ಯುಗಾದಿಗೆ ಮುನ್ನ ಕೋಡಿಮಠದ ಶ್ರೀಗಳು ನುಡಿದ ಭವಿಷ್ಯ ನಿಜವಾಯಿತೇ?

Posted By:
Subscribe to Oneindia Kannada

ತಾಳೇಗರಿ ಮೂಲಕ ಭವಿಷ್ಯ ನುಡಿಯುವ ಅರಸೀಕೆರೆ ಕೋಡಿಮಠ ಸಂಸ್ಥಾನದ ಶ್ರೀಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು, ಯುಗಾದಿ ಹಬ್ಬಕ್ಕೆ ಒಂದು ದಿನದ ಹಿಂದೆ ನುಡಿದಿದ್ದ ಭವಿಷ್ಯದ ಸತ್ಯಾಸತ್ಯತೆ ಈಗ ಚರ್ಚೆಯ ವಿಷಯವಾಗಿದೆ.

ಯುಗಾದಿಯ ಮುನ್ನಾದಿನ ಅರಸೀಕೆರೆಯಲ್ಲಿ ಮಾತನಾಡುತ್ತಿದ್ದ ಶ್ರೀಗಳು, ದಕ್ಷಿಣದ ರಾಜ್ಯವೊಂದರಲ್ಲಿ ಭಾರೀ ಅಗ್ನಿ ಅನಾಹುತ ಸಂಭವಿಸಿ ಸಾಕಷ್ಟು ಹಾನಿಯಾಗಲಿದೆ ಎಂದು ಭವಿಷ್ಯ ನುಡಿದಿದ್ದರು. (ಕಣ್ಣು ಕಾಣದ ಅಜ್ಜಿ ಹೇಳಿದ ಭವಿಷ್ಯ ಸುಳ್ಳಾಗಿದ್ದೇ ಇಲ್ಲ)

ಮಕರ ಸಂಕ್ರಾತಿಯ ನಂತರ ಕೋಲಾರದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಶ್ರೀಗಳು, ಕೋಲಾರ ಸೇರಿದಂತೆ ರಾಜ್ಯದಲ್ಲಿ ನೀರಿನ ಸಮಸ್ಯೆ ಗಂಭೀರವಾಗಲಿದೆ ಎಂದು ಕಾರ್ಣಿಕ ನುಡಿದಿದ್ದರು.

ಮಾರ್ಚ್ ಮಧ್ಯಭಾಗದಲ್ಲೇ ಆರಂಭವಾದ ಬಿರುಬಿಸಿಲು, ನೀರಿನ ಸಮಸ್ಯೆ, ಕೇರಳದ ಕೊಲ್ಲಂನಲ್ಲಿನ ದೇವಾಲಯದ ಆವರಣದಲ್ಲಿ ಭಾನುವಾರ (ಏ 10) ಸಂಭವಿಸಿದ ಅಗ್ನಿದುರಂತದ ನಂತರ ಶ್ರೀಗಳ ಭವಿಷ್ಯದ ಬಗ್ಗೆ ಜನರ ಕುತೂಹಲ ಇನ್ನಷ್ಟು ಹೆಚ್ಚಾದರೆ ಆಶ್ಚರ್ಯ ಪಡಬೇಕಾಗಿಲ್ಲ. (ಮೋದಿ ಬಗ್ಗೆ ನಾಸ್ಟ್ರಡಾಮಸ್ ನುಡಿದಿದ್ದ ಭವಿಷ್ಯ)

ಶತಮಾನದ ಇತಿಹಾಸವಿರುವ ಪಕ್ಷಕ್ಕೆ ಮಹಿಳೆಯಿಂದ ಉಜ್ವಲ ಭವಿಷ್ಯ, ಮೋದಿ ಒಬ್ಬ ಸಜ್ಜನ ರಾಜಕಾರಣಿ ಎಂದು ಶ್ರೀಗಳು ಯುಗಾದಿಯ ಮುನ್ನಾದಿನ ಭವಿಷ್ಯ ನುಡಿದಿದ್ದಾರೆ, ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..

ನೀರಿನ ಸಮಸ್ಯೆ

ನೀರಿನ ಸಮಸ್ಯೆ

ಕೋಲಾರದ ವಕ್ಕಲೇರಿಯಲ್ಲಿ ಆಂಜನೇಯನ ದೇವಸ್ಥಾನ ಉದ್ಘಾಟಿಸಿ ಮಾತನಾಡುತ್ತಿದ್ದ ಕೋಡಿ ಶ್ರೀಗಳು, ಜಿಲ್ಲೆಗೆ ಎತ್ತಿನಹೊಳೆ ನೀರು ಬರಲು ಇನ್ನೂ ಎರಡು ವರ್ಷ ಕಾಯುವುದು ಅನಿವಾರ್ಯವಾಗಲಿದೆ, ರಾಜ್ಯದಲ್ಲಿ ನೀರಿನ ಸಮಸ್ಯೆ ಗಂಭೀರವಾಗಲಿದೆ ಎಂದು ಭವಿಷ್ಯ ನುಡಿದಿದ್ದರು.

