ಯಡಿಯೂರಪ್ಪ ಪುತ್ರ ವಿಜಯೇಂದ್ರ ಪ್ರಧಾನಿ ಮೋದಿ ಅವರ ಜೊತೆಗೆ ಫೋಟೋ ತೆಗೆಸಿಕೊಂಡು ಹೇಳಿದ್ದೇನು?
ಕರ್ನಾಟಕ ರಾಜಕೀಯ ಅಖಾಡದಲ್ಲಿ ಮತ್ತೊಮ್ಮೆ ಯಡಿಯೂರಪ್ಪ ಅವರ ಹೆಸರು ಸಖತ್ ಸೌಂಡ್ ಮಾಡುತ್ತಿದೆ. ಅದರಲ್ಲೂ ಸಿಎಂ ಸ್ಥಾನದಿಂದ ಕೆಳಗಿಳಿದ ಬಳಿಕ ಕರ್ನಾಟಕ ಬಿಜೆಪಿ ನಾಯಕತ್ವದ ಕೊರತೆ ಎದುರಿಸುತ್ತಿದೆ ಎಂಬ ಮಾತುಗಳು ಕೇಳಿಬಂದವು. ಹೀಗಿದ್ದಾಗ 2023ರ ವಿಧಾನಸಭೆ ಚುನಾವಣೆ ಬಿಜೆಪಿಯ ಹೀನಾಯ ಸೋಲಿಗೂ ಸಾಕ್ಷಿಯಾಗಿತ್ತು. ಹೀಗೆ, ಒಂದು ದೊಡ್ಡ ಸೋಲಿನ ಬಳಿಕ ಮತ್ತೆ ಬಿಜೆಪಿ ಕೇಂದ್ರ ನಾಯಕರು ಯಡಿಯೂರಪ್ಪ ಅವರಿಗೆ ಮಣೆ ಹಾಕಿದ್ದಾರೆ. ಇದೇ ವೇಳೆ ಲೋಕಸಭೆಯಲ್ಲಿ ಭರ್ಜರಿ ಗೆಲುವಿನ ಲೆಕ್ಕಾಚಾರವು ಶುರುವಾಗಿದೆ.
ಬಹುನಿರೀಕ್ಷಿತ ಭಾರತದ ಲೋಕಸಭಾ ಚುನಾವಣೆಗೆ ಇಂದು ಚುನಾವಣಾ ಆಯೋಗ ಡೇಟ್ ಫೈನಲ್ ಮಾಡಿದೆ. ಈ ಸಮಯದಲ್ಲೇ ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ಕರ್ನಾಟಕ ಬಿಜೆಪಿ ಅಧ್ಯಕ್ಷರಾಗಿ ಪಕ್ಷ ಸಂಘಟನೆ ಮಾಡುತ್ತಿರುವಾಗಲೇ, ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಕರ್ನಾಟಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈ ಮೂಲಕ ವಿರೋಧ ಪಕ್ಷದ ನಾಯಕರಿಗೆ ಖಡಕ್ ಸಂದೇಶ ರವಾನೆ ಆಗುವಾಗಲೇ, ಬಿ.ವೈ. ವಿಜಯೇಂದ್ರ ಅವರು ಈಗ 2024ರ ಲೋಕಸಭೆ ಚುನಾವಣೆ ಕುರಿತು ಮಾಡಿರುವ ಟ್ವೀಟ್ ಸಂಚಲನ ಸೃಷ್ಟಿ ಮಾಡುತ್ತಿದೆ.

ವಿಜಯೇಂದ್ರ ಹೇಳಿದ್ದು ಏನು?
