Karnataka's Ancient Temples: ಕರ್ನಾಟಕದ ಐತಿಹಾಸಿಕ ದೇವಾಲಯಗಳ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಮಾಹಿತಿ, ವಿವರ
ಭಾರತದ ಶ್ರೀಮಂತ ಪರಂಪರೆಯಲ್ಲಿ ಕರ್ನಾಟಕದ ವಾಸ್ತುಶಿಲ್ಪಕ್ಕೆ ತನ್ನದೇ ಆದ ಮಹತ್ವವಿದೆ. ಈ ಅದ್ಭುತಗಳನ್ನು ಅನ್ವೇಷಿಸುವುದು ನಮಗೆಲ್ಲಾ ರೋಮಾಂಚನಕಾರಿ ಅನುಭವವನ್ನು ನೀಡುವುದು ಗ್ಯಾರಂಟಿ. ನಮ್ಮ ರಾಜ್ಯವು ಕೆಲವು ಅದ್ಭುತವಾದ ದೇವಾಲಯಗಳಿಗೆ ನೆಲೆಯಾಗಿದೆ. ಪ್ರತಿಯೊಂದು ದೇವಾಲಯವೂ ವಿಶಿಷ್ಟ ವಿನ್ಯಾಸಗಳನ್ನು ಹೊಂದಿವೆ. ತಮ್ಮದೇ ಆದ ಐತಿಹಾಸಿಕ ಮಹತ್ವವನ್ನು ಸಾರುತ್ತವೆ. ಹಾಗಾದರೆ ಬನ್ನಿ ಕರ್ನಾಟಕದ ಭವ್ಯ ಪರಂಪರೆಯ ಕೆತ್ತನೆ ಹಾಗೂ ಶಿಲಾಶಾಸನಗಳನ್ನು ಹೊಂದಿರುವ ಹೆಸರಾಂತ ದೇವಾಲಯಗಳ ಕುರಿತು ತಿಳಿಯೋಣ.
ಚೆನ್ನಕೇಶವ ದೇವಾಲಯ
ಬೇಲೂರಿನ ಚೆನ್ನಕೇಶವ ದೇವಾಲಯ ಹೊಯ್ಸಳರ ವಾಸ್ತುಶಿಲ್ಪಕ್ಕೆ ಒಂದು ಪ್ರಮುಖ ಉದಾಹರಣೆಯಾಗಿದೆ. 12ನೇ ಶತಮಾನದಲ್ಲಿ ನಿರ್ಮಿಸಲಾದ ಇದು ಅದ್ಬುತವಾದ ಕೆತ್ತನೆಗಳು ಮತ್ತು ಶಿಲ್ಪಗಳನ್ನು ಪ್ರದರ್ಶಿಸುತ್ತದೆ. ಈ ದೇವಾಲಯ ವಿಷ್ಣುವಿಗೆ ಸಮರ್ಪಿತವಾಗಿದೆ. ಪ್ರತಿ ವರ್ಷ ಹಲವಾರು ಪ್ರವಾಸಿಗರನ್ನು ಆಕರ್ಷಿಸುವ ಈ ಸುದರಂವಾದ ದೇವಸ್ಥಾನಕ್ಕೆ ದೇಶ ವಿದೇಶಗಳಿಂದ ಜನರು ಭೇಟಿ ನೀಡುತ್ತಾರೆ.

ವಿರೂಪಾಕ್ಷ ದೇವಸ್ಥಾನ
ಹಂಪಿಯಲ್ಲಿರುವ ವಿರೂಪಾಕ್ಷ ದೇವಾಲಯ 7ನೇ ಶತಮಾನದಷ್ಟು ಹಿಂದಿನದು. ಇದು ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಹಂಪಿಯಲ್ಲಿರುವ ಸ್ಮಾರಕಗಳ ಸಮೂಹದ ಭಾಗವಾಗಿದೆ. ಈ ದೇವಾಲಯ ಶಿವನಿಗೆ ಸಮರ್ಪಿತವಾಗಿದೆ. ಅಲ್ಲಿದೆ ಇಲ್ಲಿ ಆಕರ್ಷಕವಾದ ಗೋಪುರಗಳು ಮತ್ತು ಪ್ರಾಂಗಣಗಳನ್ನು ಕಣ್ತುಂಬಿಕೊಳ್ಳಬಹುದು.
ಕೇಶವ ದೇವಾಲಯ
ಸೋಮನಾಥಪುರದ ಕೇಶವ ದೇವಾಲಯ ಹೊಯ್ಸಳರ ಕಾಲದ ಪ್ರಮುಖ ದೇವಸ್ಥಾನಗಳಲ್ಲಿ ಒಂದಾಗಿದೆ. ಈ ದೇವಸ್ಥಾನವನ್ನು 13ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ಈ ದೇವಾಲಯದ ನಕ್ಷತ್ರಾಕಾರದ ವೇದಿಕೆ ಮತ್ತು ವಿಶಾಲವಾದ ಕಲಾಕೃತಿಗಳು ಜನರನ್ನು ಆಕರ್ಷಿಸುತ್ತವೆ. ಈ ದೇವಾಲಯ ವಿಷ್ಣು ದೇವರಿಗೆ ಸಮರ್ಪಿತವಾಗಿದೆ.

