ಅನ್ನಭಾಗ್ಯ ಅಕ್ಕಿಗೆ ಕೇಂದ್ರ ಸರ್ಕಾರ ಕೊಕ್ಕೆ ಎಂದ ಸಿದ್ದರಾಮಯ್ಯ ಆರೋಪಕ್ಕೆ FCI ತಿರುಗೇಟು
ಕೇಂದ್ರದ ಒಪ್ಪಿಗೆ ಆಧಾರದಲ್ಲಿ ಜುಲೈ 1ರಿಂದ 10 ಕೆಜಿ ಅಕ್ಕಿ ಕೊಡುತ್ತೇವೆ ಎಂದಿದ್ದೆವು. ಇದಾದ ಬಳಿಕ ಕೇಂದ್ರ ಸರ್ಕಾರ ರಾಜಕೀಯ ನಿರ್ಧಾರ ತೆಗೆದುಕೊಂಡಿದೆ ಎಂದು ಸಿದ್ದರಾಮಯ್ಯ ಆರೋಪಕ್ಕೆ ಭಾರತೀಯ ಆಹಾರ ನಿಗಮ (FCI) ಪರೋಕ್ಷವಾಗಿ ತಿರುಗೇಟು ನೀಡಿದೆ.
ಬುಧವಾರ ಕೇಂದ್ರ ಸರ್ಕಾರದ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದು, ಭಾರತೀಯ ಆಹಾರ ನಿಗಮ ನೀಡಿದ ಪ್ರಕಟಣೆಯಲ್ಲಿ ತಾರ್ಕಿಕವಾಗಿ ಸಿದ್ದರಾಮಯ್ಯ ಅವರು ಮಾಡಿದ ಆರೋಪವನ್ನು ಅಲ್ಲಗೆಳೆದಿದೆ.

ಅಕ್ಕಿ ಮತ್ತು ಗೋಧಿ ಬೆಲೆ ನಿಯಂತ್ರಣದಲ್ಲಿಡಲು ಕೇಂದ್ರ ಸರ್ಕಾರವು ಒಎಂಎಸ್ಎಸ್ ಮೂಲಕ ಅವುಗಳನ್ನು ಮಾರಾಟ ಮಾಡಲಿದೆ. ಹೀಗೆ ಮಾರಾಟವಾದ ಸ್ಟಾಕ್ಗಳು ಸಾರ್ವಜನಿಕರಿಗೆ ವೇಗವಾಗಿ ತಲುಪಲು ಸಾಧ್ಯವಾಗಲಿದೆ. 2023-24ರ ಹಣಕಾಸು ವರ್ಷದ ಮೊದಲ ಹರಾಜು ಜೂನ್ 28 ರಂದು ನಡೆಯಲಿದೆ ಎಂದು ಎಫ್ಸಿಐ ಹೇಳಿದೆ.
15 ವರ್ಷಗಳಲ್ಲಿ ಮೊದಲ ಬಾರಿ ಏರುತ್ತಿರುವ ಗೋಧಿ ಬೆಲೆ ನಿಯಂತ್ರಿಸಲು ಮಾರ್ಚ್ 24, 2024ರ ವರೆಗೆ ದಾಸ್ತಾನು ಮಿತಿ ವಿಧಿಸಿದೆ. ಮುಕ್ತ ಮಾರುಕಟ್ಟೆ ಒಎಂಎಸ್ಎಸ್ ಅಡಿಯಲ್ಲಿ ಮೊದಲ ಹಂತದಲ್ಲಿ ಕೇಂದ್ರ ಬೃಹತ್ ಗ್ರಾಹಕರು ಮತ್ತು ವ್ಯಾಪಾರಿಗಳಿಗೆ 1.5 ಮಿಲಿಯನ್ ಟನ್ ಗೋಧಿ ಮಾರಾಟ ಮಾಡಲು ನಿರ್ಧರಿಸಿದೆ.