ಯೆಸ್, ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗೆ ನಿಂತು ಫೋಟೋ ತೆಗೆಸಿಕೊಂಡಿರುವ ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ 'ವಿಜಯದ ಅಭಯಕ್ಕೆ ನಿಮ್ಮಾಶೀರ್ವಾದವೇ ಬಲ ಮತ್ತೊಮ್ಮೆ ಮೋದಿ ಸಂಕಲ್ಪ ಸಮಾವೇಶದಲ್ಲಿ ಭಾಗವಹಿಸಲು ಕಲಬುರಗಿಗೆ ಆಗಮಿಸಿದ ಹೆಮ್ಮೆಯ ಪ್ರಧಾನಿ ಶ್ರೀ @narendramodi ಜೀ ಅವರನ್ನು ಆತ್ಮೀಯವಾಗಿ ಸ್ವಾಗತಿಸಿ ಬರಮಾಡಿಕೊಳ್ಳಲಾಯಿತು. ಲೋಕಸಮರದಲ್ಲಿ ಪ್ರಚಂಡ ವಿಜಯ ಸಾಧಿಸುವ ನಿಟ್ಟಿನಲ್ಲಿ ಮೋದಿಜೀ ಅವರ ಕಲಬುರಗಿ ಭೇಟಿ ಕರ್ನಾಟಕದಲ್ಲಿ ಸಂಚಲನ ಸೃಷ್ಟಿಸಿ, ಕಾರ್ಯಕರ್ತರಲ್ಲಿನ ಉತ್ಸಾಹ ಇಮ್ಮಡಿಗೊಳಿಸಿದೆ.' ಎಂದು ಟ್ವೀಟ್ ಮಾಡಿದ್ದಾರೆ.
“ವಿಜಯದ ಅಭಯಕ್ಕೆ
— Vijayendra Yediyurappa (Modi Ka Parivar) (@BYVijayendra) March 16, 2024
ನಿಮ್ಮಾಶೀರ್ವಾದವೇ ಬಲ”
ಮತ್ತೊಮ್ಮೆ ಮೋದಿ ಸಂಕಲ್ಪ ಸಮಾವೇಶದಲ್ಲಿ ಭಾಗವಹಿಸಲು ಕಲಬುರಗಿಗೆ ಆಗಮಿಸಿದ ಹೆಮ್ಮೆಯ ಪ್ರಧಾನಿ ಶ್ರೀ @narendramodi ಜೀ ಅವರನ್ನು ಆತ್ಮೀಯವಾಗಿ ಸ್ವಾಗತಿಸಿ ಬರಮಾಡಿಕೊಳ್ಳಲಾಯಿತು. ಲೋಕಸಮರದಲ್ಲಿ ಪ್ರಚಂಡ ವಿಜಯ ಸಾಧಿಸುವ ನಿಟ್ಟಿನಲ್ಲಿ ಮೋದಿಜೀ ಅವರ ಕಲಬುರಗಿ ಭೇಟಿ ಕರ್ನಾಟಕದಲ್ಲಿ ಸಂಚಲನ ಸೃಷ್ಟಿಸಿ,… pic.twitter.com/PmwBW18Loo
400 ಕ್ಷೇತ್ರಗಳನ್ನು ಗೆಲ್ಲುವ ಗುರಿ!
