ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

3ಪಕ್ಷಗಳ ಅತೃಪ್ತಿಯ ಹೊಗೆಯ ನಡುವೆ, ಸದನದಲ್ಲೂ ಸಿದ್ದು ಮೇಲುಗೈ?

By Balaraj
|
Google Oneindia Kannada News

ಬೆಂಗಳೂರು, ಜುಲೈ 4: ಹತ್ತೊಂಬತ್ತು ದಿನಗಳ ಮಳೆಗಾಲದ ಅಸೆಂಬ್ಲಿ ಅಧಿವೇಶನ ಸೋಮವಾರದಿಂದ (ಜುಲೈ 4) ಆರಂಭವಾಗಲಿದೆ. ಮೂರೂ ಪಕ್ಷಗಳು ಒಡೆದ ಮನೆಯಂತಾಗಿರುವ ಹಿನ್ನಲೆಯಲ್ಲಿ ಭಿನ್ನಮತೀಯ ಮುಖಂಡರ ನಡೆ ಕುತೂಹಲಕ್ಕೆಡೆ ಮಾಡಿಕೊಟ್ಟಿದೆ.

ಭಿನ್ನಮತ ಎನ್ನುವುದು ಯಾರ ಪಕ್ಷದ ಸ್ವತ್ತು ಅಲ್ಲ ಅನ್ನುವ ಹಾಗೇ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಮುಖಂಡರ ವರ್ತನೆ ಮೂರೂ ಪಕ್ಷಕ್ಕೂ ನುಂಗಲಾರದ ತುತ್ತಂತಾಗಿದೆ. ಅದರಲ್ಲೂ ಪ್ರಮುಖವಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ಸಿಗೆ. (ಸಿಎಂ ಸಿದ್ದು ವಿಶ್ವಾಸದ್ರೋಹಿ, ಕೃತಜ್ಞತೆ ಇಲ್ಲ)

ಜುಲೈ 29ರವರೆಗೆ ನಡೆಯಲಿರುವ ಅಧಿವೇಶನದಲ್ಲಿ ಬಜೆಟಿಗೆ ಪೂರ್ಣ ಪ್ರಮಾಣದ ಅನುಮೋದನೆ ಪಡೆಯಬೇಕಾಗಿದೆ. ಜೊತೆಗೆ, ಕಾಗೋಡು ತಿಮ್ಮಪ್ಪ ಸಚಿವರಾದ ನಂತರ, ಸ್ಪೀಕರ್ ಹುದ್ದೆಗೂ ಚುನಾವಣೆ ನಡೆಯಲಿದೆ. ಹಿರಿಯ ಶಾಸಕ ಕೆ ಬಿ ಕೋಳಿವಾಡ ಸರ್ವಾನುಮತದಿಂದ ವಿಧಾನಸಭಾಧ್ಯಕ್ಷರಾಗಿ ಆಯ್ಕೆಯಾಗುವ ಸಾಧ್ಯತೆಯಿದೆ.

ಸರಕಾರದ ವೈಫಲ್ಯಗಳ ವಿರುದ್ದ ಹೋರಾಡ ಬೇಕಾಗಿರುವ ಬಿಜೆಪಿ ಮತ್ತು ಜೆಡಿಎಸ್ ನಲ್ಲಿ ಎಲ್ಲವೂ ಸರಿಯಿಲ್ಲದಿರುವುದರೇ ಸಿದ್ದರಾಮಯ್ಯ ಸರಕಾರಕ್ಕಿರುವ ಸ್ವಲ್ಪ ಮಟ್ಟಿನ ಸಮಾಧಾನದ ವಿಷಯವಾಗಿದ್ದರೂ, ಕಾಂಗ್ರೆಸ್ಸಿಗೆ ತಮ್ಮ ಪಕ್ಷದ ಮೂವರು ಅತೃಪ್ತ ಮುಖಂಡರ ನಡೆ ಹೇಗಿರುತ್ತದೆ ಎನ್ನುವುದೇ ಚಿಂತೆ.