ಮುರುಡೇಶ್ವರ ದೇವಸ್ಥಾನ
ಭಟ್ಕಳದಲ್ಲಿರುವ ಮುರುಡೇಶ್ವರ ದೇವಾಲಯ ಭಾರತದ ಅತಿ ಎತ್ತರದ ಶಿವನ ಪ್ರತಿಮೆಗಳಲ್ಲಿ ಒಂದಾಗಿದೆ. ದೇವಾಲಯದ ಸಂಕೀರ್ಣದಲ್ಲಿ ಅರಬ್ಬಿ ಸಮುದ್ರದ ಅದ್ಬುತ ನೋಟವನ್ನು ಕಾಣಬಹುದು. ಇದು ದೇಶ ವಿದೇಶಗಳಿಂದ ಜನರನ್ನು ಆಕರ್ಷಿಸುತ್ತದೆ.
ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ
ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಉಡುಪಿ ಜಿಲ್ಲೆಯಲ್ಲಿದೆ. ಮೂಕಾಂಬಿಕಾ ದೇವಿಗೆ ಸಮರ್ಪಿತವಾಗಿರುವ ಇದು ದಕ್ಷಿಣ ಭಾರತದಾದ್ಯಂತದ ಭಕ್ತರಿಗೆ ಮಹತ್ವದ ಯಾತ್ರಾಸ್ಥಳವಾಗಿದೆ. ದೇವಾಲಯದ ಇತಿಹಾಸ 1,200 ವರ್ಷಗಳಷ್ಟು ಹಿಂದಿನದಾಗಿದ್ದು ಕರ್ನಾಟಕದ ಪ್ರಮುಖ ದೇವಸ್ಥಾನಗಳಲ್ಲಿ ಒಂದಾಗಿದೆ.
ಬಾದಾಮಿ ಗುಹಾಂತರ ದೇವಾಲಯಗಳು
ಬಾದಾಮಿ ಗುಹಾಂತರ ದೇವಾಲಯಗಳು ಬಂಡೆಗಳಿಂದ ಕೆತ್ತಿದ ದೇವಾಲಯಗಳಾಗಿವೆ. ಇದು 6ನೇ ಶತಮಾನದಷ್ಟು ಹಿಂದಿನದು. ಈ ಗುಹೆಗಳು ಸೊಗಸಾದ ಶಿಲ್ಪಗಳು ಮತ್ತು ಶಾಸನಗಳನ್ನು ಒಳಗೊಂಡಿವೆ. ಅವುಗಳನ್ನು ಶಿವ ಮತ್ತು ವಿಷ್ಣುವಿನಂತಹ ಹಿಂದೂ ದೇವತೆಗಳಿಗೆ ಸಮರ್ಪಿಸಲಾಗಿದೆ.
ಶ್ರೀ ರಂಗನಾಥಸ್ವಾಮಿ ದೇವಸ್ಥಾನ
ಶ್ರೀರಂಗಪಟ್ಟಣದ ಶ್ರೀ ರಂಗನಾಥಸ್ವಾಮಿ ದೇವಾಲಯ ಪ್ರಮುಖ ವೈಷ್ಣವ ಕ್ಷೇತ್ರವಾಗಿದೆ. ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲಿ ನಿರ್ಮಿಸಲಾದ ಇದು ಸರ್ಪ ದೇವರಾದ ಆದಿಶೇಷನ ಮೇಲೆ ಮಲಗಿರುವ ರಂಗನಾಥನ ವಿಗ್ರಹವನ್ನು ಹೊಂದಿದೆ.
ಕರ್ನಾಟಕದ ದೇವಾಲಯಗಳು ವೈವಿಧ್ಯಮಯ ವಾಸ್ತುಶಿಲ್ಪ ಶೈಲಿಗಳು ಮತ್ತು ಧಾರ್ಮಿಕ ಸಂಪ್ರದಾಯಗಳನ್ನು ಪ್ರತಿಬಿಂಬಿಸುತ್ತವೆ. ಪ್ರತಿಯೊಂದು ದೇವಸ್ಥಾನಗಳು ಇತಿಹಾಸವನ್ನು ತಿಳಿಯ ಬಯಸುವ ಉತ್ಸಾಹಿಗಳಿಗೆ ಮತ್ತು ಆಧ್ಯಾತ್ಮಿಕ ಅನ್ವೇಷಕರಿಗೆ ವಿಶಿಷ್ಟವಾದ ಅನುಭವವನ್ನು ನೀಡುತ್ತದೆ.












Click it and Unblock the Notifications