‘ಬರೀ ಭ್ರಷ್ಟಾಚಾರ ಹಾಗೂ ಅರಾಜಕತೆಯ ಸದ್ದು, ರಾಜ್ಯದ ಆರೂವರೆ ಕೋಟಿ ಕನ್ನಡಿಗರಿಗೆ..’
ಲೋಕಸಭೆ ಚುನಾವಣೆಗೆ ಅಖಾಡ ಸಜ್ಜಾದ ಸಮಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಜಗಳ ಕೂಡ ಬಲು ಜೋರಾಗುತ್ತಿದೆ. ಪಂಚರಾಜ್ಯ ಚುನಾವಣೆ ಅಖಾಡದಲ್ಲಿ ಬಿಜೆಪಿಗೆ ಭರ್ಜರಿ ಗೆಲುವು ಸಿಕ್ಕ ಬಳಿಕ ರಾಜ್ಯದಲ್ಲಿ ಬಿಜೆಪಿ ನಾಯಕರಿಗೆ ಮತ್ತಷ್ಟು ಹುಮ್ಮಸ್ಸು ಬಂದಿದೆ. ಇದೇ ಕಾರಣಕ್ಕೆ, ಕರ್ನಾಟಕದ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ತೀವ್ರಗೊಂಡಿದೆ. ಇದೇ ವೇಳೆ ಸದ್ಯ ಅಸ್ತಿತ್ವದಲ್ಲಿ ಇರುವ ಕಾಂಗ್ರೆಸ್ ಸರ್ಕಾರ ಕನ್ನಡಿಗರಿಗೆ ಅನ್ಯಾಯ ಮಾಡ್ತಿದೆ ಅಂತಾ ಬಿಜೆಪಿ ಆರೋಪ ಮಾಡಿದೆ.
ಸಿದ್ದರಾಮಯ್ಯ ಅವರ ಸರ್ಕಾರದ ವಿರುದ್ಧ ಕರ್ನಾಟಕ ಬಿಜೆಪಿ ನಾಯಕರು ನಿರಂತರವಾಗಿ ಗಂಭೀರ ಆರೋಪ ಹೊರಿಸುತ್ತಿದ್ದಾರೆ. ಅದರಲ್ಲೂ ಬಿಜೆಪಿ ಶಾಸಕ ಹಾಗೂ ಬಿಜೆಪಿ ಹಿರಿಯ ನಾಯಕ ಬಸನಗೌಡ ಪಾಟಿಲ್ ಯತ್ನಾಳ್, ಸಿಎಂ ಸಿದ್ದರಾಮಯ್ಯ ವಿರುದ್ಧ ಉಗ್ರ ಆರೋಪ ಮಾಡುತ್ತಿರುವ ಸಮಯದಲ್ಲಿ. ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಈಗ ಬಿಜೆಪಿಯು ಗಂಭೀರ ಆರೋಪ ಹೊರಿಸಿದೆ. ಹಾಗಾದರೆ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಬಗ್ಗೆ ಬಿಜೆಪಿ ಮಾಡುತ್ತಿರುವ ಆರೋಪ ಏನು? ಮುಂದೆ ಓದಿ.