ಇನ್ನೊಂದು ಪಕ್ಷದ ಅತೃಪ್ತಿಯ ಹೊಗೆಯನ್ನು ಬೊಟ್ಟು ಮಾಡಿ ತೋರಿಸುವ ಪರಿಸ್ಥಿತಿಯಲ್ಲಿ ಮೂರೂ ಪಕ್ಷಗಳಿಲ್ಲ. ಕೋಳಿವಾಡ ಆಯ್ಕೆ ಬಹುತೇಕ ಖಚಿತವಾಗಿದ್ದರೂ, ಕಾಂಗ್ರೆಸ್ ತಮ್ಮ ಪಕ್ಷದ ಶಾಸಕರಿಗೆ ವಿಪ್ ಜಾರಿ ಮಾಡಿದೆ. (ಏಕಾಂಗಿಯಾದ ಶ್ರೀನಿವಾಸ ಪ್ರಸಾದ್)

ಸದ್ಯದ ಮಟ್ಟಿಗೆ ಮೂರು ಪ್ರಮುಖ ಪಕ್ಷಗಳಲ್ಲಿ ತೀರಾ ಹದೆಗೆಟ್ಟ ಪರಿಸ್ಥಿತಿಯೆಂದರೆ ಅದು ಜೆಡಿಎಸ್ಸಿಗೆ. ಪಕ್ಷದ ಮುಖಂಡರ ಗೊತ್ತುಗುರಿಯಿಲ್ಲದ ಅಶಿಸ್ತು ಒಂದೆಡೆಯಾದರೆ, ಒಂದೆರಡು ವಾರ ನಾವಿಕನಿಲ್ಲದ ದೋಣಿಯಂತೆ ಸದನದಲ್ಲಿ ಭಾಗವಹಿಸಬೇಕಾಗಿದೆ. ಕೆಲವೊಂದು ಲೆಕ್ಕಾಚಾರ ಹೇಗಿರುತ್ತೆ, ಸ್ಲೈಡಿನಲ್ಲಿ ನೋಡಿ..

ಜೆಡಿಎಸ್

ಜೆಡಿಎಸ್

ಮಗನ ಚೊಚ್ಚಲ ಚಿತ್ರದ ಚಿತ್ರೀಕರಣದ ನಿಮಿತ್ತ ಫಾರಿನ್ ಕಂಟ್ರಿಯಲ್ಲಿ ಸದ್ಯ ಬ್ಯೂಸಿಯಾಗಿರುವ ಕುಮಾರಸ್ವಾಮಿ, ಬೆಂಗಳೂರಿಗೆ ಬರಲು ಇನ್ನೆರಡು ವಾರ ಆಗಲಿದೆ ಎನ್ನುವ ಸುದ್ದಿಯಿದೆ. ಜುಲೈ 18 ನಂತರ ಮಾತ್ರ ಎಚ್ಡಿಕೆ ಸದನದಲ್ಲಿ ಭಾಗವಹಿಸಲಿದ್ದಾರೆ. ಹಾಗಿದ್ದಲ್ಲಿ, ಪಕ್ಷವನ್ನು ಸದನದಲ್ಲಿ ಮುನ್ನಡೆಸುವವರು ಯಾರು? ಮೇಲ್ಪಂಕ್ತಿಯಲ್ಲಿ ಬರುವ ಹೆಸರು ರೇವಣ್ಣ, ಹಾಗಾದ್ದಲ್ಲಿ ಸಿಎಂಗೆ ಜೆಡಿಎಸ್ ನಿಂದ ರಿಲ್ಯಾಕ್ಸ್ ಎನ್ನಬಹುದು.