ಗೋಧಿಯ ಹೊರತಾಗಿ ಅಕ್ಕಿ ಮಾರಾಟ ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಗೋದಿ ಹಾಗೂ ಅಕ್ಕಿ ದಾನ್ಯಗಳ ಬೆಲೆ ಏರಿಕೆ ಸಮತೋಲನ ಕಾಪಾಡಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪತ್ರಿಕಾ ಪ್ರಕಟಣೆ ಹೊರಡಿಸಿದೆ.
ಸರ್ಕಾರದ ಎಲ್ಲಾ ಪ್ರಯತ್ನಗಳ ಹೊರತಾಗಿಯೂ ಬೆಲೆಗಳು ನಿಯಂತ್ರಣ ಬಾರದ ಹಿನ್ನೆಲೆ ಬೆಲೆ ನಿಯಂತ್ರಿಸಲು ಮುಕ್ತ ಮಾರುಕಟ್ಟೆ ಮೂಲಕ ಅಕ್ಕಿ ಮತ್ತು ಗೋಧಿಯನ್ನು ಮಾರಾಟ ಮಾಡಲು ನಿರ್ಧರಿಸಿದೆ. ಸಗಟು ಮತ್ತು ಚಿಲ್ಲರೆ ಬೆಲೆಗಳು ಅಷ್ಟಾಗಿ ಏರಿಕೆಯಾಗದಿದ್ದರೂ ಸರ್ಕಾರ ಗೋಧಿ ಮೇಲೆ ದಾಸ್ತಾನು ಮಿತಿಯನ್ನು ವಿಧಿಸಿದೆ.
2024ರ ಮಾರ್ಚ್ 24 ರವರೆಗೆ ಸಗಟು ವ್ಯಾಪಾರಿಗಳು, ಸಣ್ಣ ವ್ಯಾಪಾರಿಗಳು, ಚಿಲ್ಲರೆ ವ್ಯಾಪಾರಿಗಳು ಮಾರಾಟಗಾರರ ಮೇಲೆ ಈ ದಾಸ್ತಾನು ಮಿತಿ ಅನ್ವಯಿಸಲಿದೆ. ಮಾರುಕಟ್ಟೆಯಲ್ಲಿ ಗೋಧಿಯ ಕೃತಕ ಸೆಳೆತಯವನ್ನು ಕಡಿಮೆ ಮಾಡುವುದು ಕೂಡ ಸರ್ಕಾರದ ಉದ್ದೇಶವಾಗಿದೆ ಎಂದು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದೆ.
ಈ ಭಾರಿ OMSSD ಹರಾಜಿನಲ್ಲಿ ಏಕಕಾಲದಲ್ಲಿ 10-100 ಮೆಟ್ರಿಕ್ ಟನ್ ಗಳಷ್ಟು ಅಕ್ಕಿ/ಗೋದಿ ಹರಾಜಿನ ಮೂಲಕ ಖರೀದಿಸಬಹುದು. ಈ ಹಿಂದೆ ಹರಾಜಿನಲ್ಲಿ ಗರಿಷ್ಟ 3000 ಮೆಟ್ರಿಕ್ ಟನ್ ದಾನ್ಯಗಳನ್ನ ಖರೀದಿಗೆ ಅವಕಾಶ ಇತ್ತು. ಸಣ್ಣ ಹಾಗೂ ಮಧ್ಯಮ ಖರೀದಿದಾರರು ಹೆಚ್ಚು ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಹಾಗೂ ಈ ಯೋಜನೆಯ (OMSSD) ಹೆಚ್ಚು ಜನರನ್ನ ತಲುಪಲು ಸಾಧ್ಯವಾಗಲಿದೆ, ಜೊತೆಗೆ ಖರೀದಿ ಮಾಡಿದ ದಾನ್ಯಗಳು ಕೂಡಲೇ ಜನರಿಗೆ ತಲುಪಲು ಸಾಧ್ಯವಾಗಲಿದೆ ಎಂದು ಹೇಳಿದೆ.












Click it and Unblock the Notifications