ನಟಿ ರಮ್ಯಾ ಕುರಿತು ಸುಳ್ಳುಸುದ್ದಿ: ಆರೋಗ್ಯವಾಗಿದ್ದಾರೆ ಮೋಹಕತಾರೆ

ಬೆಂಗಳೂರು, ಸೆಪ್ಟೆಂಬರ್‌ 06: ಕನ್ನಡ ಚಿತ್ರರಂಗದ ಮೋಹಕತಾರೆ, ಮಾಜಿ ಸಂಸದೆ ರಮ್ಯಾ ಅವರ ಆರೋಗ್ಯದ ಕುರಿತು ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಈ ಸುದ್ದಿಗಳು ಬಹುತೇಕ ಸುಳ್ಳು ಎನ್ನಲಾಗುತ್ತಿದೆ. ಬಹುತೇಕರು ರಮ್ಯಾ ಆರೋಗ್ಯವಾಗಿದ್ದಾರೆ ಎನ್ನುವ ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ.

ಇಂದು ಬೆಳಗ್ಗೆ ಸುಮಾರು 12 ಗಂಟೆಯಿಂದ ಮೋಹಕತಾರೆ ರಮ್ಯಾ ಅವರ ಕುರಿತು ಅನೇಕರು ಸಂತಾಪ ಸೂಚಿಸಿ ಟ್ವೀಟ್‌ ಮಾಡಿದ್ದರು. ಇದರಿಂದ ಅವರ ಅಭಿಮಾನಿಗಳಲ್ಲಿ ಆತಂಕ ಹೆಚ್ಚಾಗಿತ್ತು. ಸದ್ಯ ರಮ್ಯಾ ಅವರು ಜಿನೆವಾದಲ್ಲಿ ಆರೋಗ್ಯವಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದ್ದು, ರಮ್ಯಾ ಆಪ್ತರು ಟ್ವೀಟ್‌ ಮೂಲಕ ಅವರೊಂದಿಗಿನ ಫೋಟೋ ಹಂಚಿಕೊಂಡಿದ್ದಾರೆ.

false-rumors-circulating-about-kannada-actress-ramya

ಇನ್ನು ತಮಿಳಿನ ಸೋಶಿಯಲ್‌ ಮಿಡಿಯಾಗಳಲ್ಲಿ ರಮ್ಯಾ ಅವರ ಬಗ್ಗೆ ನೂರೆಂಟು ಸುದ್ದಿಗಳು ಹರಿದಾಡಿತ್ತು. ಎಸ್‌ಎಸ್‌ ಮ್ಯೂಸಿಕ್‌, ಹಾಗೂ ಕೆಲವೊಂದು ಅಧಿಕೃತ ಟ್ವಿಟರ್‌ ಪೇಜ್‌ಗಳು ಕೂಡ ನಟಿ ರಮ್ಯಾ ಅವರ ಚಿತ್ರಗಳನ್ನು ಪೋಸ್ಟ್‌ ಮಾಡಿ ಸಂತಾಪ ಸೂಚಿಸಿದ್ದವು. ಇದರಿಂದ ಕನ್ನಡ ಚಿತ್ರರಂಗ ಸೇರಿದಂತೆ ಭಾರತೀಯ ಚಿತ್ರರಂಗದ ಅಪಾರ ಅಭಿಮಾನಿಗಳು ರಮ್ಯಾ ಅವರ ಆರೋಗ್ಯದ ಬಗ್ಗೆ ಆತಂಕಗೊಂಡಿದ್ದರು.

ಇನ್ನು ತಮಿಳಿನಲ್ಲಿ ರಮ್ಯಾ ಹೆಸರಿನ ಕಿರುತೆರೆ ನಟಿ ನಿಧನರಾಗಿದ್ದು, ಇದನ್ನು ಕನ್ನಡ ಚಿತ್ರರಂಗದ ನಟಿ ರಮ್ಯಾ ಎಂದು ತಪ್ಪಾಗಿ ಅರ್ಥೈಸಿಕೊಂಡು ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ಗಳನ್ನು ಹಾಕಲಾಗಿತ್ತು ಎನ್ನುವ ಮಾಹಿತಿ ಲಭ್ಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+