ಕ್ರಾಸ್ ವೋಟಿಂಗ್ ಮಾಡಿದ ಜೆಡಿಎಸ್ ಶಾಸಕರು

ಕ್ರಾಸ್ ವೋಟಿಂಗ್ ಮಾಡಿದ ಜೆಡಿಎಸ್ ಶಾಸಕರು

ಎಚ್ಡಿಕೆ ಇಲ್ಲ, ಹಾಸನಕ್ಕೆ ಸೀಮಿತವಾದ ರೇವಣ್ಣ, ಸಿಎಂಗೆ ರೇವಣ್ಣನ ಮೇಲೆ ಒಸಿ ಪ್ರೀತಿ ಜಾಸ್ತಿ, ವೈಎಸ್ವಿ ದತ್ತಾ ಮಾತು ಕೇಳುವವರಿಲ್ಲ, ತಮ್ಮ ಪಕ್ಷಕ್ಕಾಗಿಯೇ ಕ್ರಾಸ್ ವೋಟಿಂಗ್ ಮಾಡಿದ ಎಂಟು ಶಾಸಕರು.. ಹೀಗೆ ಜೆಡಿಎಸ್ಸಿನ ಹಿನ್ನಡೆಯ ಕಥೆ ಸಿದ್ದರಾಮಯ್ಯನವರಿಗೆ ಮೇಲುಗೈ ಸಾಧಿಸುವಲ್ಲಿನ ಪ್ರಮುಖ ಅಂಶಗಳು.

ಈಶ್ವರಪ್ಪ

ಈಶ್ವರಪ್ಪ

ಕೆಲವೊಮ್ಮೆ ಬೇಕಾಬಿಟ್ಟಿ, ಮತ್ತೊಮ್ಮೆ ಹರಿತವಾದ ಮಾತಿನಿಂದ ಸದಾ ರಾಜಕೀಯದಲ್ಲಿ ಅಸ್ತಿತ್ವದಲ್ಲಿರುವ ಪಕ್ಷದ ಮೇಲ್ಮನೆಯಲ್ಲಿ ಮುಖಂಡರಾಗಿರುವ ಈಶ್ವರಪ್ಪ , ಬಿಎಸ್ವೈ ವಿರುದ್ದ ದೆಹಲಿ ಮಟ್ಟಕ್ಕೆ ಹೋಗಿರುವುದು, ಶಿಸ್ತಿನ ಪಕ್ಷಕ್ಕಾದ ಹಿನ್ನಡೆಯಾದರೆ, ಸಿಎಂಗಾದ ಮುನ್ನಡೆ.

ರಾಂಪಾಲ್ ಭೇಟಿ ಮಾಡಿದ ಈಶ್ವರಪ್ಪ

ರಾಂಪಾಲ್ ಭೇಟಿ ಮಾಡಿದ ಈಶ್ವರಪ್ಪ

ಪಕ್ಷದ ನಿರ್ಣಾಯಕ ಸಭೆಯಲ್ಲಿ ಗೈರಾಗಿದ್ದ ಈಶ್ವರಪ್ಪ, ದೆಹಲಿಯಲ್ಲಿ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ರಾಂಪಾಲ್ ಅವರನ್ನು ಭೇಟಿ ಮಾಡಿ, ಬಿಎಸ್ವೈ ವಿರುದ್ದ ದೂರು ಸಲ್ಲಿಸಿದ್ದಾರೆ. ಶೋಭಾ ಕರಂದ್ಲಾಜೆ ಹಸ್ತಕ್ಷೇಪ ನಿಲ್ಲಬೇಕೆಂದು ಮನವಿ ಮಾಡಿದ್ದಾರೆ. ಈಶ್ವರಪ್ಪ ಮುನಿಸು, ಸಿದ್ದುಗೆ ಪ್ಲಸ್ ಪಾಯಿಂಟಾಗಿ ಪರಿಣಮಿಸುವ ಸಾಧ್ಯತೆ ಇಲ್ಲದಿಲ್ಲ.