'ಪ್ರತಿಭಟನಾ ನಿರತರನ್ನು ಹತ್ತಿಕ್ಕುತ್ತಿದೆ'
ಕಾಂಗ್ರೆಸ್ ಸರ್ಕಾರದ ವಿರುದ್ಧ ಟ್ವೀಟ್ ಮಾಡಿರುವ ಬಿಜೆಪಿ 'ರಾಜ್ಯದ @INCKarnataka ಸರ್ಕಾರದ ಈ ಆರು ತಿಂಗಳ ಆಡಳಿತದಲ್ಲಿ ಕೇಳಿದ್ದು ಬರೀ ಭ್ರಷ್ಟಾಚಾರ ಹಾಗೂ ಅರಾಜಕತೆಯ ಸದ್ದು. ರಾಜ್ಯದ ಆರೂವರೆ ಕೋಟಿ ಕನ್ನಡಿಗರಿಗೆ ಉಪದ್ರವ ನೀಡಲು ಸದಾ "ಸಿದ್ದ"ವಾಗಿರುವ #ATMSarkara ಕ್ಕೆ ರಾಜ್ಯದ ಜನತೆ ಸಾಲು ಸಾಲು ಪ್ರತಿಭಟನೆಗಳ ಮೂಲಕ ಪ್ರತಿರೋಧ ತೋರಿದ್ದಾರೆ. ಪ್ರತಿಭಟನಾ ನಿರತರ ಸಮಸ್ಯೆಗಳನ್ನು ಆಲಿಸುವ ಬದಲು ಕಾಂಗ್ರೆಸ್ ಸರ್ಕಾರ ಪ್ರತಿಭಟನಾ ನಿರತರನ್ನು ಹತ್ತಿಕ್ಕುತ್ತಿದೆ. ಬೆಳಗಾವಿಯ ಸುವರ್ಣ ಸೌಧದ ಬಳಿ ಪೋಲಿಸಪ್ಪ ದರ್ಪದಿಂದ ಪ್ರತಿಭಟನಾಕಾರರ ವಿರುದ್ದ ತೊಡೆ ತಟ್ಟಿದ್ದೆ ಇದಕ್ಕೆ ಸಾಕ್ಷಿ.' ಎಂದಿದೆ ಬಿಜೆಪಿ.
ರಾಜ್ಯದ @INCKarnataka ಸರ್ಕಾರದ ಈ ಆರು ತಿಂಗಳ ಆಡಳಿತದಲ್ಲಿ ಕೇಳಿದ್ದು ಬರೀ ಭ್ರಷ್ಟಾಚಾರ ಹಾಗೂ ಅರಾಜಕತೆಯ ಸದ್ದು. ರಾಜ್ಯದ ಆರೂವರೆ ಕೋಟಿ ಕನ್ನಡಿಗರಿಗೆ ಉಪದ್ರವ ನೀಡಲು ಸದಾ “ಸಿದ್ದ”ವಾಗಿರುವ #ATMSarkara ಕ್ಕೆ ರಾಜ್ಯದ ಜನತೆ ಸಾಲು ಸಾಲು ಪ್ರತಿಭಟನೆಗಳ ಮೂಲಕ ಪ್ರತಿರೋಧ ತೋರಿದ್ದಾರೆ.
— BJP Karnataka (@BJP4Karnataka) December 9, 2023
ಪ್ರತಿಭಟನಾ ನಿರತರ ಸಮಸ್ಯೆಗಳನ್ನು ಆಲಿಸುವ ಬದಲು…
ಹಾಗೇ ತನ್ನ ಆರೋಪ ಮುಂದುವರಿಸಿರುವ ಕರ್ನಾಟಕ ಬಿಜೆಪಿ, 'ಬೆಳಗಾವಿಯ ಸುವರ್ಣಸೌಧದಲ್ಲಿ ಪ್ರತಿ ನಿತ್ಯ ಹೋರಾಟ, ಮುಷ್ಕರ, ಘೇರಾವ್, ಪ್ರತಿಭಟನೆಗಳು ನಿರಂತರವಾಗಿ ನಡೆಯುತ್ತಿರುವುದು, ಸರ್ಕಾರದ ದಯನೀಯ ಆಡಳಿತದ ವೈಫಲ್ಯ ಹಾಗೂ ಜನತೆಯಲ್ಲಿ ಸರ್ಕಾರದ ವಿರುದ್ಧ ಮಡುಗಟ್ಟಿರುವ ಆಡಳಿತ ವಿರೋಧಿ ಅಲೆಯ ಸುಸ್ಪಷ್ಟ ನಿದರ್ಶನ.' ಎಂದು ಹೊಸ ಆರೋಪದ ಬಾಂಬ್ ಸಿಡಿಸಿದೆ.

'ಸ್ಟಾಲಿನ್ ನಾಡಿಗೆ ಕಾವೇರಿಯನ್ನು..'
