ಕರ್ನಾಟಕದಲ್ಲಿ ಮತ್ತೊಬ್ಬ ಸರ್ಕಾರಿ ಅಧಿಕಾರಿ ಆತ್ಮ*ತ್ಯೆ : ಸಚಿವರ ಆಪ್ತರ ಹೆಸರು ಉಲ್ಲೇಖ..

ಬೆಳಗಾವಿ, ನವೆಂಬರ್ 05: ಕರ್ನಾಟಕ ರಾಜ್ಯದಲ್ಲಿ ಮತ್ತೊಬ್ಬ ಅಧಿಕಾರಿಯ ಸಾವಾಗಿದೆ. ಈ ವ್ಯಕ್ತಿಯು ತಹಶಿಲ್ದಾರ ಕಚೇರಿಯಲ್ಲಿ ಕೆಲಸ ಮಾಡಿದ್ದ ಅಧಿಕಾರಿಯಾಗಿದ್ದು, ತಮ್ಮ ಸಾವಿಗೆ ಸಚಿವೆಯೊಬ್ಬರ ಆಪ್ತರ ಹೆಸರು ಉಲ್ಲೇಖಿಸಿ ಸಾವಿಗೆ ಶರಣಾಗಿದ್ದಾರೆ. ಕಚೇರಿಯಲ್ಲಿ ಭಾರೀ ಅನ್ಯಾಯ ನಡೆಯುತ್ತಿದೆ ಎಂದು ಸಂದೇಶದಲ್ಲಿ ಉಲ್ಲೇಖಿಸಿ ಎಸ್‌ಡಿಎ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಗಡಿ ಜಿಲ್ಲೆ ಬೆಳಗಾವಿಯಲ್ಲಿ ನಡೆದಿದೆ.

ವಾಲ್ಮೀಕಿ ನಿಗಮದ ಹಗರಣದಲ್ಲಿ ಶಿವಮೊಗ್ಗದಲ್ಲಿ ಸರ್ಕಾರಿ ನೌಕರ ಚಂದ್ರಶೇಖರ್ ಎಂಬುವವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಆ ಕರಾಳ ನೆನಪು ಮಾಸುವ ಮುನ್ನವೇ ಬೆಳಗಾವಿಯಲ್ಲಿ ತಹಶೀಲ್ದಾರ್ ಕಚೇರಿಯ ಸರ್ಕಾರಿ ನೌಕರ ಎಫ್‌ಡಿಸಿ ರುದ್ರಣ್ಣ ಯಡವಣ್ಣನವರು ಅವರು ನೇಣಿಗೆ ಕೊರಳೊಡ್ಡಿದ್ದಾರೆ. ಈ ವೇಳೆ ಅವರು ತಮ್ಮ ಸಾವಿಗೆ ಪ್ರಭಾವಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆಪ್ತರೊಬ್ಬರ ಹೆಸರು ಉಲ್ಲೇಖಿಸಿ ಜೀವ ಕಳೆದುಕೊಂಡಿದ್ದಾರೆ ಎಂದು ವರದಿ ಆಗಿದೆ.

FDC Officer Lost His life in Belagavi Tahsildar Office For This reason

ವಿಪರ್ಯಾಸವೆಂದರೆ ಈ ಅಧಿಕಾರಿಯು ತಾನು ಮಾಡುವ ಬೆಳಗಾವಿ ತಹಶೀಲ್ದಾರ್ ಕಚೇರಿಯಲ್ಲಿಯೇ ನೇಣು ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ. ಬಸವರಾಜ ನಾಗರಾಳ ಅವರು ಇಲ್ಲಿನ ತಹಶೀಲ್ದಾರ ಆಗಿದ್ದಾರೆ. ಪ್ರಕರಣವು ಇಲ್ಲಿನ ಖಡೇಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದೆ. ಪೊಲೀಸರ ತನಿಖೆ ಕೈಗೊಂಡಿದ್ದಾರೆ.

ಹಿರಿಯ ಅಧಿಕಾರಿಗಳ ಕಿರುಕುಳ ಆರೋಪ, ನೌಕರ ಆತ್ಮಹತ್ಯೆ

ಹಿರಿಯ ಅಧಿಕಾರಿಗಳು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ರುದ್ರೇಶ್ ಯಡಣ್ಣನವರ್ ಸೋಮವಾರ ತಡರಾತ್ರಿ ದುಡುಕಿನ ನಿರ್ಧಾರ ಮಾಡಿದ್ದಾರೆ. ಜೀವ ಕಳೆದುಕೊಂಡಿದ್ದಾರೆ. ಪ್ರಕರಣ ಮಂಗಳವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಮೃತ ನೌಕರ ಆತ್ಮಹತ್ಯೆಯ ಮುಂಚೆ ವಿಡಿಯೋ ರೆಕಾರ್ಡ್ ಮಾಡಿದ್ದ, ಆ ವಿಡಿಯೋ ಅನ್ನು ಪೊಲೀಸರ ಪರಿಶೀಲಿಸುತ್ತಿದ್ದಾರೆ.

FDC Officer Lost His life in Belagavi Tahsildar Office For This reason

ಸ್ಥಳಕ್ಕೆ ಖಡೇಬಜಾರ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪ್ರಕರಣ ದಾಖಲಾಗಿದೆ. ಅವರ ಪತ್ನಿಯೂ ಸರ್ಕಾರಿ ನೌಕರರು ಎನ್ನಲಾಗಿದೆ. ಬೆಳಗಾವಿ ತಹಶೀಲ್ದಾರ್ ಕಚೇರಿಯಿಂದ ಸವದತ್ತಿ ಯಲ್ಲಮ್ಮನ ದೇವಸ್ಥಾನ ಕಚೇರಿಗೆ ವರ್ಗಾವಣೆ ಮಾಡಿರುವುದಕ್ಕೆ ಬೇಸರಗೊಂಡಿದ್ದ ಎನ್ನಲಾಗಿದೆ.

ಈ ಕುರಿತು ಸಂದೇಶದಲ್ಲಿ ಬರೆದುಕೊಂಡಿರುವ ಮೃತ ಅಧಿಕಾರಿಯು, ಕಚೇರಿಯಲ್ಲಿ ಭಾರೀ ಅನ್ಯಾಯ ನಡೆಯುತ್ತಿದೆ. ನನಗೆ ಹಿರಿಯ ಅಧಿಕಾರಿಗಳು ಕಿರುಕುಳ ನೀಡಿದ್ದಾರೆ ಎಂದು ಸಚಿವೆ ಲಕ್ಮೀ ಹೆಬ್ಬಾಳ್ಕರ್ ಆಪ್ತರಾದ ಸೋಮು ದೊಡದವಾದ ಅವರ ಹೆಸರು ಬರೆದಿದ್ದಾರೆ. ಎಲ್ಲರೂ ಒಟ್ಟಾಗಿ ಹೋರಾಡಿ ಎಂದು ಮೆಸೇಜ್ ಮೂಲಕ‌ ಮನವಿ ಮಾಡಿದ್ದು, ನಂತರ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.

ಸಂದೇಶ್, ವಿಡಿಯೋ, ಡೆಟ್‌ನೋಟ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಪ್ರಕರಣದ ತನಿಖೆ ಕೈಗೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+