ಇಬ್ಬರಿಗೆ ಸಚಿವ ಸ್ಥಾನ

ಇಬ್ಬರಿಗೆ ಸಚಿವ ಸ್ಥಾನ

ಸದನದ ಒಳಗೆ ಹೊರಗೆ ಪಕ್ಷಕ್ಕೆ ಮುಜುಗರ ತರುತ್ತಿದ್ದ ಕಾಗೋಡು ತಿಮ್ಮಪ್ಪ ಮತ್ತು ರಮೇಶ್ ಕುಮಾರ್ ಅವರಿಗೆ ಸಿಎಂ ಸಚಿವಸ್ಥಾನ ಭಾಗ್ಯ ಕರುಣಿಸಿರುವುದರಿಂದ ಈ ಇಬ್ಬರು ಮುಖಂಡರಿಂದ ಸಿದ್ದು ಸದ್ಯ ಬಚಾವ್. ತಮ್ಮ ಖಾತೆಯ ಬಗ್ಗೆ ಸದನದಲ್ಲಿ ಬರುವ ಪ್ರಶ್ನೆಗೆ ಉತ್ತರಿಸ ಬೇಕಾಗಿರುವುದರಿಂದ ಈ ಇಬ್ಬರು ಸಿದ್ದು ಸರಕಾರದ ಬೇರೆ ಖಾತೆಯ ತಂಟೆಗೆ ಹೋಗುವ ಸಾಧ್ಯತೆ ಇಲ್ಲವೇ ಇಲ್ಲ ಎನ್ನಬಹುದು.

ಮೂವರು ಕಾಂಗ್ರೆಸ್ಸಿನ ಅತೃಪ್ತರು

ಮೂವರು ಕಾಂಗ್ರೆಸ್ಸಿನ ಅತೃಪ್ತರು

ಶ್ರೀನಿವಾಸ್ ಪ್ರಸಾದ್, ಮಾಲಕರೆಡ್ಡಿ ಮತ್ತು ಅಂಬರೀಶ್ ಈ ಮೂವರನ್ನು ಸಿದ್ದು ಹೇಗೆ ಸಂಭಾಳಿಸುತ್ತಾರೆ ಎನ್ನುವುದು ಈ ಮುಂದುವರಿದ ಬಜೆಟ್ ಅಧಿವೇಶನದ ಪ್ರಮುಖಾಂಶ. ಅಂಬರೀಶ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೂ ಅದು ಇನ್ನೂ ಆಂಗೀಕಾರವಾಗಿಲ್ಲ. ಬಿ ಕೆ ಹರಿಪ್ರಸಾದ್ ಭೇಟಿಯ ನಂತರ ಅಂಬರೀಶ್ ಕೊಂಚ ತಣ್ಣಗಾಗಿರುವುದು ಪಕ್ಷಕ್ಕಾದ ಒಳ್ಳೆ ಬೆಳವಣಿಗೆ.

ಸಿದ್ದು ಎದುರಿಸಬೇಕಾಗಿರುವ ಪ್ರಮುಖ ಸವಾಲುಗಳು

ಸಿದ್ದು ಎದುರಿಸಬೇಕಾಗಿರುವ ಪ್ರಮುಖ ಸವಾಲುಗಳು

1. ಡಿವೈಎಸ್ಪಿ ಅನುಪಮಾ ಶೆಣೈ ರಾಜೀನಾಮೆ ತರಾತುರಿಯಲ್ಲಿ ಅಂಗೀಕರಿಸಿದ್ದು.
2. ಅಡಕೆ-ತೆಂಗು ಬೆಲೆ ಕುಸಿತ
3. ಮದ್ಯದ ಮತ್ತಿನಲ್ಲಿ ಪೊಲೀಸ್ ಅಧಿಕಾರಿಗಳು ಮಹಾದೇವಪ್ಪ ಪುತ್ರನನ್ನು ಹೊತ್ತಿದ್ದು, ಜೊತೆಗೆ ಅಕ್ರಮ ಮರಳುಗಾರಿಕೆ
4. ಬಿಡಿಎ (ಅರ್ಕಾವತಿ ಬಡಾವಣೆ) ಕಡತಗಳ ನಾಪತ್ತೆ
5. ಕೇಂದ್ರದಿಂದ ಬಂದ ಅನುದಾನವನ್ನು ಸರಿಯಾಗಿ ಬಳಸದೇ ಇರುವ ಆರೋಪ
6. ಶಿಕ್ಷಣ ಇಲಾಖೆಯ ಕಾರ್ಯವೈಖರಿ
7. ವಕ್ಫ್ ಆಸ್ತಿಗಳಿಗೆ ಸಂಬಂಧಿಸಿದ ಕಡತಗಳ ನಾಪತ್ತೆ

English summary
19 days extended Karnataka Assembly Budget session starting from July 4. All the three parties facing dissident activities, but CM Siddaramaiah may succeeded in the session.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X