ತನ್ನ ಈ ಸರಣಿ ಟ್ವೀಟ್‌ನಲ್ಲಿ ಬಿಜೆಪಿ ಘಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಸಾಲು ಸಾಲು ಆರೋಪ ಮಾಡಿದ್ದು, 'ಸ್ಟಾಲಿನ್ ನಾಡಿಗೆ ಕಾವೇರಿಯನ್ನು ಬೇಕಾಬಿಟ್ಟಿಯಾಗಿ ಹರಿಬಿಟ್ಟು, ರಾಜ್ಯದ ರೈತರ ಅಧಃಪತನವನ್ನು ಆರಂಭಿಸಿದ ಸಿಎಂ @siddaramaiah ಹಾಗೂ ಡಿಸಿಎಂ @DKShivakumar ರವರಿಗೆ ಮೊದಲು ತಟ್ಟಿದ್ದೇ ಕಾವೇರಿ ನೀರು ಹೋರಾಟ ಸಮಿತಿಯ ಪ್ರತಿಭಟನೆ, ಬೆಂಗಳೂರು ಬಂದ್. ಆದರೆ ವೋಟಿಗಾಗಿ ಮೂರನ್ನೂ ಬಿಟ್ಟಿರುವ ಕಾಂಗ್ರೆಸ್ ಸರ್ಕಾರ ರಾಜ್ಯದ ರೈತರಿಗೆ ಮೇಲಿಂದ ಮೇಲೆ ಮಾಡಿದ್ದು ಬರೀ ಅನ್ಯಾಯ ಮಾತ್ರ.' ಎಂದಿದೆ.
'ಇನ್ನು ರಾಜ್ಯದ ಕೃಷಿ ಸಚಿವ ಎನಿಸಿಕೊಂಡ ಮಹಾನುಭಾವ @Chaluvarayaswam ಅವರು ಮಾತ್ರ ರಾಜ್ಯದ ರೈತರಿಗೆ ಬೆಳೆಗಳನ್ನೇ ಬೆಳೆಯಬೇಡಿ ಎಂದು ಆದೇಶಿಸುವಷ್ಟು ಸ್ಟಾಲಿನ್ ನಾಡಿನ ಗುಲಾಮಗಿರಿಯಲ್ಲಿ ಬದುಕುತ್ತಿದ್ದಾರೆ. ಇನ್ನು ಸಕ್ಕರೆ ಖಾತೆ ಸಚಿವ ಶಿವಾನಂದ ಪಾಟೀಲ್ ಅವರಿಗೆ ಕಬ್ಬು ಬೆಳೆಯುವ ರೈತರಿಗೆ ಸಿಹಿ ನೀಡುವ ಬದಲು, ಹೆಚ್ಚಿನ ಪರಿಹಾರದ ಹಣಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತೀರಾ ಎನ್ನುವಷ್ಟು ಅಹಂಕಾರ ಮತ್ತು ಮದ.' ಅಂತಾ ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಆರೋಪ ಮಾಡಿದೆ.
ಒಟ್ನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಫೈಟಿಂಗ್ ಜೋರಾಗಿದೆ. ಹೀಗೆ ಇನ್ನೂ ಕೆಲವು ತಿಂಗಳ ಕಾಲ ಈ ಜಗಳ ಮತ್ತಷ್ಟು ಜೋರಾಗುವ ಸಾಧ್ಯತೆ ಇದೆ. ಹೀಗಾಗಿ ಕಾಂಗ್ರೆಸ್ ಕೂಡ ಈ ಜಿದ್ದಾಜಿದ್ದಿನ ಅಖಾಡಕ್ಕೆ ಮತ್ತಷ್ಟು ಸಜ್ಜಾಗಿದೆ. ಎರಡೂ ಕಡೆ ಫೈಟಿಂಗ್ ಜೋರಾಗಿದೆ. ಮುಂದಿನ ಲೋಕಸಭೆ ಚುನಾವಣೆ ತನಕ ಈ ಕಿತ್ತಾಟ ನಿಲ್ಲುವಂತೆ ಕಾಣುತ್ತಿಲ್ಲ.












Click it and Unblock the Notifications