ಹಾಗೇ ಮತ್ತೊಂದು ಟ್ವೀಟ್ ಮೂಲಕ, '"100% ಮತದಾನ ವಿಕಸಿತ ಭಾರತಕ್ಕೆ ವರದಾನ" ಭಾರತ ಗೆಲ್ಲಿಸುವ ಲೋಕಸಮರದ ದಿನಾಂಕ ನಿಗದಿಯಾಗಿದ್ದು, ದೇಶಾದ್ಯಂತ 7 ಹಂತಗಳಲ್ಲಿ ಹಾಗೂ ರಾಜ್ಯದಲ್ಲಿ 2 ಹಂತಗಳಲ್ಲಿ ನಡೆಯುವ ಚುನಾವಣೆಯು, ಏಪ್ರಿಲ್ 26 ರಂದು ಮೊದಲ ಹಂತದಲ್ಲಿ 14 ಕ್ಷೇತ್ರಗಳು ಹಾಗೂ ಮೇ 7 ರಂದು 2 ನೇ ಹಂತದಲ್ಲಿ 14 ಜಿಲ್ಲೆಗಳಲ್ಲಿ ನಡೆಯಲಿದೆ. ಇಂದಿನಿಂದಲೇ ಮತ್ತೊಮ್ಮೆ ಮೋದಿ ಜೀ ಅವರ ಸರ್ಕಾರ ಅಧಿಕಾರಕ್ಕೆ ತಂದು ಭಾರತ ಗೆಲ್ಲಿಸಲು ಸಜ್ಜಾಗೋಣ. ಜೂನ್ 4 ಮತ ಎಣಿಕೆಯ ದಿನ ದೇಶದಲ್ಲಿ 400 ಹಾಗೂ ರಾಜ್ಯದಲ್ಲಿ 28ರ ಗುರಿ ತಲುಪೋಣ.' ಅಂತಾ ಟ್ವೀಟ್ ಮಾಡಿದ್ದಾರೆ ಕರ್ನಾಟಕ ಬಿಜೆಪಿಯ ಅಧ್ಯಕ್ಷರಾದ ಬಿ.ವೈ. ವಿಜಯೇಂದ್ರ ಅವರು.
"100% ಮತದಾನ
— Vijayendra Yediyurappa (Modi Ka Parivar) (@BYVijayendra) March 16, 2024
ವಿಕಸಿತ ಭಾರತಕ್ಕೆ ವರದಾನ"
ಭಾರತ ಗೆಲ್ಲಿಸುವ ಲೋಕಸಮರದ ದಿನಾಂಕ ನಿಗದಿಯಾಗಿದ್ದು, ದೇಶಾದ್ಯಂತ 7 ಹಂತಗಳಲ್ಲಿ ಹಾಗೂ ರಾಜ್ಯದಲ್ಲಿ 2 ಹಂತಗಳಲ್ಲಿ ನಡೆಯುವ ಚುನಾವಣೆಯು, ಏಪ್ರಿಲ್ 26 ರಂದು ಮೊದಲ ಹಂತದಲ್ಲಿ 14 ಕ್ಷೇತ್ರಗಳು ಹಾಗೂ ಮೇ 7 ರಂದು 2 ನೇ ಹಂತದಲ್ಲಿ 14 ಜಿಲ್ಲೆಗಳಲ್ಲಿ ನಡೆಯಲಿದೆ. ಇಂದಿನಿಂದಲೇ ಮತ್ತೊಮ್ಮೆ ಮೋದಿ ಜೀ… pic.twitter.com/a6kSGOkE3x
ಈಗ, ಕಾಂಗ್ರೆಸ್ ವಿರುದ್ಧ ಕರ್ನಾಟಕದಲ್ಲಿ ಭರ್ಜರಿ ಗೆಲುವು ಸಾಧಿಸಲು ಬಿಜೆಪಿ ನಾಯಕರು ತಂತ್ರ ಹೂಡಿದ್ದಾರೆ. ಅದ್ರಲ್ಲೂ ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ಅವರು ನಾನಾ ರಣತಂತ್ರ ಹೆಣೆದು, ಬಿಜೆಪಿ ಗೆಲುವಿಗೆ ಆಕ್ಟಿವ್ ಆಗಿದ್ದಾರೆ. ಹಾಗೇ ಇದೇ ಸಮಯದಲ್ಲಿ ಕಾಂಗ್ರೆಸ್ ನಾಯಕರು ಕೂಡ ಪ್ರತಿತಂತ್ರವನ್ನ ಹೂಡುತ್ತಿದ್ದು, ಲೋಕಸಭೆ ಅಖಾಡ ಯಾರಿಗೆ ಜಯ ತಂದುಕೊಡುತ್ತೆ? ಅನ್ನೋದನ್ನ ಕಾದು ನೋಡಬೇಕಿದೆ.












Click it and Unblock the Notifications