ಧರ್ಮಸ್ಥಳ ಸೌಜನ್ಯ ಬಗ್ಗೆ ವಿಡಿಯೋ ಮಾಡಿದ್ದ ಯೂಟ್ಯೂಬರ್ ಸಮೀರ್ ಮೇಲೆ ಎಫ್‌ಐಆರ್!
ರಾಜ್ಯದಲ್ಲಿ ಕಳೆದ ಒಂದು ವಾರದಿಂದ ಸಂಚಲನ ಮೂಡಿಸಿರುವ ಸೌಜನ್ಯ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ದಶಕಗಳಿಗೂ ಹಿಂದಿನ ಪ್ರಕರಣವಾಗಿರುವ ಧರ್ಮಸ್ಥಳದ ವಿದ್ಯಾರ್ಥಿನಿ ಸೌಜನ್ಯ ಅವರ ಕೊಲೆ ಮತ್ತು ಸಾಮೂಹಿಕ ಅತ್ಯಾಚಾರದ ಪ್ರಕರಣದ ವಿಚಾರ ಈಚೆಗೆ ಚರ್ಚೆಯ ಮುನ್ನೆಲೆಗೆ ಬಂದಿದ್ದು. ಸೌಜನ್ಯ ಅವರ ರೇಪ್ ಅಂಡ್ ಮರ್ಡರ್ ಕೇಸ್‌ಗೆ ಸಂಬಂಧಿಸಿದಂತೆ ಯೂಟ್ಯೂಬರ್ ಸಮೀರ್ ಎಂಡಿ ಎನ್ನುವವರು ಸುದೀರ್ಘ ವಿಡಿಯೋವೊಂದನ್ನು ಮಾಡಿದ್ದರು. ಇದೀಗ ಸಮೀರ್ ಅವರ ವಿರುದ್ಧ ಬಳ್ಳಾರಿ ಜಿಲ್ಲೆಯ ಕೌಲ್‌ಬಝಾರ್ ಪೊಲೀಸ್ ಠಾಣೆಯ ಪೊಲೀಸರು ಇದೀಗ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡಿದ್ದಾರೆ. ಇದೀಗ ಈ ವಿಷಯ ಭಾರೀ ಚರ್ಚೆಗೆ ಕಾರಣವಾಗಿದೆ.
ಸಮೀರ್ ಅವರ ವಿಡಿಯೋವನ್ನು ಒಂದು ಕೋಟಿಗೂ ಹೆಚ್ಚು ಜನ ನೋಡಿದ್ದು. ಇದೀಗ ಆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ಮೇಲೆ ಧಾರ್ಮಿಕ ಭಾವನೆ, ಸಾರ್ವಜನಿಕರ ಧಾರ್ಮಿಕ ಭಾವನೆಗೆ ಧಕ್ಕೆ ಆಗುವ ರೀತಿಯಲ್ಲಿ ವಿಡಿಯೋ ಮಾಡಿರುವ ಆರೋಪ ಕೇಳಿ ಬಂದಿದ್ದು. ಈ ಅಂಶಗಳನ್ನು ಸಮೀರ್ ವಿರುದ್ಧ ದಾಖಲಿಸಲಾಗಿರುವ ಎಫ್‌ಐಆರ್‌ನಲ್ಲಿ ಉಲ್ಲೇಖ ಮಾಡಲಾಗಿದೆ.

ಇನ್ನು ಬುಧವಾರ ರಾತ್ರಿ ಅಷ್ಟೇ ಸಮೀರ್ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ಈ ವಿಚಾರ ಭಾರೀ ಚರ್ಚೆಗೆ ಕಾರಣವಾಗಿದೆ. ಸಮೀರ್ ಅವರು ಧರ್ಮಸ್ಥಳದ ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದೀರ್ಘ ವಿಡಿಯೋವೊಂದನ್ನು ಮಾಡಿದ್ದರು. ಇದರ ಬೆನ್ನಲ್ಲೇ ಅವರಿಗೆ ಜೀವ ಬೆದರಿಕೆ ಕರೆಗಳು ಬರುತ್ತಿವೆ ಎಂದು ಹೇಳಲಾಗಿತ್ತು. ಅವರ ವಿಡಿಯೋವನ್ನು ಇದೀಗ ಬರೋಬ್ಬರಿ 1 ಕೋಟಿಗೂ ಹೆಚ್ಚು ಜನ ವೀಕ್ಷಣೆ ಮಾಡಿದ್ದಾರೆ.
