿಂದ ಬಾವಿಯಿಂದ ಬೆಂಕಿ ಉತ್ಪತ್ತಿಯಾಗುತ್ತಿದೆ. [ಕೊಳವೆ ಬಾವಿಯಿಂದ ಬಿಸಿನೀರು : ಏನಿದರ ರಹಸ್ಯ?]

bagalkot

ಈ ಕೊಳವೆ ಬಾವಿಯ ಅಕ್ಕಪಕ್ಕದ ಹೊಲಗಳಲ್ಲಿ ಕಬ್ಬು, ಈರುಳ್ಳಿ, ಜೋಳ ಹೀಗೆ ಹಲವು ವಾಣಿಜ್ಯ ಬೆಳೆಗಳನ್ನು ಬೆಳೆಯಲಾಗಿದೆ. ಕೊಳವೆ ಬಾವಿಯ ಬೆಂಕಿ ಫಲಸನ್ನು ನಾಶ ಮಾಡಲಿದೆಯೇ? ಎಂದು ರೈತರು ಆತಂಕಗೊಂಡಿದ್ದಾರೆ. [ಬಾವಿ ಕೊರೆತ : ಸುಪ್ರೀಂಕೋರ್ಟ್ ಮಾರ್ಗದರ್ಶಿ ಸೂತ್ರಗಳು]

ಬೆಂಕಿ ಉಗುಳುತ್ತಿರುವ ಕೊಳವೆ ಬಾವಿಯಲ್ಲಿ ರೈತರು ಅನ್ನ ಬೇಯಿಸುತ್ತಿದ್ದಾರೆ. ಜೋಳವನ್ನು ಸುಡುತ್ತಿದ್ದಾರೆ. ಈ ಬೆಂಕಿಯಲ್ಲಿ ರಾಸಾಯನಿಕ ವಸ್ತು ಇರುವ ಸಾಧ್ಯತೆ ಇದ್ದು, ಆಹಾರ ಪದಾರ್ಥಗಳನ್ನು ಬೇಯಿಸಬೇಡಿ ಎಂದು ತಜ್ಞರು ಜನರಿಗೆ ಸಲಹೆ ನೀಡಿದ್ದಾರೆ.

borewell

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Sudden fire emanating from bore-well located at Mudhol, Bagalkot district created panic among the local farmers. The bore-well was dug about three years ago.
Please Wait while comments are loading...