FIR Against V Somanna: ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ವಿರುದ್ಧ ಎಫ್‌ಐಆರ್‌ ದಾಖಲು

ಬೆಂಗಳೂರು, ಏಪ್ರಿಲ್ 28: ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿಗೆ ನಾಮಪತ್ರ ಹಿಂಪಡೆಯುವಂತೆ ಆಮಿಷ ಒಡ್ಡಿದ್ದರು ಎಂಬ ಆರೋಪದ ಮೇರೆಗೆ ಬಿಜೆಪಿ ಅಭ್ಯರ್ಥಿ ವಿ.ಸೊಮಣ್ಣ ಅವರ ವಿರುದ್ಧ ಎಐಆರ್ ದಾಖಲಾಗಿದೆ.

ಚಾಮರಾಜನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ವಿ. ಸೋಮಣ್ಣನವರು ತಮ್ಮ ಪ್ರತಿಸ್ಪರ್ಧಿ ಜೆಡಿಎಸ್ ಅಭ್ಯಥಿ ಮಲ್ಲಿಕಾರ್ಜುನ ಸ್ವಾಮಿ (ಆಲೂರು ಮಲ್ಲು) ಅವರಿಗೆ ನಾಮಪತ್ರ ಹಿಂಪಡೆಯುವಂತೆ ಒತ್ತಾಯಿಸಿ ಆಮಿಷ ಒಡ್ಡಿದ್ದರು ಎನ್ನಲಾಗಿದೆ. ಈ ಆಮಿಷ ಒಡ್ಡಿದ ಮತ್ತು ನಾಮಪತ್ರ ಹಿಂಪಡೆಯುವಂತೆ ನಡೆದ ಮಾತುಕತೆಯ ಆಡಿಯೋವೊಂದು ಎಲ್ಲೆಡೆ ವೈರಲ್ ಆಗಿತ್ತು.

FIR Against V Somanna For Ordering JDS Candidate to withdraw his Nomination

ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿ. ಸೋಮಣ್ಣ ಸೇರಿದಂತೆ ಒಟ್ಟು ಮೂವರ ವಿರುದ್ಧ ಚಾಮರಾಜನಗರ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.

ಎಫ್‌ಐಆರ್‌ನಲ್ಲಿ 'ಅಪರಿಚಿತ' ಎಂದು ಉಲ್ಲೇಖ

ನಾಮಪತ್ರ ವಾಪಸ್‌ಗೆ ಆಮಿಷ ಒಡ್ಡಿದ ಆಡಿಯೋ ಸಂಬಂಧ ಎಫ್‌ಐಆರ್‌ ದಾಖಲಾದ ಮೂವರ ಪೈಕಿ ಇಬ್ಬರು ಹೆಸರು ಮಾತ್ರ ತಿಳಿದು ಬಂದಿದೆ. ಅದರ ಸೋಮಣ್ಣ ಅವರಿಗೆ ಸಂಬಂಧಿಸಿದ ವಿವರಗಳು ನಮೂದಾಗಿಲ್ಲ ಎನ್ನಲಾಗಿದೆ. ಸೋಮಣ್ಣನವರ ಹೆಸರಿನ ಬದಲಿಗೆ ಅಪರಿಚಿತ (ಅನ್ನೌನ್) ಎಂದು ಬರೆಯಲಾಗಿದೆ.

ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡಿದ್ದ ಆಡಿಯೋದಲ್ಲಿ ಸುದೀಪ್ ಮತ್ತು ನಟರಾಜು ಎಂಬುವವರ ಹೆಸರು ಕೇಳಿ ಬಂದಿತ್ತು. ತನಿಖೆ ಬೆನ್ನತ್ತಿದ ಪೊಲೀಸರು ಈ ಇಬ್ಬರು ವಿರುದ್ಧವೂ ಎಫ್‌ಐಆರ್ ದಾಖಲಿಸಿದ್ದಾರೆ ಎಂದು. ಪ್ರಕರಣದ ಆಡಿಯೋ ಹರಿದಾಡುತ್ತಿದ್ದಂತೆ ಎಚ್ಚೆತ್ತ ಚುನಾವಣಾ ಫ್ಲೈಯಿಂಗ್‌ ಸ್ಕಾಡ್‌ನ ಮ್ಯಾಜಿಸ್ಟ್ರೇಟ್‌ ಡಾ.ಬಿ.ಆರ್‌.ಜಯಣ್ಣ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

