ಎಸಿಬಿ ದಾಳಿಗೆ ಹೆದರಿ ಲಕ್ಷ ಲಕ್ಷ ನೋಟು ಹರಿದು ಕಮೋಡ್ ನಲ್ಲಿ ಹಾಕಿದ ಅಧಿಕಾರಿ

Posted By:
Subscribe to Oneindia Kannada

ಗಂಗಾವತಿ, ಮಾ 10: ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ದಾಳಿಯ ಮುನ್ಸೂಚನೆ ಅರಿತ ನೀರಾವರಿ ಇಲಾಖೆ ಅಧಿಕಾರಿಯೊಬ್ಬರು ಲಕ್ಷ ಲಕ್ಷ ರೂಪಾಯಿ ನೋಟನ್ನು ಹರಿದು ಕಮೋಡ್ ನಲ್ಲಿ ಹಾಕಿದ ಘಟನೆ ಗಂಗಾವತಿಯಲ್ಲಿ ನಡೆದಿದೆ.

ಬೆಂಗಳೂರು, ಉಡುಪಿ, ಕಡೂರು, ಕೋಲಾರ, ಗಂಗಾವತಿ ಸೇರಿದಂತೆ ರಾಜ್ಯದ ವಿವಿಧ 36ಸ್ಥಳಗಳಲ್ಲಿ ಎಸಿಬಿ ಬೆಳ್ಳಂಬೆಳಗ್ಗೇ ದಾಳಿ ನಡೆಸಿತ್ತು. ಕೊಪ್ಪಳ ಜಿಲ್ಲಾ ಕುಡಿಯುವ ನೀರು ಮತ್ತು ನೈರ್ಮಲ್ಯ ಎಂಜಿನಿಯರಿಂಗ್ ವಿಭಾಗದ ಅಧಿಕಾರಿ ವಿಜಯ್ ಕುಮಾರ್ ಅವರ ಮನೆಯ ಮೇಲೂ ಎಸಿಬಿ ದಾಳಿ ನಡೆಸಿತ್ತು.

ಉಡುಪಿಯಲ್ಲಿ ಅಬಕಾರಿ ಡಿವೈಎಸ್ಪಿ ಮನೆ ಸೇರಿ 5 ಕಡೆ ಎಸಿಬಿ ದಾಳಿ

ದಾಳಿಯಾಗುವ ಸಾಧ್ಯತೆಯನ್ನು ಅರಿತ ಈ ಅಧಿಕಾರಿ ಐದು ಲಕ್ಷ ರೂಪಾಯಿ ನಗದು ಹಣವನ್ನು ಹರಿದುಹಾಕಿ ಕಮೋಡಿಗೆ ಹಾಕಿದ್ದಾರೆ. ಈ ವಿಚಾರ ಎಸಿಬಿ ಅಧಿಕಾರಿಗಳ ಗಮನಕ್ಕೆ ಬಂದಿದೆ, ಕೂಡಲೇ ತಪಾಸಣೆ ಆರಂಭಿಸಿದ ಅಧಿಕಾರಿಗಳು ಒಳಚರಂಡಿ ಕನೆಕ್ಷನ್ ಬಂದ್ ಮಾಡಿಸಿದ್ದಾರೆ.

Fear of ACB attack, officer in Gangavathi teared lacs of notes and put into commode

ಶುಕ್ರವಾರ (ಮಾ 9) ರಾಜ್ಯದ ವಿವಿದೆಡೆ ನಡೆದ ದಾಳಿಯ ವೇಳೆ, ಅಧಿಕಾರಿಗಳಿಂದ ಭಾರೀ ಮೊತ್ತದ ಹಣ, ಅಕ್ರಮ ಆಸ್ತಿಪತ್ರಗಳು ಲಭ್ಯವಾಗಿವೆ ಎನ್ನುವ ಮಾಹಿತಿಯಿದೆ. ದಾಳಿ ನಡೆದ ಎಲ್ಲಾ ಕಡೆ ಆದಾಯಕ್ಕಿಂತ ಹೆಚ್ಚು ಅಗಾಧ ಪ್ರಮಾಣದಲ್ಲಿ ಆಸ್ತಿ, ನಗದು ಪತ್ತೆಯಾಗಿದೆ.

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಅಕ್ರಮ ಆಸ್ತಿ ಗಳಿಕೆ ದೂರಿನ ಮೇಲೆ ಮಂಗಳೂರಿನ ಡಿವೈಎಸ್ಪಿ ವಿನೋದ್, ಉಡುಪಿಯಲ್ಲಿರುವ ಅಬಕಾರಿ ಉಪ ಅಧೀಕ್ಷಕ ವಿನೋದ್ ಕಚೇರಿ ಮೇಲೂ ಎಸಿಬಿ ದಾಳಿ ನಡೆಸಿತ್ತು.

ಭ್ರಷ್ಟ ಅಧಿಕಾರಿಗಳಿಗೆ ಎಸಿಬಿ ಶಾಕ್, ರಾಜ್ಯದ 36 ಕಡೆ ದಾಳಿ

ಕೋಲಾರದ ಮುಳಬಾಗಲು ವ್ಯಾಪ್ತಿಯ ಗ್ರಾಮೀಣ ನೈರ್ಮಲ್ಯ ಮತ್ತು ಕುಡಿಯುವ ನೀರು ಇಲಾಖೆ ಎಇಇ ಅಪ್ಪಿರೆಡ್ಡಿ, ಬೆಳಗಾವಿಯಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ವಿಶೇಷ ಭೂ ಸ್ವಾಧೀನ ಅಧಿಕಾರಿ ರಾಜೇಶ್ವರಿ ಜೈನಾಪುರ, ಕೊಪ್ಪಳದ ಜಿಲ್ಲಾ ಪಂಚಾಯಿತಿ ಕಚೇರಿ ಎಇಇ ವಿಜಯ್ ಕುಮಾರ್.

ಕಡೂರು ತಾಲ್ಲೂಕು ಕೃಷಿ ಇಲಾಖೆ ನಿರ್ದೇಶಕ ಶಿವಕುಮಾರ್,ಚಿಕ್ಕಮಗಳೂರಿನ ಆರ್.ಟಿ.ಓ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ವೀರೂಪಾಕ್ಷ ಕೆ.ಸಿ ಮುಂತಾದವರ ಮನೆ ಮತ್ತು ಕಚೇರಿಯ ಮೇಲೆ ಎಸಿಬಿ ಶುಕ್ರವಾರ ದಾಳಿ ನಡೆಸಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
ACB attack on 38 different places across Karnataka on Friday (Mar 9). Fear of attack, a officer in Gangavathi (Koppal district) teared 5Lacs rupee notes and put into commode.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