ತಡರಾತ್ರಿ ನೋಟಿಸ್ ನೀಡಿದ್ದಕ್ಕೆ ವಿರೋಧ: ಧರ್ಮಸ್ಥಳದ ವಿದ್ಯಾರ್ಥಿನಿ ಸೌಜನ್ಯ ರೇಪ್ ಅಂಡ್ ಮರ್ಡರ್ ಕೇಸ್‌ನ ಬಗ್ಗೆ ಯೂಟ್ಯೂಬರ್ ಸಮೀರ್ ಮಾಡಿದ್ದ ವೀಡಿಯೋ ಕರ್ನಾಟಕದಾದ್ಯಂತ ಭಾರೀ ಸಂಚಲನವನ್ನೇ ಸೃಷ್ಟಿ ಮಾಡಿದೆ. ಈ ವಿಡಿಯೋ ವೈರಲ್ ಆದ ಮೇಲೆ ಅವರಿಗೆ ಸಾಕಷ್ಟು ಜೀವ ಬೆದರಿಕೆ ಕರೆಗಳು ಬಂದಿದ್ದವು ಎಂದು ಹೇಳಲಾಗಿತ್ತು.
ಈ ರೀತಿ ಕರೆಗಳು ಬಂದ ಮೇಲೆ ಅವರು ಯೂಟ್ಯೂಬ್‌ನಲ್ಲಿ ಆ ವಿಡಿಯೋವನ್ನು ಅನ್‌ಲಿಸ್ಟ್ ಮಾಡಿದ್ದರು ಎನ್ನಲಾಗಿದೆ. ಈ ನಡುವೆ ಅವರಿಗೆ ಬುಧವಾರ ತಡರಾತ್ರಿ ನೋಟಿಸ್ ಜಾರಿ ಮಾಡಲಾಗಿದ್ದು. ಪೊಲೀಸರು ಬಂಧಿಸುವುದಕ್ಕೆ ಮುಂದಾಗಿದ್ದರು ಎನ್ನಲಾಗಿದೆ.
ಆದರೆ ಸಮೀರ್ ಅವರು ವಿಚಾರಣೆಗೆ ಸಹಕರಿಸುವುದಾಗಿ ಒಪ್ಪಿಕೊಂಡ ಮೇಲೆ ಪೊಲೀಸರು ಹಿಂದಿರುಗಿದ್ದಾರೆ ಎಂದು ಹೇಳಲಾಗಿದೆ. ಈ ಬಗ್ಗೆ ಲೈವ್‌ನಲ್ಲಿ ಸಮೀರ್ ಅವರು ಮಾಹಿತಿ ಹಂಚಿಕೊಂಡಿದ್ದರು. ಬುಧವಾರ ತಡರಾತ್ರಿ 10.45 ವೇಳೆಗೆ ಪೊಲೀಸರಿಂದ ನೋಟಿಸ್ ಬಂದಿದ್ದಾಗಿ ಅವರು ಹೇಳಿಕೊಂಡಿದ್ದಾರೆ.
ಅಲ್ಲದೆ ಮುಂದುವರಿದು ನನಗೆ ಯಾವುದೇ ಭಯವಿಲ್ಲ. ಸೌಜನ್ಯ ಪ್ರಕರಣದ ಬಗ್ಗೆ ಮಾಡಿರುವ ವೀಡಿಯೋಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಇರಿಸಿಕೊಂಡೇ ವಿಡಿಯೋ ಮಾಡಿದ್ದೇನೆ ಎಂದು ಅವರು ಹೇಳಿದ್ದಾರೆ. ಆದರೆ, ಈ ವಿಚಾರದ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಸರ್ಕಾರದ ಕ್ರಮವನ್ನು ಹಲವರು ಪ್ರಶ್ನೆ ಮಾಡುತ್ತಿದ್ದಾರೆ.
ಸಮೀರ್ ವೈಯಕ್ತಿಕ ಮಾಹಿತಿ ಬಹಿರಂಗ: ಇನ್ನು ಇದೇ ಸಂದರ್ಭದಲ್ಲಿ ಸಮೀರ್ ಅವರ ವೈಯಕ್ತಿಕ ಮಾಹಿತಿಗಳು ಬಹಿರಂಗವಾಗಿರುವುದು ಸಹ ಭಾರೀ ಚರ್ಚೆಗೆ ಕಾರಣವಾಗಿದೆ. ಯೂಟ್ಯೂಬ್‌ನಲ್ಲಿ ಒಂದು ಕೋಟಿ ವಿಮ್ಸ್ ಬರುತ್ತಿದ್ದಂತೆಯೇ ನನ್ನ ವಿಳಾಸ, ಮೊಬೈಲ್ ಸಂಖ್ಯೆ ಸೇರಿದಂತೆ ಹಲವು ವೈಯಕ್ತಿಕ ಮಾಹಿತಿಗಳನ್ನು ಸೋರಿಕೆ ಮಾಡಲಾಗಿದೆ ಎಂದು ಸಮೀರ್ ಅವರೇ ದೂರಿದ್ದಾರೆ.












Click it and Unblock the Notifications