FIR Against V Somanna For Ordering JDS Candidate to withdraw his Nomination

ದೂರಿನ ಮೇರೆಗೆ ಕಾರ್ಯಪ್ರವೃತ್ತರಾದ ಚಾಮರಾಜನಗರ ಪಟ್ಟಣ ಠಾಣೆ ಪೊಲೀಸರು ತನಿಖೆ ಮಾಡಿ, ಎಫ್‌ಐಆರ್ ದಾಖಲಿಸಿದ್ದಾರೆ. ಅದರಲ್ಲಿ ವಿ ಸೋಮಣ್ಣ ಅವರನ್ನು ಮೊದಲ ಆರೋಪಿ ಎಂದು ಉಲ್ಲೇಖಿಸಲಾಗಿದೆ, ನಟರಾಜು ಅವರು ಎರಡನೇ ಮತ್ತು ಸುದೀಪ್‌ ಮೂರನೇ ಆರೋಪಿಯನ್ನಾಗಿ ಮಾಡಲಾಗಿದೆ. ಆಡಿಯೋದಲ್ಲಿ ವಿ ಸೋಮಣ್ಣನವರ ಧ್ವನಿ ಇದೆ ಎಂದು ವಿಪಕ್ಷಗಳು ಕಿಡಿ ಕಾರಿದ್ದವು.

ವೈರಲ್ ಆದ ಆಡಿಯೋದಲ್ಲಿ ಏನಿದೇ?

ಮಲ್ಲಿಕಾರ್ಜುನಸ್ವಾಮಿ (ಆಲೂರು ಮಲ್ಲು) ಚಾಮರಾಜನಗರ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಕಣಕ್ಕಿಳಿದಿದ್ದಾರೆ. ಅವರಿಗೆ ಬಿಜೆಪಿಯಿಂದ ಪ್ರತಿಸ್ಪರ್ಧಿಯಾಗಿರುವ ವಿ ಸೋಮಣ್ಣ ಕರೆ ಮಾಡಿ ಮಾತನಾಡಿದ್ದಾರೆ. ನಾಮಪತ್ರ ವಾಪಸ್ ಪಡೆಯುವಂತೆ ಆಮಿಷ ಒಡ್ಡಿದ್ದಾರೆ ಮಾತುಗಳು ಇರುವ ಆಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.

'ನಮ್ಮ ಸರ್ಕಾರದ ಬರುತ್ತದೆ ಗೂಟದ ಕಾರು ಕೊಡುತ್ತೇವೆ, ಮೊದಲು ನೀನು ನಾಮಪತ್ರ ವಾಪಾಸ್ ತೆಗೆದುಕೋ, ಆಮೇಲೆ ಕೂತ ಎಲ್ಲವನ್ನು ಮಾತನಾಡೋಣ. ಯಾರೋ ತೊಟ್ಟಿ ನನ್ನ ಮಗನ ಮಾತು ಕೇಳಿ ಚುನಾವಣೆ ನಿಂತಿದ್ದೀಯಾ' ಎಂಬ ಆಡಿಯೊ ತುಣುಕು ಎಲ್ಲೆಡೆ ಹರಿದಾಡುತ್ತಿದೆ.

ನಾಮಪತ್ರ ವಾಪಸ್ ಪಡೆಯುವ (ಏ.20) ದಿನದಂದು, ಬಿಜೆಪಿ ಅಭ್ಯರ್ಥಿ ಸೋಮಣ್ಣ ಅವರು ಜೆಡಿಎಸ್ ನ ಮಲ್ಲಿಕಾರ್ಜುನ ಸ್ವಾಮಿ ಅವರಿಗೆ ಕರೆ ಮಾಡಿ ನಾಮಪತ್ರ ವಾಪಸ್ ಪಡೆಯುವಂತೆ ಸೂಚಿಸಿದ್ದರು ಎನ್ನಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಜೆಡಿಎಸ್ ಅಭ್ಯರ್ಥಿ ತನಗೆ ಸೋಮಣ್ಣನವರು ಕರೆ ಮಾಡಿದ್ದರು ಎಂದಷ್ಟೇ ಖಚಿತ ಪಡಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+