ನಾಲ್ವರಿಗೆ ಮರುಜೀವ ಕೊಟ್ಟ ಭಟ್ಕಳದ ಯುವಕ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಉಡುಪಿ, ಮಾರ್ಚ್ 23 : ಅಪಘಾತದಲ್ಲಿ ಗಾಯಗೊಂಡು ಮೆದುಳು ನಿಷ್ಕ್ರಿಯಗೊಂಡ ಯುವಕನ ಅಂಗಾಂಗಗಳನ್ನು ದಾನ ಮಾಡಲಾಗಿದೆ. ಮಣಿಪಾಲದ ಕೆಎಂಸಿ ಆಸ್ಪತ್ರೆಯಿಂದ ಬೆಂಗಳೂರಿನ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ಅಂಗಾಂಗ ಸಾಗಣೆ ಮಾಡಲಾಗಿದೆ.

ಮಂಗಳವಾರ ಸಂಜೆ 7.30ರ ಸುಮಾರಿಗೆ ಮಣಿಪಾಲದ ಕೆಎಂಸಿ ಆಸ್ಪತ್ರೆಯಿಂದ ಅಂಗಾಂಗಗಳನ್ನು ಹೊತ್ತ ಅಂಬ್ಯುಲೆನ್ಸ್‌ ಗ್ರೀನ್ ಕಾರಿಡಾರ್ ವ್ಯವಸ್ಥೆ ಮೂಲಕ ಸಿಗ್ನಲ್ ಫ್ರೀ ಮಾರ್ಗದಲ್ಲಿ ಮಂಗಳೂರು ಬಜ್ಪೆ ವಿಮಾನ ನಿಲ್ದಾಣ ತಲುಪಿತು. [8 ಜನರ ಬದುಕಿಗೆ ಆಶಾಕಿರಣವಾದ ಬೆಂಗಳೂರು ಯುವಕ]

purushottam naik

ಮಂಗಳೂರಿನಿಂದ ಜೆಟ್ ಏರ್ ವೇಸ್ ವಿಮಾನದ ಮೂಲಕ ಬೆಂಗಳೂರಿಗೆ ಅಂಗಾಗಳನ್ನು ಸಾಗಿಸಲಾಯಿತು. ಬೆಂಗಳೂರಿನ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಗೆ ಅಂಗಾಂಗಗಳನ್ನು ಕಸಿ ಮಾಡಲಾಗಿದೆ. [ಅಂಗಾಂಗ ದಾನ ಮಾಡಿ ನಾಲ್ವರಿಗೆ ಮರು ಜೀವ ನೀಡಿದರು]

30 ವರ್ಷದ ಪುರುಷೋತ್ತಮ್ ನಾಯಕ್ ಅವರ ಎರಡು ಕಿಡ್ನಿ, ಲೀವರ್ ಮತ್ತು ಹೃದಯ ಕವಾಟಗಳನ್ನು ಕುಟುಂಬದವರು ದಾನ ಮಾಡಿದ್ದಾರೆ. ಲೀವರ್ ಮತ್ತು ಹೃದಯ ಕವಾಟಗಳನ್ನು ಬೆಂಗಳೂರಿಗೆ ಸಾಗಿಸಲಾಗಿದ್ದು, ಕಿಡ್ನಿಗಳನ್ನು ಕೆಎಂಸಿ ಮತ್ತು ಮಂಗಳೂರಿನ ಮತ್ತೊಂದು ಆಸ್ಪತ್ರೆಯಲ್ಲಿನ ಇಬ್ಬರು ವ್ಯಕ್ತಿಗಳಿಗೆ ಕಸಿ ಮಾಡಲಾಗಿದೆ. [ಅಪಘಾತದಲ್ಲಿ ಮಡಿದ ಜೀವನ್ ಫರ್ನಾಂಡೀಸ್ ಆತ್ಮ ಅಮರ]

ಮಾರ್ಚ್ 14ರಂದು ಅಪಘಾತ : ಪುರುಷೋತ್ತಮ್ ನಾಯಕ್ ಮೂಲತಃ ಭಟ್ಕಳದವರು. ಮಾರ್ಚ್ 14ರಂದು ರಾತ್ರಿ 8.30ರ ಸುಮಾರಿಗೆ ಬೈಕ್‌ನಲ್ಲಿ ಮನೆಗೆ ವಾಪಸ್ ಆಗುತ್ತಿದ್ದಾಗ, ಗೂಡ್ಸ್ ಆಟೋ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದರು.

ಚಿಕಿತ್ಸೆಗಾಗಿ ಅವರನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆಸ್ಪತ್ರೆಯಲ್ಲಿ ಅವರು ಕೋಮಾ ಸ್ಥಿತಿಗೆ ಜಾರಿದ್ದರು. ಮಾರ್ಚ್ 21ರಂದು ಅವರ ಮೆದುಳು ನಿಷ್ಕ್ರಿಯಗೊಂಡಿದೆ ಎಂದು ವೈದ್ಯರು ಘೋಷಿಸಿದರು. ಅಂಗಾಂಗಳನ್ನು ದಾನ ಮಾಡುವಂತೆ ಕುಟುಂಬದವರಿಗೆ ಮನವಿ ಮಾಡಿದ್ದರು.

ವೈದ್ಯರ ಮನವಿಯಂತೆ ಕುಟುಂಬದವರು ಎರಡು ಕಿಡ್ನಿ, ಲಿವರ್, ಹೃದಯ ಕವಾಟಗಳನ್ನು ದಾನ ಮಾಡಿದ್ದಾರೆ. ಕಣ್ಣುಗಳನ್ನು ದಾನ ಮಾಡಲು ಕುಟುಂಬದವರು ಸಿದ್ಧವಾಗಿದ್ದರು. ಆದರೆ, ಅಪಘಾತದಲ್ಲಿ ಕಣ್ಣಿಗೆ ಗಾಯಗಳಾಗಿದ್ದರಿಂದ ದಾನ ಮಾಡಲು ಸಾಧ್ಯವಾಗಲಿಲ್ಲ.

ಉಡುಪಿ ಜಿಲ್ಲಾಧಿಕಾರಿ ಆರ್.ವಿಶಾಲ್ ಅವರು ಅಂಗಾಂಗಗಳನ್ನು ದಾನ ಮಾಡಿ ಹಿನ್ನೆಲೆಯಲ್ಲಿ ಆಸ್ಪತ್ರೆಯ ಬಿಲ್‌ನಲ್ಲಿ ರಿಯಾಯಿತಿ ನೀಡುವಂತೆ ಮನವಿ ಮಾಡಿದ್ದರು. ಪುರುಷೋತ್ತಮ್ ಅವರ ಚಿಕಿತ್ಸೆಗೆ 1 ಲಕ್ಷ ರೂ. ವೆಚ್ಚವಾಗಿತ್ತು. ಕುಟುಂಬದವರು 38 ಸಾವಿರ ರೂ. ಪಾವತಿ ಮಾಡಿದ್ದರು. ಉಳಿದ ಮೊತ್ತವನ್ನು ಪಾವತಿ ಮಾಡುವುದು ಬೇಡ ಎಂದು ಆಸ್ಪತ್ರೆ ಕುಟುಂಬದವರಿಗೆ ತಿಳಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Family of a brain-dead youth who met with an accident recently donated his organs. The donor Purushottam Naik (30) met with an accident on March 14 and he admitted to KMC hospital in Manipal. He was declared brain-dead on March 21. On the doctors advice family members donated his liver, kidneys and heart valves. Green corridor created from Manipal to Mangaluru airport for the purpose of transporting the organs to Bengaluru.
Please Wait while comments are loading...