ಮೋದಿಗೆ ತೊಂದರೆ, ಆದರೂ ನೋ ಪ್ರಾಬ್ಲಂ

ಮೋದಿಗೆ ತೊಂದರೆ, ಆದರೂ ನೋ ಪ್ರಾಬ್ಲಂ

ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಕಷ್ಟದ ದಿನ ಎದುರಾಗಲಿದೆ. ಆದರೆ ಅವರೊಬ್ಬ ಸಜ್ಜನ ರಾಜಕಾರಣಿ ಮತ್ತು ಧರ್ಮದಿಂದ ನಡೆದುಕೊಳ್ಳುತ್ತಿರುವುದರಿಂದ ಎದುರಾಗುವ ಯಾವುದೇ ತೊಂದರೆ ಎದುರಿಸುವ ಶಕ್ತಿ ಅವರಿಗಿದೆ.

ನಮ್ಮ ಸಿಎಂಗೂ ತೊಂದರೆಯಿಲ್ಲ

ನಮ್ಮ ಸಿಎಂಗೂ ತೊಂದರೆಯಿಲ್ಲ

ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೂ ಸಾಕಷ್ಟು ತೊಂದರೆ ಎದುರಾಗಲಿದೆ. ಆದರೆ ಹಾಲು ಮತಸ್ಥ ಸಮುದಾಯಕ್ಕೆ ಭಗವಂತನ ಕೃಪೆ ಇರುವುದರಿಂದ ಸಿಎಂ ಎದುರಾಗುವ ಎಲ್ಲಾ ಸಮಸ್ಯೆಯಿಂದ ಹೊರಬರಲಿದ್ದಾರೆಂದು ಕೋಡಿ ಶ್ರೀಗಳು ಭವಿಷ್ಯ ನುಡಿದಿದ್ದಾರೆ.

ಯುಗಾದಿಗೆ ಮುನ್ನ ನುಡಿದಿದ್ದ ಭವಿಷ್ಯ

ಯುಗಾದಿಗೆ ಮುನ್ನ ನುಡಿದಿದ್ದ ಭವಿಷ್ಯ

ಯುಗಾದಿಯ ಮುನ್ನಾ ದಿನ ನುಡಿದಿದ್ದ ಭವಿಷ್ಯದಲ್ಲಿ ಕೋಡಿ ಶ್ರೀಗಳು, ದೇಶದಲ್ಲಿ ಅದರಲ್ಲೂ ಪ್ರಮುಖವಾಗಿ ದಕ್ಷಿಣದ ಭಾಗದಲ್ಲಿ ಅಗ್ನಿ ಅವಘಡ ಹೆಚ್ಚಾಗಲಿದೆ. ಜನರು ಸಾಕಷ್ಟು ತೊಂದರೆ ಎದುರಿಸಬೇಕಾಗುತ್ತದೆ ಎಂದು ಹೇಳಿದ್ದರು.

ಪ್ರಿಯಾಂಕ ಗಾಂಧಿ

ಪ್ರಿಯಾಂಕ ಗಾಂಧಿ

ಶತಮಾನದ ಇತಿಹಾಸವಿರುವ ಪಕ್ಷವೊಂದಕ್ಕೆ ಮಧ್ಯ ವಯಸ್ಸಿನ ಮಹಿಳೆಯಿಂದ ರಾಜಕೀಯ ಭಲ ಹೆಚ್ಚಾಗಲಿದೆ. ಪಕ್ಷಕ್ಕೆ ಇವರು ಹೊಸ ಶಕ್ತಿಯಾಗಲಿದ್ದಾರೆಂದು ಕೋಡಿ ಶ್ರೀಗಳು, ಪ್ರಿಯಾಂಕ ಗಾಂಧಿ ವಾದ್ರಾ ಅವರನ್ನು ಉಲ್ಲೇಖಿಸಿ ಮೂರ್ನಾಲ್ಕು ದಿನದ ಹಿಂದೆ ಭವಿಷ್ಯ ನುಡಿದಿದ್ದರು.

ಉಗ್ರರ ಉಪಟಳ

ಉಗ್ರರ ಉಪಟಳ

ಭರತಖಂಡಕ್ಕೆ ಉಗ್ರಗಾಮಿಗಳ ಉಪಟಳ ತಪ್ಪಿದ್ದಲ್ಲ, ಸರಕಾರದ ಎಷ್ಟೇ ಕಟ್ಟುನಿಟ್ಟಿನ ಕ್ರಮದ ನಡುವೆಯೂ ದೇಶಕ್ಕೆ ಉಗ್ರರಿಂದ ಗಂಢಾಂತರ ಮುಂದಿನ ದಿನಗಳಲ್ಲಿದೆ ಎಂದು ಕೋಡಿಮಠದ ಶ್ರೀಗಳು ಸಂಕ್ರಾತಿಯ ನಂತರ ಎಚ್ಚರಿಕೆ ನೀಡಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Sri Shivananda Shivayogi Rajendra Seer of Kodimath in Arasikere (Hassan district) prediction: Major fire accident will occur in country.
Please Wait while comments are loading...